AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಿಗಳ ಜತೆ ‘100’ ಸಿನಿಮಾ ನೋಡಿದ ಗೃಹ ಸಚಿವ ಆರಗ ಜ್ಞಾನೇಂದ್ರ; ಈ ಚಿತ್ರದಲ್ಲಿ ಏನಿದೆ ವಿಶೇಷ?

100 Kannada Movie: ‘100’ ಸಿನಿಮಾ ನೋಡಿದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಿರ್ಮಾಪಕ ರಮೇಶ್​ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದರು. ರಮೇಶ್​ ಅರವಿಂದ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ನ.19ರಂದು ಬಿಡುಗಡೆ ಆಗುತ್ತಿದೆ.

ಅಧಿಕಾರಿಗಳ ಜತೆ ‘100’ ಸಿನಿಮಾ ನೋಡಿದ ಗೃಹ ಸಚಿವ ಆರಗ ಜ್ಞಾನೇಂದ್ರ; ಈ ಚಿತ್ರದಲ್ಲಿ ಏನಿದೆ ವಿಶೇಷ?
‘100’ ಸಿನಿಮಾ ನೋಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
TV9 Web
| Updated By: ಮದನ್​ ಕುಮಾರ್​|

Updated on: Nov 17, 2021 | 9:01 PM

Share

ಖ್ಯಾತ ನಟ ರಮೇಶ್​ ಅರವಿಂದ್​ (Ramesh Aravind) ಅವರು ನಿರ್ದೇಶನ ಮಾಡಿ, ನಾಯಕನಾಗಿ ಅಭಿನಯಿಸಿರುವ ‘100’ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ. ನ.19ರಂದು ರಿಲೀಸ್​ ಆಗಲಿರುವ ಈ ಸಿನಿಮಾ ಹಲವು ಕಾರಣಗಳಿಗಾಗಿ ನಿರೀಕ್ಷೆ ಹುಟ್ಟುಹಾಕಿದೆ. ರಮೇಶ್​ ಜೊತೆ ರಚಿತಾ ರಾಮ್ (Rachita Ram)​, ಪೂರ್ಣಾ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿಶೇಷ ಏನೆಂದರೆ, ಈಗ ‘100’ ಸಿನಿಮಾವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಅವರು ವೀಕ್ಷಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ (ನ.17) ಅಧಿಕಾರಿಗಳ ಜೊತೆ ಕುಳಿತು ಅವರು ಸಿನಿಮಾ ನೋಡಿದ್ದಾರೆ. ಗೃಹ ಸಚಿವರು ವೀಕ್ಷಿಸಿದ್ದಾರೆ ಎಂದರೆ ಈ ಚಿತ್ರದಲ್ಲಿ ಏನಾದರೂ ವಿಶೇಷತೆ ಇರಲೇಬೇಕಲ್ಲವೇ? ಹೌದು, ಖಂಡಿತವಾಗಿಯೂ ಇದು ವಿಶೇಷ ಕಥಾಹಂದರ ಹೊಂದಿರುವ ಸಿನಿಮಾ. ಇಂದಿನ ಕಾಲಘಟ್ಟದಲ್ಲಿ ಅತಿ ಮುಖ್ಯವಾಗಿ ಚರ್ಚೆ ಆಗುತ್ತಿರುವ ಸೈಬರ್​ ಕ್ರೈಮ್​ ಕುರಿತು ‘100’ ಸಿನಿಮಾ (100 Kannada Movie) ಮೂಲಕ ಹೇಳಲಾಗಿದೆ. IAS ಅಧಿಕಾರಿ ಶಾಲಿನಿ​ ಹಾಗೂ ಸಿಐಡಿ ಅಧಿಕಾರಿಗಳು ಕೂಡ ಸಿನಿಮಾ ವೀಕ್ಷಿಸಿದ್ದಾರೆ.

ಸಿನಿಮಾ ನೋಡಿದ ಬಳಿಕ ಮಾತನಾಡಿದ ಆರಗ ಜ್ಞಾನೇಂದ್ರ ಅವರು ನಿರ್ಮಾಪಕ ರಮೇಶ್​ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದರು. ‘ಈ ಸಿನಿಮಾ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅಪರಾಧದ ಜಗತ್ತನ್ನು ಎಚ್ಚರಿಸುತ್ತದೆ. ಇಂಥ ಒಳ್ಳೆಯ ಸಿನಿಮಾ ನೀಡಿದ ನಿರ್ಮಾಪಕ ರಮೇಶ್​ ರೆಡ್ಡಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಕಲಾವಿದರಾದ ರಮೇಶ್​, ರಚಿತಾ ರಾಮ್​, ಪೂರ್ಣಾ ತುಂಬ ಚೆನ್ನಾಗಿ ನಟಿಸಿದ್ದಾರೆ’ ಎಂದು ಆರಗ ಜ್ಞಾನೇಂದ್ರ ಮೆಚ್ಚುಗೆ ಸೂಚಿಸಿದ್ದಾರೆ.

‘ಈ ಸಿನಿಮಾ ಕೇವಲ ಮನರಂಜನೆಗಾಗಿ ಮಾತ್ರವಲ್ಲ. ಜನರ ಕಣ್ಣು ತೆರೆಸಲು ಮತ್ತು ಅಪರಾಧಿ ಜಗತ್ತನ್ನು ನಿರ್ನಾಮ ಮಾಡಲಿಕ್ಕಾಗಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಸಿನಿಮಾ ಮಾಡಿದ್ದಾರೆ. ಇದನ್ನು ಎಲ್ಲರೂ ನೋಡಬೇಕು ಅಂತ ವಿನಂತಿ ಮಾಡಿಕೊಳ್ಳುತ್ತೇನೆ. ಪೊಲೀಸ್​ ಅಧಿಕಾರಿಗಳು ವಿಶೇಷವಾಗಿ ಈ ಚಿತ್ರವನ್ನು ಗಮನಿಸಿ ಅಂತ ವಿನಂತಿಸುತ್ತೇನೆ’ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶಾಲಿನಿ ರಜನೀಶ್ ಅವರಿಗೂ ‘100’ ಸಿನಿಮಾ ಇಷ್ಟವಾಗಿದೆ. ‘ನಮ್ಮ ಯುವಕ-ಯುವತಿಯರಿಗೆ ಇಂದು ತಂತ್ರಜ್ಞಾನ ಎಷ್ಟು ಅನುಕೂಲ ನೀಡುತ್ತದೆಯೋ ಅಷ್ಟೇ ಕೆಟ್ಟ ಪರಿಣಾಮವನ್ನೂ ಬೀರುತ್ತದೆ ಎಂಬ ಎಚ್ಚರಿಕೆಯನ್ನು ಈ ಸಿನಿಮಾದ ಮೂಲಕ ಹೇಳಲಾಗಿದೆ. ಈ ಚಿತ್ರದಿಂದ ಯುವ ಜನತೆ ಒಂದು ಪಾಠ ಕಲಿಯಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

‘100’ ಚಿತ್ರದಲ್ಲಿ ಸೈಬರ್​ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್​ ಅರವಿಂದ್​ ಕಸುಬುದಾರಿಕೆ

‘100’ ಚಿತ್ರದ ವಿಶೇಷವೇನು?; ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡ ರಮೇಶ್ ಅರವಿಂದ್

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!