‘ಇದು ಆಕಾಶವಾಣಿ ಬೆಂಗಳೂರು ನಿಲಯ’; ಡಿಫರೆಂಟ್​ ಶೀರ್ಷಿಕೆಯಲ್ಲಿ ಹೀಗೊಂದು ಕನ್ನಡ ಸಿನಿಮಾ

| Updated By: ಮದನ್​ ಕುಮಾರ್​

Updated on: Oct 08, 2021 | 9:58 AM

ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೂ ಈ ಸಿನಿಮಾ ಕಥೆಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಚಿತ್ರತಂಡ ಒತ್ತಿಹೇಳುತ್ತಿದೆ. ನಿಖಿತಾ ಸ್ವಾಮಿ ಮತ್ತು ರಣವೀರ್​ ಪಾಟೀಲ್ ಮುಖ್ಯಪಾತ್ರದಲ್ಲಿ ನಟಿಸಿದ್ದು, ಎಂ. ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ.

‘ಇದು ಆಕಾಶವಾಣಿ ಬೆಂಗಳೂರು ನಿಲಯ’; ಡಿಫರೆಂಟ್​ ಶೀರ್ಷಿಕೆಯಲ್ಲಿ ಹೀಗೊಂದು ಕನ್ನಡ ಸಿನಿಮಾ
‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರದ ಪೋಸ್ಟರ್​
Follow us on

ಡಿಫರೆಂಟ್​ ಶೀರ್ಷಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಥಟ್​ ಅಂತ ಗಮನ ಸೆಳೆಯುತ್ತವೆ. ಹಾಗಾಗಿ ಒಳ್ಳೆಯ ಟೈಟಲ್​ ಸಲುವಾಗಿ ನಿರ್ದೇಶಕರು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುತ್ತಾರೆ. ಸಿನಿಮಾ ಹೆಸರಿಗಾಗಿ ಜಗಳಗಳು ಆದ ಉದಾಹರಣೆ ಕೂಡ ಬಹಳಷ್ಟು ಇವೆ. ಅಂಥ ಯಾವುದೇ ಕಿರಿಕ್​ ಇಲ್ಲದೆಯೂ ಹೊಸಬರ ತಂಡಕ್ಕೆ ಒಂದು ಡಿಫರೆಂಟ್​ ಟೈಟಲ್​ ಸಿಕ್ಕಿದೆ. ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬಂದಿದೆ. ಇಂದು (ಅ.8) ಆ ಸಿನಿಮಾದ ಬಿಡುಗಡೆ. ಹಾರರ್​ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಿಖಿತಾ ಸ್ವಾಮಿ ಮತ್ತು ರಣವೀರ್​ ಪಾಟೀಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ಶೀರ್ಷಿಕೆ ಹೀಗಿದೆ ಎಂದಮಾತ್ರಕ್ಕೆ ಇದು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸಂಬಂಧಿಸಿದ ಕಥೆ ಅಂತ ಭಾವಿಸುವಂತಿಲ್ಲ. ಈ ಸಿನಿ​ಮಾದಲ್ಲಿ ಕಥಾನಾಯಕನ ಹೆಸರು ಆಕಾಶ್​, ಕಥಾನಾಯಕಿ ಹೆಸರು ವಾಣಿ. ಅಲ್ಲದೇ ಈ ಚಿತ್ರದಲ್ಲಿ ಆಗಾಗ ಆಕಾಶವಾಣಿಯ ಸಿಗ್ನೇಚರ್​ ಟ್ಯೂನ್​ ಕೂಡ ಪ್ಲೇ ಆಗುತ್ತದೆ. ಕಥೆಯಲ್ಲಿ ರೇಡಿಯೋ ಕೂಡ ಪ್ರಮುಖ ಪಾತ್ರ ವಹಿಸಲಿದೆಯಂತೆ. ಈ ಎಲ್ಲ ಕಾರಣಗಳಿಂದ ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಎಂದು ಶೀರ್ಷಿಕೆ ಇಡಲಾಗಿದೆ.

ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೂ ಈ ಸಿನಿಮಾ ಕಥೆಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಚಿತ್ರತಂಡ ಒತ್ತಿಹೇಳುತ್ತಿದೆ. ಸುಚೇಂದ್ರ ಪ್ರಸಾದ್​, ನಾಗೇಂದ್ರ ಶಾ, ನಾರಾಯಣ ಸ್ವಾಮಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಮುಂತಾದವರು ನಟಿಸಿದ್ದಾರೆ. ಎಂ. ಹರಿಕೃಷ್ಣ ನಿರ್ದೇಶನ ಮಾಡಿದ್ದು, ಎ.ಟಿ. ರವೀಶ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಪವನ್​ ಗೌಡ ಸಂಕಲನ ಮಾಡಿದ್ದಾರೆ. ಶಿವಾನಂದ ಬಿ. ನಿರ್ಮಾಣ ಮಾಡಿದ್ದಾರೆ.

‘ಬೆಂಗಳೂರಿಗೆ ಬಂದು ಸೇಡು ತೀರಿಸಿಕೊಳ್ಳುವ ಹಳ್ಳಿ ಹುಡುಗಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ’ ಎಂದು ಪಾತ್ರ ಪರಿಚಯ ಮಾಡಿಕೊಳ್ಳುತ್ತಾರೆ ನಿಖಿತಾ ಸ್ವಾಮಿ. ಈ ಚಿತ್ರದ ಮೇಲೆ ಅವರ ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ರಣವೀರ್​ ಪಾಟೀಲ್​ ನಿಭಾಯಿಸಿರು ಪಾತ್ರಕ್ಕೆ ಹಲವು ಗೆಟಪ್​ಗಳಿವೆ.

(‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರದ ಟ್ರೇಲರ್​)

ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕ ಬಳಿಕ ಹಲವು ಚಿತ್ರಗಳು ಬಿಡುಗಡೆ ಆಗುತ್ತಿವೆ. ಆ ಪೈಕಿ ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಕೂಡ ಒಂದು. ಬ್ಯಾಕ್​      ಟು ಬ್ಯಾಕ್​ ಸ್ಟಾರ್​ ಸಿನಿಮಾಗಳು ತೆರೆಕಾಣಲು ರೆಡಿ ಆಗಿವೆ. ಅದರ ನಡುವೆಯೂ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರ ರಿಲೀಸ್​ ಆಗಿದೆ.

ಇದನ್ನೂ ಓದಿ:

Kotigobba 3 Trailer: ಆ್ಯಕ್ಷನ್​ ಮತ್ತು ಅದ್ದೂರಿತನ; ‘ಕೋಟಿಗೊಬ್ಬ 3’ ಟ್ರೇಲರ್​ನಲ್ಲಿ ಮಿಂಚಿದ ಸುದೀಪ್

‘ಸಲಗ’ಕ್ಕೆ ಬಲ ನೀಡಲಿರುವ ಪುನೀತ್​ ರಾಜ್​ಕುಮಾರ್​; ಪ್ರೀ-ರಿಲೀಸ್​ ಇವೆಂಟ್​ಗೆ ಅಪ್ಪು ಅತಿಥಿ