ಅಪರ್ಣಾಗೆ ಮದುವೆ ಮಾಡಬೇಡಿ ಎಂದು ಕೋರಿದ್ದ ನಿರ್ದೇಶಕ; ಚಿತ್ರರಂಗಕ್ಕೆ ಬರಲು ಕಾರಣವಾಗಿದ್ದು ಇದೇ ವ್ಯಕ್ತಿ  

|

Updated on: Jul 12, 2024 | 11:18 AM

ಅಪರ್ಣಾ ಹುಟ್ಟಿದ್ದು 1966ರಲ್ಲಿ. 1985ರಲ್ಲಿ ರಿಲೀಸ್ ಆದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಸಿನಿರಂಗಕ್ಕೆ ಅಪರ್ಣಾ ಕಾಲಿಟ್ಟರು. ಈ ಚಿತ್ರದಲ್ಲಿ ಅಂಬರೀಷ್ ಮೊದಲಾದವರು ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಅಪರ್ಣಾಗೆ ಜನಪ್ರಿಯತೆ ಸಿಕ್ಕಿತು.

ಅಪರ್ಣಾಗೆ ಮದುವೆ ಮಾಡಬೇಡಿ ಎಂದು ಕೋರಿದ್ದ ನಿರ್ದೇಶಕ; ಚಿತ್ರರಂಗಕ್ಕೆ ಬರಲು ಕಾರಣವಾಗಿದ್ದು ಇದೇ ವ್ಯಕ್ತಿ  
ಅಪರ್ಣಾ
Follow us on

ನಟಿ, ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್​ನಿಂದ ನಿಧನ ಹೊಂದಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಅವರಿಗೆ 58 ವರ್ಷ ತುಂಬುತ್ತಿತ್ತು. ಅಪರ್ಣಾ ಅವರು ಹಲವು ವರ್ಷಗಳ ಕಾಲ ಬದುಕಬೇಕು ಎನ್ನುವ ಆಸೆಯನ್ನು ಹೊಂದಿದ್ದರು. ಆದರೆ, ಆಸೆ ಈಡೇರಿಲಿಲ್ಲ. ಬಹುಬೇಗ ಅವರು ಇಹಲೋಕ ತ್ಯಜಿಸಿದ್ದಾರೆ. ಅಪರ್ಣಾ ಅವರು ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ಬಂದಿದ್ದೇ ಒಂದು ಅಚ್ಚರಿಯ ಘಟನೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಅಪರ್ಣಾ ಅವರ ತಂದೆಯ ಹೆಸರು ನಾರಾಯಣಸ್ವಾಮಿ. ಅವರು ಪತ್ರಿಕೆಯೊಂದರ ಪುರವಣಿಯಲ್ಲಿ ಸಂಪಾದಕರಾಗಿದ್ದರು. ನಾರಾಯಣಸ್ವಾಮಿ ಹಾಗೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಈ ಕಾರಣದಿಂದಲೇ ಅಪರ್ಣಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಪುಟ್ಟಣ್ಣ ಕಣಗಾಲ್ ಮುಂದಾದರು. ಆದರೆ, ಇದು ನಾರಾಯಣಸ್ವಾಮಿ ಅವರಿಗೆ ಸ್ವಲ್ಪವೂ ಇಷ್ಟ ಇರಲಿಲ್ಲ.

ಪುಟ್ಟಣ್ಣ ಅವರ ಒತ್ತಾಯಕ್ಕೆ ನಾರಾಯಣಸ್ವಾಮಿ ಮಣಿದರು. ಮಗಳನ್ನು ಚಿತ್ರರಂಗಕ್ಕೆ ಕಳುಹಿಸಲು ಒಪ್ಪಿದರು. ಪುಟ್ಟಣ ಕಣಗಾಲ್ ನಿರ್ದೇಶನದ, ಅಂಬರೀಷ್ ನಟನೆಯ ‘ಮಸಣದ ಹೂವು’ ಚಿತ್ರದಲ್ಲಿ ಅಪರ್ಣಾ ನಟಿಸಿದರು. ಅವರ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಪುಟ್ಟಣ್ಣ ನಿರ್ದೇಶನದ ಕೊನೆಯ ಸಿನಿಮಾ ಇದಾದರೆ, ಅಪರ್ಣಾ ನಟನೆಯ ಮೊದಲ ಚಿತ್ರವಿದು. ಪುಟ್ಟಣ್ಣ ಅವರಿಗೆ ಅಪರ್ಣಾ ಅವರ ಸಾಮರ್ಥ್ಯದ ಬಗ್ಗೆ ತಿಳಿದಿತ್ತು. ಈ ಕಾರಣದಿಂದಲೇ ‘ಮಗಳಿಗೆ ಮದುವೆ ಮಾಡಬೇಡಿ. ಅವಳು ನಟಿಯಾಗಿ ಮುಂದುವರಿಯಬೇಕು’ ಎಂದು ನಾರಾಯಣ ಸ್ವಾಮಿ ಅವರಿಗೆ ಪುಟ್ಟಣ್ಣ ಅವರು ಕೋರಿದ್ದರು.

ಇದನ್ನೂ ಓದಿ: ಹೇಗಿತ್ತು ನೋಡಿ ಅಪರ್ಣಾ ಕೊನೆಯ ದಿನಗಳು; ಕ್ಯಾನ್ಸರ್​ ಬಂದರೂ ನಗು ನಗುತ್ತಲೇ ಇದ್ದರು

ಆದರೆ, ನಾರಾಯಣ ಸ್ವಾಮಿ ಅವರಿಗೆ ಮಗಳನ್ನು ಚಿತ್ರರಂಗದಲ್ಲಿ ಮುಂದುವರಿಸುವ ಯಾವುದೇ ಆಸೆ ಇರಲಿಲ್ಲ. ಆದರೂ ಬಣ್ಣದ ಲೋಕ ಅಪರ್ಣಾ ಅವರನ್ನು ಬಿಡಲಿಲ್ಲ. ನಿರೂಪಕಿಯಾಗಿ, ಕಿರುತೆರೆಯ ನಟಿಯಾಗಿ, ಹಿರಿತೆರೆಯ ನಾಯಕಿಯಾಗಿ ಅವರು ಹಲವು ವರ್ಷಗಳ ಕಾಲ ಮಿಂಚಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.