ಅಂಬರೀಷ್​ ಮೇಲಿದ್ದ ಪ್ರೀತಿಯಿಂದ ಜನ ನನ್ನ ಆಯ್ಕೆ ಮಾಡಿದ್ದಾರೆ, ಅದನ್ನು ಉಳಿಸಿಕೊಂಡು ಹೋಗುತ್ತೇನೆ: ಸುಮಲತಾ ಅಂಬರೀಷ್

ಇಂದು (ಮೇ.29) ಅಂಬರೀಷ್​ 69ನೇ ಜನ್ಮದಿನ. ಈ ವಿಶೇಷ ದಿನದಂದು ಸುಮಲತಾ ಅಂಬರೀಷ್​ ಕಂಠೀರವ ಸ್ಟುಡಿಯೋಗೆ ತೆರಳಿ ಅಂಬರೀಷ್​ ಸಮಾಧಿಗೆ ನಮನ ಸಲ್ಲಿಸಿದರು.

ಅಂಬರೀಷ್​ ಮೇಲಿದ್ದ ಪ್ರೀತಿಯಿಂದ ಜನ ನನ್ನ ಆಯ್ಕೆ ಮಾಡಿದ್ದಾರೆ, ಅದನ್ನು ಉಳಿಸಿಕೊಂಡು ಹೋಗುತ್ತೇನೆ: ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್​ (ಸಂಗ್ರಹ ಚಿತ್ರ)
Edited By:

Updated on: May 29, 2021 | 3:39 PM

ಅಂಬರೀಷ್​ ಮಾಡಿರುವ ಕೆಲಸ ಮತ್ತು ಅವರ ಮೇಲಿರುವ ಪ್ರೀತಿಯಿಂದ ಜನರು ನನ್ನನ್ನು ಸಂಸದೆಯಾಗಿ ಆಯ್ಕೆ ಮಾಡಿದ್ದಾರೆ. ಆ ಪ್ರೀತಿ ಮತ್ತು ವಿಶ್ವಾಸವನ್ನು ನಾನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್​ ಹೇಳಿದ್ದಾರೆ.

ಇಂದು (ಮೇ.29) ಅಂಬರೀಷ್​ 69ನೇ ಜನ್ಮದಿನ. ಈ ವಿಶೇಷ ದಿನದಂದು ಸುಮಲತಾ ಅಂಬರೀಷ್​ ಕಂಠೀರವ ಸ್ಟುಡಿಯೋಗೆ ತೆರಳಿ ಅಂಬರೀಷ್​ ಸಮಾಧಿಗೆ ನಮನ ಸಲ್ಲಿಸಿದರು. ನಂತರ ಅಂಬರೀಷ್​ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನ ಕೆರೆ ಗ್ರಾಮಕ್ಕೆ ತೆರಳಿ ಅಲ್ಲಿ ಜನಪರ ಕೆಲಸ ಮಾಡಿದರು. ಈ ವೇಳೆ ಮಾತನಾಡಿದ ಸುಮಲತಾ, ‘ಅಂಬಿ ನಡೆದು ಬಂದ ದಾರಿ, ಅವರು ನಡೆದುಕೊಳ್ಳುತ್ತಿದ್ದ ಸ್ವಭಾವ, ಶತ್ರುಗಳು ಕಷ್ಟದಲ್ಲಿದ್ದಾಗ ನೆರವು ನೀಡುತ್ತಿದ್ದ ಗುಣ ಅಪರೂಪ. ಅದುವೇ ನನಗೆ ಸ್ಫೂರ್ತಿ, ಅದೇ ನನ್ನ ಶಕ್ತಿ’ ಎಂದಿದ್ದಾರೆ.

‘ಅಂಬರೀಷ್​ ಇದ್ದಾಗ ಜನ್ಮದಿನದಂದು ಕರ್ನಾಟಕದ ಮೂಲೆ ಮೂಲೆಯಿಂದಲೂ ಜನ ಬೆಂಗಳೂರಿನ ಮನೆ ಬಳಿಗೆ ಬರುತ್ತಿದ್ದರು. ಅವರು ತೀರಿ ಹೋದ ನಂತರ ಚುನಾವಣೆ ಸಮಯದಲ್ಲಿ ಪ್ರತೀ ವರ್ಷ ಅಂಬಿ ಹುಟ್ಟುಹಬ್ಬವನ್ನು ಮಂಡ್ಯದಲ್ಲೇ ಆಚರಿಸುತ್ತೇನೆ ಎಂದಿದ್ದೆ. ಅದೇ ರೀತಿ ಎರಡು ವರ್ಷಗಳಿಂದ ಮಂಡ್ಯದಲ್ಲೇ ಅವರ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಕೊವಿಡ್ ಇರುವುದರಿಂದ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸೋದು ಬೇಡ ಎಂದು ಮನವಿ ಮಾಡಿಕೊಂಡಿದ್ದೆ. ಆ ಮನವಿಗೆ ಅಭಿಮಾನಿಗಳು ಸ್ಪಂದಿಸಿದ್ದು, ಜನರಿಗೆ ಅವರ ಕೈಲಾದಷ್ಟು ಸಹಾಯವಾಗುವ ಕೆಲಸ ಮಾಡುತ್ತಿದ್ದಾರೆ’ ಎಂದು ಖುಷಿಪಟ್ಟರು.

’ಜನ ನನ್ನನ್ನು ಸಂಸದೆಯಾಗಿ ಆಯ್ಕೆ ಮಾಡಿದ್ದಾರೆ ಎಂದರೆ ಅಂಬರೀಷ್​ ಮಾಡಿರುವ ಕೆಲಸದಿಂದ‌. ಅವರ ಮೇಲಿನ ಪ್ರೀತಿಯಿಂದ. ಆ ಪ್ರೀತಿಯನ್ನು ನಾನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಅಂಬರೀಷ್ ಅವರಿಂದಲೇ ನಾನು’ ಎಂದು ಸುಮಲತಾ ಹೇಳಿದರು.

ಇದನ್ನೂ ಓದಿ: ಅಂಬರೀಷ್​ ಎಲ್ಲಿಯೂ ಹೋಗಿಲ್ಲ, ಅವರು ನಮ್ಮ ಜತೆಯೇ ಇದ್ದಾರೆ; ಸುಮಲತಾ ಭಾವುಕ ನುಡಿ

ಅಂಬರೀಶ್​ ಜನ್ಮದಿನ; ಕಂಠೀರವ ಸ್ಟುಡಿಯೋದಲ್ಲಿ ‘ರೆಬೆಲ್​ ಸ್ಟಾರ್​’ ಸಮಾಧಿಗೆ ಸುಮಲತಾ, ಅಭಿಷೇಕ್​ ಪೂಜೆ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us