ಬಿಗ್ ಬಾಸ್ನಿಂದ ಹೊರ ಬಂದು ದೊಡ್ಡ ಸಿನಿಮಾ ಆಫರ್ ಪಡೆದ ಉಗ್ರಂ ಮಂಜು
ಬಿಗ್ ಬಾಸ್ ಕನ್ನಡದಿಂದ ಹೊರಬಂದ ಬಳಿಕ ಉಗ್ರಂ ಮಂಜು ಅವರಿಗೆ ಹಲವಾರು ಸಿನಿಮಾ ಆಫರ್‌ಗಳು ಬಂದಿವೆ. ಅವರು ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರ ಮೊದಲ ಸಿನಿಮಾ 'ಮ್ಯಾಂಗೋ ಪಚ್ಚ'ದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ ಮತ್ತು ಉಗ್ರಂ ಮಂಜು ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

‘ಬಿಗ್ ಬಾಸ್’ ಶೋನಿಂದ ಹೊರ ಬಂದ ಬಳಿಕ ಒಂದಷ್ಟು ಜನರಿಗೆ ಸಿನಿಮಾ ಆಫರ್ ಸಿಗುತ್ತದೆ. ಅದರಲ್ಲೂ ಈಗಾಗಲೇ ಕಲಾವಿದರಾಗಿ ಗುರುತಿಸಿಕೊಂಡವರಿಗಂತೂ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬಂದ ಉದಾಹರಣೆ ಸಾಕಷ್ಟಿದೆ. ಈಗ ಈ ಸಾಲಿಗೆ ಉಗ್ರಂ ಮಂಜು ಸೇರ್ಪಡೆ ಆಗುತ್ತಿದ್ದಾರೆ. ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಆಫರ್‌ಗಳು ಸಿಗೋಕೆ ಆರಂಭ ಆಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಉಗ್ರಂ ಮಂಜು ಈವರೆಗೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಬಾರಿಯ ಬಿಗ್ ಬಾಸ್ನಲ್ಲಿ ಅವರು ಟಾಪ್ ಐದರಲ್ಲಿ ಇದ್ದರು. ಬಿಗ್ ಬಾಸ್ನಿಂದ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಈ ಕಾರಣದಿಂದ ಅವರಿಗೆ ಆಫರ್‌ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಜಿಮ್ಮಿ’ ಕೆಲಸಗಳು ವಿಳಂಬ ಆಗಿದೆ. ಹೀಗಾಗಿ, ‘ಮ್ಯಾಂಗೋ ಪಚ್ಚ’ ಅವರ ಮೊದಲ ಸಿನಿಮಾ ಆಗಲಿದೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಉಗ್ರಂ ಮಂಜು ಅವರು ಈ ಸಿನಿಮಾ ಸೆಟ್ನಲ್ಲಿ ಸೇರಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉಗ್ರಂ ಮಂಜು ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ‘ಮ್ಯಾಕ್ಸ್’ ಸಿನಿಮಾದಲ್ಲಿ ಅವರಿಗೆ ಪಾಸಿಟಿವ್ ರೋಲ್ ಸಿಕ್ಕಿತ್ತು. ಈ ಮೂಲಕ ಅವರು ಭೇಷ್ ಎನಿಸಿಕೊಂಡಿದ್ದರು. ಈಗ ಈ ಚಿತ್ರದಲ್ಲಿ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಮೂಡಿದೆ.
View this post on Instagram
ಉಗ್ರಂ ಮಂಜು ಅವರು ಬಿಗ್ ಬಾಸ್ನಲ್ಲಿ ವಿನ್ ಆಗೋ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ, ಅವರು ತಮ್ಮ ಆಟವನ್ನು ತಮ್ಮ ಕೈಯಾರೆ ಹಾಳು ಮಾಡಿಕೊಂಡರು. ಇದು ಅವರ ಆಟಕ್ಕೆ ಹಿನ್ನಡೆ ಉಂಟು ಮಾಡಿತು. ಹೀಗಾಗಿ, ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಸುದೀಪ್ ಅಳಿಯನ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಟೈಟಲ್; ರೆಟ್ರೋ ಲುಕ್ನಲ್ಲಿ ಸಂಚಿತ್ ಎಂಟ್ರಿ
ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ಹಾಗೂ ‘ಸುಪ್ರಿಯಾ ಪಿಕ್ಚರ್ಸ್ ಸ್ಟುಡಿಯೋ’ ಒಟ್ಟಾಗಿ ಸಂಚಿತ್ ಅವರ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಿನಿಮಾದ ಕಥೆ ಮೈಸೂರಿನಲ್ಲಿ ಸಾಗಲಿದ್ದು, 90ರ ದಶಕದಲ್ಲಿ ಕಥೆ ಮೂಡಿ ಬಂದಿದೆ. ವಿವೇಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.