ಡ್ಯಾನ್ಸ್ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ (Chinni Prakash) ಅವರು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರಿಗೆ ಸಾಧಕರ ಸೀಟ್ ಮೇಲೆ ಕೂರುವ ಅವಕಾಶ ಸಿಕ್ಕಿದೆ. ಅವರು ತಮ್ಮ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ಚಿನ್ನಿ ಪ್ರಕಾಶ್ ಕೆಲಸ ಮಾಡಿದ್ದರು. ಆ ದಿನಗಳು ತುಂಬಾನೇ ವಿಶೇಷವಾಗಿದ್ದವು. ಈ ಎಲ್ಲಾ ವಿಚಾರಗಳ ಬಗ್ಗೆ ಚಿನ್ನಿ ಪ್ರಕಾಶ್ ‘ವೀಕೆಂಡ್ ವಿತ್ ರಮೇಶ್’ ವೇದಿಕೆ ಮೇಲೆ ಮಾತನಾಡಿದ್ದಾರೆ. ಇವರ ಎಪಿಸೋಡ್ ಶನಿವಾರ (ಮಾರ್ಚ್ 13) ಪ್ರಸಾರ ಆಗಲಿದೆ.
ಅಮಿತಾಭ್ ಬಚ್ಚನ್ ನಟನೆಯ ‘ಹಮ್’ ಸಿನಿಮಾ 1991ರಲ್ಲಿ ರಿಲೀಸ್ ಆಯಿತು. ಅಮಿತಾಭ್ ಬಚ್ಚನ್, ರಜನಿಕಾಂತ್, ಗೋವಿಂದ, ಶಿಲ್ಪಾ ಶಿರ್ಡೋರ್ಕರ್, ಅನುಪಮ್ ಖೇರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ‘ಹಮ್’ ಸಿನಿಮಾದ ‘ಜುಮ್ಮಾ ಚುಮ್ಮಾ ದೇ ದೇ..’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಕನ್ನಡದ ಚಿನ್ನಿ ಪ್ರಕಾಶ್. ಈ ಜರ್ನಿಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹೇಗಿತ್ತು ಅಂದಿನ ಮಲ್ಲೇಶ್ವರ? ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಎಳೆಎಳೆಯಾಗಿ ವಿವರಿಸಿದ ನಾ. ಸೋಮೇಶ್ವರ
1962ರಲ್ಲಿ ತೆರೆಗೆ ಬಂದ ‘ರಾಖಿ’ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ಅವರು ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡರು. 1991ರಲ್ಲಿ ಬಂದ ‘ಹಮ್’ ಚಿತ್ರದ ಹಾಡಿಗೆ ಅವರದ್ದೇ ಕೊರಿಯೋಗ್ರಫಿ ಇತ್ತು. ಈ ಹಾಡನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಈ ಬಗ್ಗೆ ಅವರು ‘ವೀಕೆಂಡ್ ವಿತ್ ಎಪಿಸೋಡ್’ನಲ್ಲಿ ಮಾತನಾಡಿದ್ದಾರೆ. ಈ ಪ್ರೋಮೋ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಅಂದುಕೊಂಡ ದಿನಾಂಕದಂದು ರಿಲೀಸ್ ಆಗಲ್ಲ ‘ಪ್ರಾಜೆಕ್ಟ್ ಕೆ’; ಇದಕ್ಕೆಲ್ಲ ಅಮಿತಾಭ್ ಬಚ್ಚನ್ ಕಾರಣ
‘ಬಾಲಿವುಡ್ ಬಿಗ್ ಬಿ ಅಮಿತಾಭ್ ಹೃದಯ ಗೆದ್ದ ಚಿನ್ನಿ ಮಾಸ್ಟರ್ ಯಶೋಗಾಥೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಶನಿವಾರ ರಾತ್ರಿ 9ಕ್ಕೆ’ ಎಂದು ಈ ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ಅಮಿತಾಭ್ ಬಚ್ಚನ್ ವಿಡಿಯೋ ಸಂದೇಶದ ಮೂಲಕ ಚಿನ್ನಿ ಮಾಸ್ಟರ್ನ ಹೊಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ