‘ಓಮಿನಿ’ ಸಿನಿಮಾ ಟ್ರೇಲರ್​ ಬಿಡುಗಡೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ; ಏನು ಈ ಚಿತ್ರದ ವಿಶೇಷ?

Omni Kannada Movie Trailer: ‘ಓಮಿನಿ’ ಚಿತ್ರ ಆಗಸ್ಟ್ 19ರಂದು ಬಿಡುಗಡೆ ಆಗುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಂದ ಟ್ರೇಲರ್​ ಬಿಡುಗಡೆ ಮಾಡಿಸಿಕೊಂಡು ಚಿತ್ರತಂಡ ಖುಷಿಪಟ್ಟಿದೆ.

‘ಓಮಿನಿ’ ಸಿನಿಮಾ ಟ್ರೇಲರ್​ ಬಿಡುಗಡೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ; ಏನು ಈ ಚಿತ್ರದ ವಿಶೇಷ?
‘ಓಮಿನಿ’ ಚಿತ್ರದ ಟ್ರೇಲರ್​ ಲಾಂಚ್​
Edited By:

Updated on: Jul 17, 2022 | 5:53 PM

ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಅವರು ಆಗೊಮ್ಮೆ ಈಗೊಮ್ಮೆ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದುಂಟು. ಈಗ ಅವರು ‘ಓಮಿನಿ’ (Omni Kannada Movie) ಚಿತ್ರದ ಟ್ರೇಲರ್​ ಲಾಂಚ್​ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ರಾಜಕೀಯದ ಕಾರ್ಯದೊತ್ತಡದ ನಡುವೆ ಅವರು ಈ ಟ್ರೇಲರ್​ ಬಿಡುಗಡೆ ಇವೆಂಟ್​ಗೆ ಬಂದಿದ್ದಕ್ಕೆ ಕಾರಣ; ಹುಟ್ಟೂರಿನ ಮೇಲಿನ ಪ್ರೀತಿ. ಹೌದು, ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯವರು (Thirthahalli). ಈ ಸಿನಿಮಾದ ನಿರ್ದೇಶಕ ಮಂಜು ಹೆದ್ದೂರ್​ ಕೂಡ ಅದೇ ಭಾಗದವರು. ಆ ಕಾರಣದಿಂದ ‘ಓಮಿನಿ’ ಚಿತ್ರದ ಟ್ರೇಲರ್​ ಅನ್ನು ಆರಗ ಜ್ಞಾನೇಂದ್ರ ಅವರು ಬಿಡುಗಡೆ ಮಾಡಿಕೊಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್, ರವಿ ಸಿಂಗ್ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗಿ ಆಗಿ ಆಗಿದ್ದರು.

‘ತೀರ್ಥಹಳ್ಳಿ ಒಂದು ಸುಂದರವಾದ ಊರು. ಅಲ್ಲಿನ ಗಾಳಿ, ನೀರಿನಲ್ಲಿ ಅದ್ಭುತ ಶಕ್ತಿ ಇದೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಮುಂತಾದವರು ನಮ್ಮ ತಾಲ್ಲೂಕಿನವರು ಎನ್ನಲು ಹೆಮ್ಮೆ ಆಗುತ್ತದೆ. ‘ಓಮಿನಿ’ ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮ ಊರಿನವರು. ಇವರೆಲ್ಲಾ ಪ್ರೀತಿಯಿಂದ ಆಹ್ವಾನಿಸಿದ್ದಕ್ಕೆ ಇಲ್ಲಿಗೆ ಬಂದಿದ್ದೇನೆ. ಈ ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ಹೇಳಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.

‘ಈ ಸಿನಿಮಾ ಆಗಸ್ಟ್ 19ರಂದು ಬಿಡುಗಡೆ ಆಗುತ್ತಿದೆ. ಓಮಿನಿ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂದು ಅರ್ಥ. ಆದರೆ ಓಮಿನಿ ಕಾರ್ ಕೂಡ ನಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಟ್ರೇಲರ್ ಬಿಡುಗಡೆ ಸಮಾರಂಭ ನನ್ನ ಪಾಲಿಗೆ ತುಂಬ ಮಹತ್ವದ್ದು. ನಮ್ಮೂರಿನವರೇ ಆದ ಗೃಹ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನನ್ನ ಬಾಯಲ್ಲಿ ಪದಗಳೇ ಹೊರಡುತ್ತಿಲ್ಲ.‌ ಅವರು ಬಂದು ಹಾರೈಸಿರುವುದಕ್ಕೆ ತುಂಬ ಖುಷಿ ಆಗುತ್ತಿದೆ’ ಎಂದು ನಿರ್ದೇಶಕ ಮಂಜು ಹೆದ್ದೂರ್​ ಹೇಳಿದ್ದಾರೆ. ನಿರ್ದೇಶನ ಮಾಡುವುದರ ಜೊತೆಗೆ ಸಿನಿಮಾದಲ್ಲೊಂದು ಪಾತ್ರವನ್ನೂ ಅವರು ಮಾಡಿದ್ದಾರೆ.

ಇದನ್ನೂ ಓದಿ
‘ನಮ್ಮನೆ ಯುವರಾಣಿ’ ಮೀರಾ ಹೊಸ ಚಿತ್ರದ ಬಗ್ಗೆ ರಕ್ಷಿತ್​ ಶೆಟ್ಟಿ ನೀಡಿದ್ರು ಬ್ರೇಕಿಂಗ್​​ ನ್ಯೂಸ್​; ಇದಕ್ಕೆ ವಿಹಾನ್​ ಹೀರೋ
Yash: ‘ಹೋಗಲೇ, ಇವನೊಬ್ಬ ಬಾಕಿ ಇದ್ದ’: ಬ್ಯಾಡ್​ ಬಾಯ್​ ಎಂದು ಆರೋಪಿಸಿದ ಮಗನಿಗೆ ಯಶ್​ ಪ್ರೀತಿಯ ಆವಾಜ್​
ದೆಹಲಿಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಸುದೀಪ್ ಭೇಟಿ; ಇಲ್ಲಿವೆ ಫೋಟೋಗಳು
Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿನ ಪುನೀತ್​ ಪೋಟೋಗಳು; ‘ನಮ್ಮ ಬಾಸ್​ ಸೂಪರ್​’ ಎಂದ ಫ್ಯಾನ್ಸ್​

ಈ ಸಿನಿಮಾ ಮೂಲಕ ನಟ ಸಿದ್ದು ಮೂಲಿಮನಿ ಅವರು ಹೀರೋ ಪಟ್ಟಕ್ಕೆ ಏರಿದ್ದಾರೆ. ‘ಇದೊಂದು ವಿಭಿನ್ನ ಕಥೆಯ ಚಿತ್ರ. ಚಿತ್ರವೊಂದರಲ್ಲಿ ಚಿತ್ರವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಲವ್, ಸಸ್ಪೆನ್ಸ್, ಹಾರರ್ ಮುಂತಾದ ಅಂಶಗಳು ಇದರಲ್ಲಿದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌’ ಎಂದಿದ್ದಾರೆ ನಟ ಸಿದ್ದು ಮೂಲಿಮನಿ.

ಮಲೆನಾಡಿನವರಾದ ಅಶ್ವಿನಿ ಚಂದ್ರಶೇಖರ್ ಅವರು ‘ಓಮಿನಿ’ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್.ಆರ್. ಗ್ರೂಪ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಅರ್ಜುನ್ ರಾಮು ಸಂಗೀತ ನಿರ್ದೇಶನ, ಎಂ.ಬಿ. ಅಳ್ಳಿಕಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ಪೂಜಾ ಜನಾರ್ದನ, ಅಶ್ವಿನಿ ಚಂದ್ರಶೇಖರ್, ಭರತ್‌ ಬೋಪ್ಪಣ್ಣ, ಆಕಾಂಕ್ಷಾ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು ಮುಂತಾದವರು ‘ಓಮಿನಿ’ ಚಿತ್ರದಲ್ಲಿ ನಟಿಸಿದ್ದಾರೆ.

 

Published On - 5:53 pm, Sun, 17 July 22