ಭಾರತೀಯ ಅಂಚೆ ಇಲಾಖೆಗೂ ಇಷ್ಟ ಆಯ್ತು ಡಾಲಿ ಮದುವೆ ಆಮಂತ್ರಣ ಪತ್ರಿಕೆ

|

Updated on: Feb 13, 2025 | 9:34 PM

ಡಾಲಿ ಧನಂಜಯ ಅವರ ಮದುವೆ ಆಮಂತ್ರಣ ಪತ್ರಿಕೆಗೆ ಭಾರತೀಯ ಅಂಚೆ ಇಲಾಖೆಯಿಂದ ಮೆಚ್ಚುಗೆ ಸೂಚಿಸಲಾಗಿದೆ. ಇನ್​ಲ್ಯಾಂಡ್​ ಲೆಟರ್ ಶೈಲಿಯಲ್ಲಿ ಸಿದ್ಧವಾದ ಆಹ್ವಾನ ಪತ್ರಿಕೆಗೆ ಅಂಚೆ ಇಲಾಖೆ ಅಧಿಕಾರಿಗಳು ಭೇಷ್ ಎಂದಿದ್ದಾರೆ. ಹಾಗಾಗಿ ಧನಂಜಯ ಹಾಗೂ ಧನ್ಯತಾ ಜೋಡಿಯ ಫೋಟೋದೊಂದಿಗೆ ವಿಶೇಷ ಸ್ಟ್ಯಾಂಪ್​ಗಳನ್ನು ಗಿಫ್ಟ್ ರೂಪದಲ್ಲಿ ನೀಡಲಾಗಿದೆ.

ಭಾರತೀಯ ಅಂಚೆ ಇಲಾಖೆಗೂ ಇಷ್ಟ ಆಯ್ತು ಡಾಲಿ ಮದುವೆ ಆಮಂತ್ರಣ ಪತ್ರಿಕೆ
Daali Dhananjaya
Follow us on

ನಟ ಡಾಲಿ ಧನಂಜಯ ಅವರು ಅನೇಕ ವಿಚಾರಗಳಲ್ಲಿ ಮಾದರಿ ಆಗುತ್ತಾರೆ. ಈಗ ಅವರ ಮದುವೆ ಆಮಂತ್ರಣ ಪತ್ರಿಕೆ ಕೂಡ ಗಮನ ಸೆಳೆದಿದೆ. ಫೆಬ್ರವರಿ 15 ಮತ್ತು 16ರಂದು ಡಾಲಿ ಧನಂಜಯ ಅವರ ಮದುವೆ ನೆರವೇರಲಿದೆ. ಡಾಕ್ಟರ್ ಧನ್ಯತಾ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷ ಏನೆಂದರೆ, ಅವರ ಮದುವೆಯ ಆಮಂತ್ರಣ ಪತ್ರಿಕೆ ವಿನ್ಯಾಸಕ್ಕೆ ಭಾರತೀಯ ಅಂಚೆ ಇಲಾಖೆ ಕೂಡ ಫಿದಾ ಆಗಿದೆ. ಇನ್​ಲ್ಯಾಂಡ್​ ಲೆಟರ್ ಮಾದರಿಯಲ್ಲಿ ಸಿದ್ಧವಾದ ಆಹ್ವಾನ ಪತ್ರಿಕೆಗೆ ಅಂಚೆ ಇಲಾಖೆ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ.

ಒಂದು ಕಾಲದಲ್ಲಿ ಇನ್​ಲ್ಯಾಂಡ್​ ಲೆಟರ್​ ಬಳಕೆ ಹೇರಳವಾಗಿತ್ತು. ಆದರೆ ಮೊಬೈಲ್ ಯುಗದಲ್ಲಿ ಇನ್​ಲ್ಯಾಂಡ್​ ಲೆಟರ್ ಬಳಸುವವರ ಸಂಖ್ಯೆ ತೀರಾ ವಿರಳ ಆಗಿದೆ. ಹಾಗಿದ್ದರೂ ಕೂಡ ಡಾಲಿ ಧನಂಜಯ ಅವರು ಇನ್​ಲ್ಯಾಂಡ್​ ಲೆಟರ್​ ಶೈಲಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದರಿಂದ ಜನರು ಇನ್​ಲ್ಯಾಂಡ್ ಲೆಟರ್​ ಬಗ್ಗೆ ಆಸಕ್ತಿ ತೋರಿಸಲು ಆರಂಭಿಸಿದ್ದಾರೆ ಎಂಬುದು ವಿಶೇಷ.

‘ಇನ್​ಲ್ಯಾಂಡ್ ಲೆಟರ್ ಮಾದರಿಯಲ್ಲಿ ಆಮಂತ್ರಣ ನೀಡಿ ಜನರಿಗೆ ಮಾದರಿಯಾಗಿದ್ದೀರಿ. ನಿಮ್ಮ ನಡೆಯಿಂದ ಮತ್ತೆ ಇನ್​ಲ್ಯಾಂಡ್ ಲೆಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್​ಲ್ಯಾಂಡ್ ಲೆಟರ್ ಕೇಳಿ ಪಡೆಯುತ್ತಿದ್ದಾರೆ‌. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು’ ಎಂದು ಅಂಚೆ ಇಲಾಖೆ ಅಧಿಕಾರಿಗಳು ಡಾಲಿ ಧನಂಜಯ ಅವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ

ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ ಅವರಿಗೆ ವಿಶೇಷವಾದ ಸ್ಟ್ಯಾಂಪ್ ಉಡುಗೊರೆ ನೀಡಿದ್ದಾರೆ. ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಲಾಗಿದೆ. ಧನಂಜಯ ಮತ್ತು ಧನ್ಯತಾ ಅವರ ಫೋಟೋ ಜೊತೆ ಶುಭ ವಿವಾಹ ಎಂಬ ಸಂದೇಶ ಇರುವ 12 ಸ್ಟ್ಯಾಂಪ್​ಗಳನ್ನು ಉಡುಗೊರೆ ರೂಪದಲ್ಲಿ ನೀಡಲಾಗಿದೆ. ಅಂಚೆ ಇಲಾಖೆಯಿಂದ ಸಿಕ್ಕಿರುವ ಈ ಉಡುಗೊರೆಯನ್ನು ಕಂಡು ಧನಂಜಯ ಮತ್ತು ಧನ್ಯತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.