ಅಂಬಾನಿ ಮಗನ ಮದುವೆಯಲ್ಲಿ ಯಶ್; ಹೇಗಿದೆ ನೋಡಿ ರಾಕಿಂಗ್ ಸ್ಟಾರ್ ಹೊಸ ಲುಕ್

Yash New Look: ಯಶ್ ಅವರು ಹೊಸ ಫೋಟೋದಲ್ಲಿ ತಲೆಕೂದಲನ್ನು ಶಾರ್ಟ್ ಮಾಡಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾದಲ್ಲಿ ಇದ್ದಷ್ಟು ಉದ್ದನೆಯ ಕೂದಲು ಅವರಿಗೆ ಈಗ ಇಲ್ಲ. ಅವರ ಗಡ್ಡ ಹಾಗೆಯೇ ಇದೆ. ಅವರ ಗಡ್ಡದ ಲುಕ್ ಸ್ವಲ್ಪ ಬದಲಾಗಿದೆ. ಅವರನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದು ‘ಟಾಕ್ಸಿಕ್’ ಸಿನಿಮಾ ಲುಕ್ ಎನ್ನಲಾಗಿದೆ.

ಅಂಬಾನಿ ಮಗನ ಮದುವೆಯಲ್ಲಿ ಯಶ್; ಹೇಗಿದೆ ನೋಡಿ ರಾಕಿಂಗ್ ಸ್ಟಾರ್ ಹೊಸ ಲುಕ್
ಹೊಸ ಲುಕ್​​ನಲ್ಲಿ ಯಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jul 12, 2024 | 2:50 PM

ನಟ ಯಶ್ ಅವರು ‘ಕೆಜಿಎಫ್ 2’ ಬಳಿಕ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಭರ್ಜರಿ ನಿರೀಕ್ಷೆ ಇದೆ. ಅವರು ಈ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ ಎನ್ನಲಾಗಿದೆ. ಯಶ್ ಅವರಿಗೂ ಮುಕೇಶ್ ಅಂಬಾನಿ ಮಗನ ಮದುವೆಗೆ ಆಮಂತ್ರಣ ಸಿಕ್ಕಿದೆ. ಹೀಗಾಗಿ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಕಾರ್ಯಕ್ರಮಕ್ಕೆ ಯಶ್ ತೆರಳಿದ್ದಾರೆ. ಈ ವೇಳೆ ಅವರ ‘ಟಾಕ್ಸಿಕ್’ ಸಿನಿಮಾ ಲುಕ್ ರಿವೀಲ್ ಆಗಿದೆ. ಹೊಸ ಹೇರ್​ಸ್ಟೈಲ್​ನಲ್ಲಿ ಯಶ್ ಗಮನ ಸೆಳೆದಿದ್ದಾರೆ.

ಯಶ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ದೇಶ-ವಿದೇಶದಲ್ಲಿ ಅವರಿಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾಗಳು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿತು. ಈ ಕಾರಣದಿಂದಲೇ ಯಶ್ ಅವರ ಜನಪ್ರಿಯತೆ ಹೆಚ್ಚಿತು. ಈ ಸಿನಿಮಾದಲ್ಲಿ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟುಕೊಂಡು ಯಶ್ ಗಮನ ಸೆಳೆದಿದ್ದರು. ಈಗ ಅವರು ಹೊಸ ಚಿತ್ರಕ್ಕಾಗಿ ಸ್ಟೈಲ್ ಬದಲಿಸಿಕೊಂಡಿದ್ದಾರೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಟೀಸರ್ ಈ ಮೊದಲು ಅನಾವರಣಗೊಂಡಿದೆ. ಈ ಟೀಸರ್ ನೋಡಿದ ಅನೇಕರಿಗೆ ಇದು ಡ್ರಗ್ಸ್ ಬಗ್ಗೆ ಇರೋ ಸಿನಿಮಾ ಅನ್ನೋದು ಗೊತ್ತಾಗಿದೆ. ಇದರಲ್ಲಿ ಭರ್ಜರಿ ಆ್ಯಕ್ಷನ್ ಕೂಡ ಇರಲಿದೆ ಎನ್ನಲಾಗಿತ್ತು. ಅನೇಕರಿಗೆ ಯಶ್ ಅವರ ಲುಕ್ ಹೇಗಿರಲಿದೆ ಎನ್ನುವ ಪ್ರಶ್ನೆ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ.

ಯಶ್ ಅವರು ತಲೆಕೂದಲನ್ನು ಶಾರ್ಟ್ ಮಾಡಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾದಲ್ಲಿ ಇದ್ದಷ್ಟು ಉದ್ದನೆಯ ಕೂದಲು ಇಲ್ಲ. ಅವರ ಗಡ್ಡ ಹಾಗೆಯೇ ಇದೆ. ಅವರ ಗಡ್ಡದ ಲುಕ್ ಸ್ವಲ್ಪ ಬದಲಾಗಿದೆ. ಅವರನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಯಶ್​ಗೆ ರಾಧಿಕಾ ಪಂಡಿತ್ ಕೂಡ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾಗೆ ‘ಕೆಜಿಎಫ್’ ಸೂತ್ರ ಪಾಲಿಸುವ ಯಶ್? ಕಥೆ ಬಗ್ಗೆ ಸಿಕ್ತು ಸುಳಿವು

‘ಟಾಕ್ಸಿಕ್’ ಸಿನಿಮಾದ ಪಾತ್ರವರ್ಗದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಅದು ನಿಜವಾಗಿಲ್ಲ. ಪಾತ್ರವರ್ಗದ ಬಗ್ಗೆ ತಂಡ ಗುಟ್ಟು ಕಾಯ್ದುಕೊಂಡಿದೆ. 2025ರ ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:49 pm, Fri, 12 July 24

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ