ಹೇಗಿರುತ್ತೆ ಶಿವರಾಜ್​ಕುಮಾರ್ ದಿನಚರಿ? 62ನೇ ವಯಸ್ಸಿನಲ್ಲೂ ಫಿಟ್ ಆಗಿರೋದರ ಹಿಂದಿನ ಗುಟ್ಟಿದು

ಶಿವರಾಜ್​ಕುಮಾರ್ ಈಗ 62ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಒಂದಾದಮೇಲೆ ಒಂದರಂತೆ ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಶಿವಣ್ಣ ಸಿನಿಮಾ ವಿಚಾರದಲ್ಲಿ ಎಂದಿಗೂ ಆಲಸ್ಯ ತೋರಿಸಿಲ್ಲ. ಶಿವರಾಜ್​ಕುಮಾರ್ ದಿನಚರಿ ಏನಿರುತ್ತದೆ? ಹೇಗಿರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹೇಗಿರುತ್ತೆ ಶಿವರಾಜ್​ಕುಮಾರ್ ದಿನಚರಿ? 62ನೇ ವಯಸ್ಸಿನಲ್ಲೂ ಫಿಟ್ ಆಗಿರೋದರ ಹಿಂದಿನ ಗುಟ್ಟಿದು
ಶಿವರಾಜ್​ಕುಮಾರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 12, 2024 | 7:30 AM

ಶಿವರಾಜ್​ಕುಮಾರ್ ಅವರು ಇಂದು (ಜುಲೈ 12) 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರ ಮುಂದಿನ ಸಿನಿಮಾಗಳ ಪೋಸ್ಟರ್​-ಟೀಸರ್​ಗಳು ರಿಲೀಸ್ ಆಗುತ್ತಿವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಶಿವಣ್ಣ ನೀಡಿದ್ದಾರೆ. 62ನೇ ವಯಸ್ಸಿನಲ್ಲೂ ಶಿವಣ್ಣ ಸಖತ್ ಫಿಟ್ ಆಗಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ದಿನಚರಿ. ಹಾಗಾದರೆ ಶಿವರಾಜ್​ಕುಮಾರ್ ದಿನಚರಿ ಏನಿರುತ್ತದೆ? ಹೇಗಿರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಶಿವರಾಜ್​ಕುಮಾರ್ ಅವರು ವಯಸ್ಸು 62 ಆದರೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರ ಬಳಿ ಹಲವು ಸಿನಿಮಾಗಳು ಇವೆ. ಒಂದಾದಮೇಲೆ ಒಂದರಂತೆ ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಶಿವಣ್ಣ ಸಿನಿಮಾ ವಿಚಾರದಲ್ಲಿ ಎಂದಿಗೂ ಆಲಸ್ಯ ತೋರಿಸಿಲ್ಲ. ಇತ್ತೀಚೆಗೆ ‘ಭೈರವನ ಕೊನೆ ಪಾಠ’ ಚಿತ್ರದ ಫೋಟೋಶೂಟ್​ಗಾಗಿ ಅವರು ಬೆಟ್ಟವೊಂದರ 400 ಮೆಟ್ಟಿಲು ಹತ್ತಿದ್ದರು. ಅವರ ದಿನಚರಿ ಹೇಗಿರುತ್ತದೆ? ಏನನ್ನು ತಿನ್ನುತ್ತಾರೆ ಎನ್ನುವ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದರು.

ಫಿಲ್ಮ್ ಕಂಪ್ಯಾನಿಯನ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಶಿವರಾಜ್​ಕುಮಾರ್, ‘ಬೆಳಿಗ್ಗೆ ಹಣ್ಣುಗಳನ್ನು ತಿನ್ನುತ್ತೇನೆ. ಆ ಬಳಿಕ ಎಗ್​ವೈಟ್, ಜ್ಯೂಸ್. ಒಂದೊದು ದಿನ ಬ್ರೆಡ್ ಟೋಸ್ಟ್ ತಿನ್ನುತ್ತೇನೆ. ಇಲ್ಲ ಅಂದ್ರೆ ಬರೀ ಫ್ರುಟ್ಸ್ ಹಾಗೂ ಎಗ್​ ವೈಟ್ಸ್​. ಮಧ್ಯಾಹ್ನ ಚಪಾತಿ, ಪುಲ್ಕಾ ಇಲ್ಲವೇ ರಾಗಿ ರೊಟ್ಟಿ, ಸಬ್ಜಿಗೆ ಒಂದು ದಾಲ್. ಸಂಜೆ ಇಡ್ಲಿ ಅಥವಾ ದೋಸೆ ತಿನ್ನುತ್ತೇನೆ. ಭಾನುವಾರ ಮಾತ್ರ ರೈಸ್. ಉಳಿದ ದಿನ ಅನ್ನ ತಿನ್ನಲ್ಲ’ ಎಂದು ಆಹಾರ ಕ್ರಮದ ಬಗ್ಗೆ ಅವರು ಮಾಹಿತಿ ನೀಡಿದ್ದರು.

‘ಒಂದು ದಿನ ವ್ಯಾಯಾಮ ಬಿಟ್ಟರೂ ಬೇಸರ ಆಗುತ್ತದೆ. ಮುಂಜಾನೆ ಐದೂವರೆಗೆ ಏಳುತ್ತೇನೆ. 6 ಗಂಟೆಗೆ ವಾಕ್ ಸ್ಟಾರ್ಟ್ ಮಾಡುತ್ತೇನೆ. ಒಂದು ಗಂಟೆಯಲ್ಲಿ 9 ಕಿ.ಮೀ ವಾಕ್ ಮಾಡುತ್ತೇನೆ. ಆ ಬಳಿಕ ಅರ್ಧ ಗಂಟೆ ಸ್ಟ್ರೆಚ್ ಮಾಡುತ್ತೇನೆ. ಲೇಟ್ ಆಗುತ್ತದೆ ಎಂದರೆ ಕಾರಿನಲ್ಲೇ ತಿನ್ನುತ್ತೇನೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಈಗ ‘ಮಾಲೀಕ’; ಹೇಗಿದೆ ನೋಡಿ ‘ಉತ್ತರಕಾಂಡ’ ಲುಕ್

‘90ರ ದಶಕದಲ್ಲಿ ದೇಹದ ತೂಕ ಹೆಚ್ಚಾಗಿತ್ತು. ಆಗ ಈ ಬಗ್ಗೆ ನಮಗೆ ಅರಿವು ಇರಲಿಲ್ಲ. ಜೊತೆಗೆ ವರ್ಕೌಟ್ ಮಾಡಲು ಟೈಮ್ ಕೂಡ ಇರಲಿಲ್ಲ. ಜನ ನನ್ನ ನೋಡ್ತಾರೆ ಎನ್ನುವ ಓವರ್ ಕಾನ್ಫಿಡೆನ್ಸ್ ಇತ್ತು. ಆದರೆ, ಕೊಬ್ಬು ಇರಲಿಲ್ಲ. ಲುಕ್ಸ್  ಮ್ಯಾಟರ್ಸ್ ಅನ್ನೋದು ನನಗೆ ಆ ಬಳಿಕ ಅರಿವಾಯ್ತು ಆಯ್ತು. ಹೀಗಾಗಿ, ಜಾಗೃತನಾದೆ. ‘ಜನುಮದ ಜೋಡಿ’ ಬಳಿಕ ನಾನು ಬದಲಾದೆ’ ಎಂದಿದ್ದರು ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ