ಕೇತಗಾನಹಳ್ಳಿ ತೋಟದ ಮನೆಯಲ್ಲಿ ನಿಖಿಲ್- ರೇವತಿ ಮದುವೆ ತಯಾರಿ ಬಲು ಜೋರು!
ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ ಮದುವೆ ಕಾರ್ಯಕ್ರಮ ಮತ್ತೆ ರಾಮನಗರಕ್ಕೆ ಶಿಫ್ಟ್ ಆಗಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಏಪ್ರಿಲ್ 17ರಂದೇ ನಿಖಿಲ್ ಮದುವೆ ನಡೆಯಲಿದೆ. ರಾಮನಗರ ಹೊರವಲಯದ ಜನಪದ ಲೋಕದ ಬಳಿ ವಿವಾಹ ನಡೆಸಲು ಈ ಹಿಂದೆ ನಿಗದಿ ಮಾಡಲಾಗಿತ್ತು. ನಂತರ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಚ್ಡಿಕೆ ನಿವಾಸದಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಆದ್ರೀಗ ಬೆಂಗಳೂರು ರೆಡ್ ಜೋನ್ನಲ್ಲಿರುವ ಕಾರಣ ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿಯ ತೋಟದ ಮನೆಯಲ್ಲಿ […]
ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ ಮದುವೆ ಕಾರ್ಯಕ್ರಮ ಮತ್ತೆ ರಾಮನಗರಕ್ಕೆ ಶಿಫ್ಟ್ ಆಗಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಏಪ್ರಿಲ್ 17ರಂದೇ ನಿಖಿಲ್ ಮದುವೆ ನಡೆಯಲಿದೆ. ರಾಮನಗರ ಹೊರವಲಯದ ಜನಪದ ಲೋಕದ ಬಳಿ ವಿವಾಹ ನಡೆಸಲು ಈ ಹಿಂದೆ ನಿಗದಿ ಮಾಡಲಾಗಿತ್ತು. ನಂತರ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಚ್ಡಿಕೆ ನಿವಾಸದಲ್ಲಿ ಮದುವೆ ನಿಶ್ಚಯಿಸಲಾಗಿತ್ತು.
ಆದ್ರೀಗ ಬೆಂಗಳೂರು ರೆಡ್ ಜೋನ್ನಲ್ಲಿರುವ ಕಾರಣ ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿಯ ತೋಟದ ಮನೆಯಲ್ಲಿ ಸರಳವಾಗಿ ವಿವಾಹ ನೆರವೇರಲಿದೆ. ಮದುವೆಗೆ ಎರಡು ಕುಟುಂಬದವರು ಸೇರಿ 70 ರಿಂದ 100 ಜನ ಮಾತ್ರ ಭಾಗಿಯಾಗಲಿದ್ದಾರೆ. ಈಗಾಗಲೇ ತೋಟದ ಮನೆ ಬಳಿ ವಿವಾಹಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
Published On - 7:22 pm, Wed, 15 April 20