ಲೋಹಿತಾಶ್ವ ಎಂದರೆ ಅಲ್ಪಾಯುಶಿ; ಪುನೀತ್​ ಹೆಸರು ಬದಲಾವಣೆಗೆ ಕಾರಣವಾಗಿತ್ತು ಈ ವಿಚಾರ

| Updated By: ರಾಜೇಶ್ ದುಗ್ಗುಮನೆ

Updated on: Oct 31, 2021 | 8:29 PM

ರಾಜ್​ಕುಮಾರ್​ ಅವರಿಗೆ ಮಗನಿಗೆ ಲೋಹಿತ್ ಎಂದು ಹೆಸರು ಇಡಬೇಕು ಅನಿಸಿದ್ದು ‘ಸತ್ಯ ಹರಿಶ್ಚಂದ್ರ' ಸಿನಿಮಾದಿಂದ. ಸತ್ಯ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿತಾಶ್ವ. ಈ ಹೆಸರು ರಾಜ್​ಕುಮಾರ್​ಗೆ ತುಂಬಾನೇ ಇಷ್ಟವಾಗಿತ್ತು.

ಲೋಹಿತಾಶ್ವ ಎಂದರೆ ಅಲ್ಪಾಯುಶಿ; ಪುನೀತ್​ ಹೆಸರು ಬದಲಾವಣೆಗೆ ಕಾರಣವಾಗಿತ್ತು ಈ ವಿಚಾರ
ಪುನೀತ್​ ರಾಜ್​ಕುಮಾರ್​
Follow us on

ಪುನೀತ್​ ರಾಜ್​ಕುಮಾರ್​ ಮೂಲ ಹೆಸರು ಲೋಹಿತ್​ ಎಂದಾಗಿತ್ತು. ಇದನ್ನು ರಾಜ್​ಕುಮಾರ್​ ಅವರು ಪುನೀತ್​ ಎಂದು ಬದಲಾಯಿಸಿದ್ದರು. ಇದಕ್ಕೆ ಬಹಳ ಮುಖ್ಯ ಕಾರಣವೂ ಇತ್ತು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ಇದನ್ನು ಕೇಳಿ ಸಾಕಷ್ಟು ಮಂದಿ ಅಚ್ಚರಿ ಹೊರ ಹಾಕಿದ್ದಾರೆ. ಲೋಹಿತಾಶ್ವ ಎಂದರೆ ಅಲ್ಪಾಯುಷಿ ಎಂಬರ್ಥ ಇದೆಯಂತೆ. ಈ ಕಾರಣಕ್ಕೆ ಡಾ. ರಾಜ್​ ಈ ಹೆಸರನ್ನು ಬದಲಿಸಿದ್ದರು.

ರಾಜ್​ಕುಮಾರ್​ ಅವರಿಗೆ ಮಗನಿಗೆ ಲೋಹಿತ್ ಎಂದು ಹೆಸರು ಇಡಬೇಕು ಅನಿಸಿದ್ದು ‘ಸತ್ಯ ಹರಿಶ್ಚಂದ್ರ’ ಸಿನಿಮಾದಿಂದ. ಸತ್ಯ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿತಾಶ್ವ. ಈ ಹೆಸರು ರಾಜ್​ಕುಮಾರ್​ಗೆ ತುಂಬಾನೇ ಇಷ್ಟವಾಗಿತ್ತು. ಈ ಕಾರಣಕ್ಕೆ ಎರಡನೇ ಮಗನಿಗೆ ಲೋಹಿತ್ ಎಂದು ಹೆಸರು ಇಟ್ಟಿದ್ದರು ಅಣ್ಣಾವ್ರು. ಸತ್ಯ ಹರಿಶ್ಚಂದ್ರನ ಮಗ ಲೋಹಿತಾಶ್ವ ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಈ ಕಾರಣಕ್ಕೆ ರಾಜ್​ಗೆ ಹೆಸರು ಬದಲಿಸಲು ಸೂಚಿಸಿದ್ದರು.

ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಬೇಕಾದ ಹಿರಿಯರೊಬ್ಬರು ಲೋಹಿತ್ ಎಂದು ಹೆಸರಿಟ್ಟ ಬಗ್ಗೆ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ, ಲೋಹಿತ್​ ಅನ್ನೋದು ಅಲ್ಪಾಯುಷಿಗೆ ಇರುವಂತಹ ಹೆಸರು. ಹೀಗಾಗಿ  ಪುನೀತ್ ಎಂದು ಬದಲಿಸಲು ಸೂಚಿಸಿದ್ದರು. ಆಗ ಲೋಹಿತ್ ಅನ್ನೋ ಹೆಸರನ್ನು ಅಣ್ಣಾವ್ರು ಬದಲಿಸಿದ್ದರು. ಈ ಬಗ್ಗೆ ಡಾ. ರಾಜ್ ಕುಟುಂಬದ ಸಂಬಂಧಿ, ನಟ, ಶಾಸಕ ಕುಮಾರ್ ಬಂಗಾರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಬಾಲನಟ ಆಗಿದ್ದಾಗಿನಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದರು. ಆ ದಿನಗಳಲ್ಲಿ ಅವರನ್ನು ಲೋಹಿತ್​ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಬಳಿಕ ಪುನೀತ್​ ರಾಜ್​ಕುಮಾರ್​ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು.  ಹೆಸರನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ನೀಡಿದ ಜಾಹೀರಾತಿನ ಪ್ರತಿ ವೈರಲ್​ ಆಗುತ್ತಿದೆ.

‘ಡಾ. ರಾಜ್​ಕುಮಾರ್​ ಉರುಫ್​ ಎಸ್​.ಪಿ. ಮುತ್ತುರಾಜ್​ ಆದ ನಾನು ನನ್ನ ಮಗ ಮಾಸ್ಟರ್​ ಲೋಹಿತ್​ ಹೆಸರನ್ನು ಇಂದಿನಿಂದ  ಅಂದರೆ ದಿನಾಂಕ 16-3-1985ರಂದು ಮಾಸ್ಟರ್​ ಪುನೀತ್​ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಎಸ್​.ಬಿ. ಚಂದ್ರಶೇಖರ್​ ಅವರ ಸಮಕ್ಷಮದಲ್ಲಿ ಪ್ರಮಾಣ ಪತ್ರ ಮಾಡಿಸಿರುತ್ತೇನೆ’ ಎಂದು ಜಾಹೀರಾತು ನೀಡಲಾಗಿತ್ತು.

ಇದನ್ನೂ ಓದಿ: ಪುನೀತ್​ ಸ್ಮರಣಾರ್ಥ ಸೋಮವಾರ ‘ರಾಜಕುಮಾರ’ ಸಿನಿಮಾ ಪ್ರದರ್ಶನ; ಅಭಿಮಾನಿಗಳಿಗೆ ಉಚಿತ ಪ್ರವೇಶ 

1985ರಲ್ಲಿ ಪುನೀತ್​​ ಹೆಸರು ಬದಲಾಯಿಸಿದ್ದಾಗ ನೀಡಿದ್ದ ಜಾಹೀರಾತು ವೈರಲ್​