ಕೊರೊನಾ ವೈರಸ್ (CoronaVirus) ಮೂರನೆ ಅಲೆ (Covid 3rd Wave) ಕಾಣಿಸಿಕೊಂಡಿದೆ. ವಿಶ್ವಾದ್ಯಂತ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಕೊವಿಡ್ ಲಸಿಕೆ ನೀಡಿರುವುದರಿಂದ ಮೊದಲಿನಷ್ಟು ಸಾವು ಸಂಭವಿಸುತ್ತಿಲ್ಲ. ವೈರಸ್ ಮೊದಲಿನಷ್ಟು ಹಾನಿ ಮಾಡುತ್ತಿಲ್ಲ ಎಂಬುದು ಜನರಿಗೆ ಮನವರಿಕೆ ಆಗಿದೆ. ಆದರೆ, ಅನಿಶ್ಚಿತತೆ ಮುಂದುವರಿದಿದೆ. ವೀಕೆಂಡ್ ಕರ್ಫ್ಯೂ ಹಾಗೂ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ನಿಯಮದಿಂದ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಈಗಾಗಲೇ ದೊಡ್ಡ ಬಜೆಟ್ನ ಸಾಕಷ್ಟು ಸಿನಿಮಾಗಳು ರಿಲೀಸ್ ದಿನಾಂಕವನ್ನು ಮುಂದೂಡಿವೆ. ಹಾಗಾದರೆ, ‘ಕೆಜಿಎಫ್ 2’ ಚಿತ್ರದ (KGF Chapter 2) ಕಥೆ ಏನು? ಈ ಬಗ್ಗೆ ಯಶ್ (Yash) ಮಾತನಾಡಿದ್ದಾರೆ.
ಕಳೆದ ಜುಲೈ ತಿಂಗಳಲ್ಲೇ ‘ಕೆಜಿಎಫ್ 2’ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕವನ್ನು 8 ತಿಂಗಳು ಮುಂದೂಡಿತ್ತು ಚಿತ್ರತಂಡ. ಸಿನಿಮಾ ಕೆಲಸ ಬಹುತೇಕ ಪೂರ್ಣಗೊಂಡ ಹೊರತಾಗಿಯೂ ಸಿನಿಮಾ ರಿಲೀಸ್ ದಿನಾಂಕವನ್ನು ಇಷ್ಟು ದೂರಕ್ಕೆ ತಳ್ಳಿದ್ದೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಯಶ್ ಕಡೆಯಿಂದ ಉತ್ತರ ಸಿಕ್ಕಿದೆ. ಈ ರೀತಿಯ ಪರಿಸ್ಥಿತಿ ಬರಲಿದೆ ಎಂಬ ಅನುಮಾನ ಅವರಿಗೆ ಮೊದಲೇ ಇತ್ತು. ಈ ಕಾರಣಕ್ಕೆ ಏಪ್ರಿಲ್ ತಿಂಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಕೊವಿಡ್ ಮೂರನೇ ಅಲೆ ಶೀಘ್ರವೇ ಕಡಿಮೆ ಆಗಲಿದೆ ಎನ್ನುವ ಅಭಿಪ್ರಾಯ ಅವರದ್ದು.
‘ಶೀಘ್ರವೇ ಮೂರನೆ ಅಲೆ ಕಡಿಮೆ ಆಗಲಿದೆ. ತಜ್ಞರ ವರದಿ ಆಧರಿಸಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಸಿನಿಮಾ ರಿಲೀಸ್ ದಿನಾಂಕವನ್ನು 8 ತಿಂಗಳ ಕಾಲ ಮುಂದೂಡಿದ್ದು ಏಕೆ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ನಾವು ಈ ರೀತಿಯ ಪರಿಸ್ಥಿತಿ ಬರುತ್ತದೆ ಎಂದು ನಿರೀಕ್ಷಿಸಿದ್ದೆವು. ಹೀಗಾಗಿ, ಸೇಫ್ ರಿಲೀಸ್ ದಿನಾಂಕವನ್ನು ಆಯ್ಕೆ ಮಾಡಿಕೊಂಡೆವು’ ಎಂದು ಯಶ್ ಮಾಧ್ಯಮ ಒಂದರ ಸಂದರ್ಶನದಲ್ಲಿ ಹೇಳಿದ್ದಾರೆ.
‘ಕೆಜಿಎಫ್ 2’ ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಇತ್ತೀಚೆಗೆ ಯಶ್ ಬರ್ತ್ಡೇ ಪ್ರಯುಕ್ತ ‘ಕೆಜಿಎಫ್ 2’ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಈ ಪೋಸ್ಟರ್ನಲ್ಲಿ ರಿಲೀಸ್ ದಿನಾಂಕ ಏಪ್ರಿಲ್ 14 ಎಂದು ಬರೆಯಲಾಗಿತ್ತು. ಈ ಮೂಲಕ ಮೊದಲು ತಿಳಿಸಿದ ದಿನಾಂಕದಂದೇ ಬರುವ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್ ಲಿಪ್ ಲಾಕ್; ವೈರಲ್ ಆಯ್ತು ಫೋಟೋ, ವಿಡಿಯೋ
‘ಕೆಜಿಎಫ್ ಸಿನಿಮಾ ಕಥೆ ಆಧರಿಸಿಯೇ ‘ಪುಷ್ಪ’ ಚಿತ್ರ ರೆಡಿ ಆಯ್ತು’; ಹೋಲಿಕೆ ಮಾಡಿ ಕಿಡಿಕಾರಿದ ನೆಟ್ಟಿಗರು