‘ಟಾಕ್ಸಿಕ್’ ಸಿನಿಮಾದಲ್ಲಿ ಎರಡನೇ ನಾಯಕಿ ಅನ್ನೋ ವಿಚಾರ; ಖಡಕ್ ಆಗಿ ಉತ್ತರಿಸಿದ ನಟಿ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ ಸಿನಿಮಾಗೆ ಯಾರೆಲ್ಲ ನಾಯಕಿ ಎನ್ನುವ ವಿಚಾರ ಚರ್ಚೆ ಆಗಿತ್ತು. ‘ತಾರಾ ಸುತಾರಿಯಾ ಸಿನಿಮಾಗೆ ಎರಡನೇ ನಾಯಕಿ’ ಎಂದು ವರದಿ ಆಗಿತ್ತು. ಇದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.  

‘ಟಾಕ್ಸಿಕ್’ ಸಿನಿಮಾದಲ್ಲಿ ಎರಡನೇ ನಾಯಕಿ ಅನ್ನೋ ವಿಚಾರ; ಖಡಕ್ ಆಗಿ ಉತ್ತರಿಸಿದ ನಟಿ
ಟಾಕ್ಸಿಕ್ ಸಿನಿಮಾ
Edited By:

Updated on: Aug 08, 2024 | 11:30 AM

ತಾರಾ ಸುತಾರಿಯಾ ಅವರು ‘ಸ್ಟುಡೆಂಟ್ ಆಫ್ ದಿ ಇಯರ್ 2’, ‘ಏಕ್ ವಿಲನ್ ರಿಟರ್ನ್ಸ್​’ ಮೂಲಕ ಗಮನ ಸೆಳೆದವರು. ಅವರು ‘ಟಾಕ್ಸಿಕ್’ ಸಿನಿಮಾದ ಭಾಗ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ. ಅವರೇ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವರು ಮತ್ತೊಂದು ವಿಚಾರವನ್ನು ಒತ್ತಿ ಹೇಳಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಾಕಿದ್ದಾರೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಬೆಂಗಳೂರಿನ ಹೊರವಲಯದಲ್ಲಿ ಶೂಟಿಂಗ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಜಾಗದ ವಿಚಾರದಲ್ಲಿ ಕೇಸ್​​ ಹಾಕಲಾಗಿದೆ. ಈ ಮಧ್ಯೆ ಸಿನಿಮಾಗೆ ಯಾರೆಲ್ಲ ನಾಯಕಿ ಎನ್ನುವ ವಿಚಾರ ಚರ್ಚೆ ಆಗಿತ್ತು. ‘ತಾರಾ ಸುತಾರಿಯಾ ಸಿನಿಮಾಗೆ ಎರಡನೇ ನಾಯಕಿ’ ಎಂದು ವರದಿ ಆಗಿತ್ತು. ಇದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

‘ಇತ್ತೀಚೆಗೆ ಪ್ರಾಜೆಕ್ಟ್​ ಒಂದರ ಬಗ್ಗೆ ಬರೆಯಲಾದ ಆರ್ಟಿಕಲ್ ಸುಳ್ಳು. ನಾನು ಆ ವಿಚಾರವನ್ನು ಹಂಚಿಕೊಂಡಿಲ್ಲ. ಏನಾದರೂ ಹೇಳೊಕೆ ಇದ್ದರೆ ನಾನೇ ಅದನ್ನು ಶೇರ್ ಮಾಡುತ್ತೇನೆ. ವಿಶೇಷ ಸೂಚನೆ, ಇಲ್ಲಿ ಯಾರೂ ಎರಡನೆಯವರಲ್ಲ’ ಎಂದಿದ್ದಾರೆ ತಾರಾ. ಈ ಮೂಲಕ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ.

ಮಲಯಾಳಂನ ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ಶ್ರುತಿ ಹಾಸನ್ ಮೊದಲಾದವರು ನಟಿಸುತ್ತಾರೆ ಎಂದು ಸುದ್ದಿ ಆಗಿತ್ತು. ಆದರೆ, ಯಾವುದೂ ಅಧಿಕೃತ ಆಗಿಲ್ಲ.

ಇದನ್ನೂ ಓದಿ: ‘ರಾಕಿಂಗ್​ ಸ್ಟಾರ್​’ ಯಶ್​ ನಟನೆಯ ‘ಟಾಕ್ಸಿಕ್​’ ಸಿನಿಮಾದಲ್ಲಿ ಜನಪ್ರಿಯ ನಟಿಯರ ದಂಡು?

ಇತ್ತೀಚೆಗೆ ತಾರಾ ಸುತಾರಿಯಾ ಅವರು ‘ಅಪೂರ್ವ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸರ್ವೈಲ್ ಆ್ಯಕ್ಷನ್ ಡ್ರಾಮಾ ರೀತಿಯಲ್ಲಿ ಮೂಡಿ ಬಂದಿತ್ತು. ಅಭಿಷೇಕ್ ಬ್ಯಾನರ್ಜಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರಯ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:10 am, Sat, 27 July 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us