ನಿರ್ಮಾಪಕ ಸಂದೇಶ್ ಅವರ ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ನಲ್ಲಿರುವ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಇದಾದ ನಾಲ್ಕು ಗಂಟೆ ನಂತರದಲ್ಲಿ ಮತ್ತೆ ಅವರು ಸುದ್ದಿಗೋಷ್ಠಿ ಕರೆದು ಮಾತನಾಡಿದ್ದು, ‘ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ, ಸಾರ್ವಜನಿಕರಿಗೆ ಅನ್ಯಾಯವಾಗಬಾರದು ಅನ್ನೋದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.
‘ನನಗೆ ಯಾರ ಮೇಲೂ ದ್ವೇಷ ಇಲ್ಲ. ಸಾರ್ವಜನಿಕರಿಗೆ ಅನ್ಯಾಯ ಆಗಬಾರದು ಎನ್ನುವುದು ನನ್ನ ಉದ್ದೇಶ. ಇತ್ತೀಚೆಗೆ ಹಲವಾರು ಘಟನೆ ನಡೀತಾನೆ ಇದೆ. ಬಡವರಿಗೆ ಅನ್ಯಾಯ ಆಗ್ತಿದೆ. ಈ ದೃಷ್ಟಿಯಿಂದ ನಾನು ಮುಂದೆ ಬಂದಿದೀನಿ. ತಪ್ಪಾದಾಗ ತಪ್ಪು ಎಂದಿದೀನಿ. ನನ್ನನ್ನು ಯಾರೂ ಎತ್ತಿ ಕಟ್ಟಿಲ್ಲ. ತಪ್ಪು ಮಾಡಿದ ಸೆಲೆಬ್ರಿಟಿಗಳು ತಪ್ಪಿಸಿಕೊಳ್ಳಬಾರದು’ ಎಂದಿದ್ದಾರೆ ಅವರು.
‘ಈ ಘಟನೆಗೆ ಸಾಕ್ಷಿ ಸಾಕಷ್ಟಿದೆ. ಹೋಟೆಲ್ನಲ್ಲಿ ಸಿಸಿ ಟಿವಿ ಫೂಟೆಜ್ ಇಲ್ಲ ಎಂದು ಹೇಳುತ್ತಾರೆ. ಸರ್ಕಾರದ ನಿಯಮದ ಪ್ರಕಾರ ಹೋಟೆಲ್ನವರು 60 ದಿನದ ಸಿಸಿಟಿವಿ ದೃಶ್ಯಗಳನ್ನು ಇಟ್ಟುಕೊಳ್ಳಲೇಬೇಕು. ಆದರೆ, ಈ ಘಟನೆಯಲ್ಲಿ 10 ದಿನಕ್ಕೆ ಮಾಯವಾಗಿಬಿಡುತ್ತೆ ಎಂದರೆ ಏನಿದರ ಅರ್ಥ. ಜೂನ್ 24-25 ರಂದು ಲಾಕ್ಡೌನ್ ಇತ್ತು. ಆದಾಗ್ಯೂ ಪಾರ್ಟಿ ಮಾಡಿದ್ದಾರೆ. ಸಂದೇಶ್ ಹೋಟೆಲ್ನಲ್ಲಿ ಹೊಡೆದಿದ್ದು ಬಿಹಾರದವನಿಗಲ್ಲ. ಗಂಗಾಧರ ಎಂಬ ಕನ್ನಡಿಗನಿಗೆ. ಹಲ್ಲೆ ಬಳಿಕ ಗಂಗಾಧರನನ್ನು ಕೆಲಸದಿಂದ ತೆಗೆದಿದ್ದಾರೆ. ಗಂಗಾಧರ್ ಈಗ ಎಲ್ಲಿದ್ದಾನೆ ಎಂದು ತನಿಖೆ ಮಾಡಿಸಲಿ. ಅನ್ಯಾಯದ ಬಗ್ಗೆ ಗೃಹಸಚಿವರಿಗೆ ನಾನು ದೂರು ನೀಡಿದ್ದೇನೆ. ಸರ್ಪ್ರೈಸಿಂಗ್, ಶಾಕಿಂಗ್ ಘಟನೆಗಳು ಇನ್ನೂ ನನ್ನ ಬಳಿ ಇವೆ. ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಲಿ’ ಎಂದು ಇಂದ್ರಜಿತ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ಮನವಿಗೆ ಸ್ಪಂದಿಸಿದ ಗೃಹ ಸಚಿವ ಬೊಮ್ಮಾಯಿ; ತನಿಖೆಗೆ ಸೂಚನೆ
Darshan Press Meet: ಕಾಣದ ಕೈಗಳು ಕೆಲಸ ಮಾಡುತ್ತಿವೆ; ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಗರಂ
Published On - 3:36 pm, Thu, 15 July 21