Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ಕುಮಾರ್​ಗೆ ರಜನಿಕಾಂತ್ ಜೊತೆ ಆಪ್ತತೆ ಬೆಳೆಯಲು ಕಾರಣವಾಯ್ತು ಆ ಘಟನೆ

ಶಿವರಾಜ್​ಕುಮಾರ್ ಅವರು ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರ ಮುಂದಿನ ಸಿನಿಮಾಗಳ ಪೋಸ್ಟರ್​-ಟೀಸರ್​ಗಳು ರಿಲೀಸ್ ಆಗುತ್ತಿವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಶಿವಣ್ಣ ನೀಡಿದ್ದಾರೆ. ಶಿವಣ್ಣ ಅವರಿಗೆ ರಜನಿಕಾಂತ್ ಜೊತೆ ಒಳ್ಳೆಯ ನಂಟಿದೆ. ಇದಕ್ಕೆ ಕಾರಣಗಳು ಹಲವು.

ಶಿವರಾಜ್​ಕುಮಾರ್​ಗೆ ರಜನಿಕಾಂತ್ ಜೊತೆ ಆಪ್ತತೆ ಬೆಳೆಯಲು ಕಾರಣವಾಯ್ತು ಆ ಘಟನೆ
ರಜನಿ-ಶಿವಣ್ಣ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 12, 2024 | 8:25 AM

ರಜನಿಕಾಂತ್ ಅವರು ಬೆಂಗಳೂರು ಮೂಲದವರು. ಅವರು ನಂತರ ತಮಿಳುನಾಡಿಗೆ ಹೋಗಿ ಸೆಟಲ್ ಆದರು. ಈಗ ಕಾಲಿವುಡ್​ನಲ್ಲಿ ಅವರು ಸೂಪರ್​ಸ್ಟಾರ್​. ಅವರಿಗೆ ಅಲ್ಲಿ ಸಾಕಷ್ಟು ಬೇಡಿಕೆ ಇದೆ. ವಯಸ್ಸು 70 ದಾಟಿದರೂ ಅವರು ಆ್ಯಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ರಜನಿಕಾಂತ್​ಗೆ ರಾಜ್​ಕುಮಾರ್ ಜೊತೆ ಒಳ್ಳೆಯ ನಂಟಿತ್ತು. ಈಗ ರಜನಿಕಾಂತ್ ಹಾಗೂ ಶಿವರಾಜ್​ಕುಮಾರ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಈಗಲೂ ಶಿವಣ್ಣ ಚೆನ್ನೈಗೆ ತೆರಳಿದರೆ, ರಜನಿ ಬೆಂಗಳೂರಿಗೆ ಬಂದರೆ ಪರಸ್ಪರ ಭೇಟಿ ಆಗುತ್ತಾರೆ. ಈ ಸಂಬಂಧ ಬಗ್ಗೆ ಶಿವಣ್ಣ ಮಾತನಾಡಿದ್ದರು.

ಶಿವಣ್ಣ ಅವರ ಫೇವರಿಟ್ ಹೀರೋ ಕಮಲ್ ಹಾಸನ್. ಆದರೆ, ಅವರ ಜೊತೆ ಸಿನಿಮಾ ಮಾಡೋ ಅವಕಾಶ ಶಿವರಾಜ್​ಕುಮಾರ್​ಗೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ‘ಫಿಲ್ಮ್ ಕಂಪ್ಯಾನಿಯನ್​’ಗೆ ನೀಡಿದ ಸಂದರ್ಶನದಲ್ಲಿ ಶಿವರಾಜ್​ಕುಮಾರ್ ಮಾತನಾಡಿದ್ದರು. ‘ಕಮಲ್ ಹಾಸನ್ ಜೊತೆ ಸಿನಿಮಾ ಮಾಡೋ ಆಸೆ ಇದೆ. ಅದೇ ರೀತಿ ರಜನಿ ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡ್ತೀನಿ. ನನಗೆ ರಜನಿಕಾಂತ್ ಜೊತೆ ಹತ್ತಿರದ ನಂಟಿದೆ. ಶಬರಿಮಲೆಗೆ ಹೋಗುವಾಗ ಒಟ್ಟಿಗೆ ಹೋಗಿದ್ದೆವು. ಅಪ್ಪಾಜಿ ಜೊತೆ ರಜನಿಕಾಂತ್ ತುಂಬಾನೇ ಸಮಯ ಕಳೆದಿದ್ದರು. ಯಾವಾಗಲೂ ನಾವು ರಜನಿಕಾಂತ್ ಮನೆಗೆ ಊಟಕ್ಕೆ ಹೋಗುತ್ತಿದ್ದೆವು. ವೀರಪ್ಪನ ಘಟನೆ ಆದಾಗ ರಜನಿಕಾಂತ್ ನಮಗೆ ಕಾಲ್ ಮಾಡಿ ಮಾತನಾಡುತ್ತಾ ಇದ್ದರು. ತುಂಬಾನೇ ಮಾರಲ್ ಸಪೋರ್ಟ್ ನೀಡಿದ್ದಾರೆ. ಅವರ ಜೊತೆ ನಟಿಸೋ ಆಫರ್ ಬಂದಾಗ ನೋ ಎನ್ನೋಕೆ ಆಗಿಲ್ಲ’ ಎಂದಿದ್ದರು ಶಿವರಾಜ್​ಕುಮಾರ್.

ಕಳೆದ ವರ್ಷ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಕೂಡ ಪ್ರಮುಖ ಪಾತ್ರ ಮಾಡಿದ್ದರು. ಅವರು ಮಾಡಿದ ಪಾತ್ರದಿಂದ ಇಡೀ ಸಿನಿಮಾಗೆ ಬೇರೆಯದೇ ಕಳೆ ಬಂದಿತ್ತು. ಶಿವಣ್ಣ ಹಾಗೂ ರಜನಿಕಾಂತ್ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿತ್ತು.

ಇದನ್ನೂ ಓದಿ: ಹೇಗಿರುತ್ತೆ ಶಿವರಾಜ್​ಕುಮಾರ್ ದಿನಚರಿ? 62ನೇ ವಯಸ್ಸಿನಲ್ಲೂ ಫಿಟ್ ಆಗಿರೋದರ ಹಿಂದಿನ ಗುಟ್ಟಿದು

ರಜನಿಕಾಂತ್ ಹಾಗೂ ರಾಜ್​ಕುಮಾರ್ ಜೊತೆಗಿನ ನಂಟಿನ ಬಗ್ಗೆಯೂ ಶಿವರಾಜ್​ಕುಮಾರ್ ಮಾತನಾಡಿದ್ದರು. ‘ಬೆಂಗಳೂರಿಗೆ ಬಂದಾಗ ರಜನಿ ಹಾಗೂ ಅಪ್ಪಾಜಿ ಒಟ್ಟಾಗಿ ವಾಕ್ ಹೋಗುತ್ತಾ ಇದ್ದರು, ಊಟ ಮಾಡುತ್ತಾ ಇದ್ದರು. ರಜನಿ ಅವರು ಅಣ್ಣಾವ್ರ ಫ್ಯಾನ್ ಆಗಿದ್ದರು. ಇಬ್ಬರೂ ಜಾಲಿ ಆಗಿ ಇರುತ್ತಿದ್ದರು’ ಎಂದಿದ್ದರು ಶಿವರಾಜ್​ಕುಮಾರ್. ರಜನಿಕಾಂತ್ ಮಾಜಿ ಅಳಿಯ ಧನುಷ್ ಅವರನ್ನು ಕಂಡರೂ ಶಿವಣ್ಣನಿಗೆ ವಿಶೇಷ ಪ್ರೀತಿ ಇದೆ. ‘ನಾನು ಮೊದಲಿನಿಂದಲೂ ಧನುಷ್ ಅವರನ್ನು ನೊಡುತ್ತಿದ್ದೆ. ಅವರನ್ನು ನೋಡಿದಾಗ ಬ್ರೂಸ್ಲಿ ನೋಡಿದಂತಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ನನ್ನ ನೋಡಿದಂತೆ ಆಗುತ್ತದೆ’ ಎಂದಿದ್ದರು ಶಿವಣ್ಣ. ಶಿವಣ್ಣ ಇತ್ತೀಚೆಗೆ ತಮಿಳು ಸಿನಿಮಾ ಮಾಡುತ್ತಿದ್ದಾರೆ. ಅಲ್ಲಿ ಹೋಗಿ ಹೆಸರು ಮಾಡಬೇಕು ಎನ್ನುವ ಆಸೆ ಅವರಿಗೆ ಇಲ್ಲ. ಅಲ್ಲಿ ಒಂದು ಜರ್ನಿ ಮಾಡಬೇಕು ಎಂಬುದಷ್ಟೇ ಅವರ ಆಸೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್