ಸುದೀಪ್ ಅಳಿಯನ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಟೈಟಲ್; ರೆಟ್ರೋ ಲುಕ್ನಲ್ಲಿ ಸಂಚಿತ್ ಎಂಟ್ರಿ
Sanchith Sanjeev Birthday: ‘ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು 'ಮ್ಯಾಂಗೋ ಪಚ್ಚ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಈ ರೆಟ್ರೋ ಶೈಲಿಯ ಚಿತ್ರವು 90ರ ದಶಕದ ಹಿನ್ನೆಲೆಯನ್ನು ಹೊಂದಿದ್ದು, ಮೈಸೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಮಾಲಾಶ್ರೀ, ಮಯೂರ್ ಪಟೇಲ್, ಕಾಜಲ್ ಕುಂದರ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಫೆಬ್ರವರಿ 10 ರಿಂದ ಚಿತ್ರೀಕರಣ ಆರಂಭವಾಗಲಿದೆ.

ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ವೇದಿಕೆ ಸಿದ್ಧವಾಗಿದೆ. ಅವರ ಮೊದಲ ಸಿನಿಮಾದ ಕೆಲಸ ಅಧಿಕೃತವಾಗಿ ಆರಂಭ ಆಗುತ್ತಿದೆ. ಈ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಸಂಚಿತ್ ಜನ್ಮದಿನದ ಪ್ರಯುಕ್ತ ಇಂದು (ಫೆಬ್ರವರಿ 5) ಟೈಟಲ್ ಅನೌನ್ಸ್ ಆಗಿದೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ.
ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ಹಾಗೂ ‘ಸುಪ್ರಿಯಾ ಪಿಕ್ಚರ್ಸ್ ಸ್ಟುಡಿಯೋ’ ಒಟ್ಟಾಗಿ ಸಂಚಿತ್ ಅವರ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಿನಿಮಾದ ಕಥೆ ಮೈಸೂರಿನಲ್ಲಿ ಸಾಗಲಿದ್ದು, 90ರ ದಶಕದಲ್ಲಿ ಕಥೆ ಮೂಡಿ ಬಂದಿದೆ ಎಂದು ಹೇಳಲಾಗಿದೆ. ಈ ಸಿನಿಮಾದ ಟೈಟಲ್ ಟೀಸರ್ ಗಮನ ಸೆಳೆದಿದೆ.
‘ಕ್ರೇಜಿ ಸ್ಟಾರ್’ ಹೆಸರಿನ ಬಾರ್ಗೆ ಇಬ್ಬರ ಆಗಮನ ಆಗುತ್ತದೆ. ಇದರಲ್ಲಿ ಒಬ್ಬರು ವಿದೇಶಿ ಮಹಿಳೆ. ಮತ್ತೋರ್ವ ಲೋಕಲ್ ಗೈಡ್. ‘ಪ್ರಳಯಾಂತಕ’ ಹೆಸರಿನ ಟೇಬಲ್ ಮೇಲೆ ವಿದೇಶಿ ಮಹಿಳೆ ಕೂರಲು ಹೋಗುತ್ತಾರೆ. ಆದರೆ, ಅಲ್ಲಿ ಕೂರಬೇಡಿ ಎಂದು ಎಲ್ಲರೂ ಕೋರುತ್ತಾರೆ. ಆ ಪ್ರಳಯಾಂತಕ ಟೇಬಲ್ ರಿಸರ್ವ್ ಆಗಿರೋದು ಪಚ್ಚನಿಗೆ! ಆಗ ಕಥಾ ನಾಯಕನ ಎಂಟ್ರಿ ಆಗುತ್ತದೆ.
Many happy returns and bestes wishs @sanchithsanjeev ,,,,and team #MangoPachcha .https://t.co/FuKGe5U24B
This small peak into Pachcha’s world looks awesome. I’m sure you all will nail it.
Best wshs @SupriyanviPicS @KRG_Studios @iampriya06 @Karthik1423 @yogigraj…
— Kichcha Sudeepa (@KicchaSudeep) February 5, 2025
ಸಂಚಿತ್ ಸಂಜೀವ್ ಅವರು ರೆಟ್ರೋ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಕಥಾ ನಾಯಕನಿಗೆ ಮ್ಯಾಂಗೋ ಪಚ್ಚ ಎಂದು ಕರೆಯೋದೇಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಸಿನಿಮಾದಲ್ಲಿ ಉತ್ತರ ಸಿಗಬೇಕಿದೆ. ಈ ಚಿತ್ರದ ಪ್ರೋಮೋನ ಕಿಚ್ಚ ಸುದೀಪ್ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ಹೊಸ ಚಿತ್ರ ಅನೌನ್ಸ್; ಕಿಚ್ಚ, ಕೆಆರ್ಜಿ ನಿರ್ಮಾಣ
ಈ ಚಿತ್ರದಲ್ಲಿ ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಯೂರ್ ಪಟೇಲ್, ಕಾಜಲ್ ಕುಂದರ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ವಿವೇಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳ ತೆರೆಹಿಂದೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಕಾರ್ತಿಕ್, ಯೋಗಿ ಜಿ ರಾಜ್, ಪ್ರಿಯಾ ಸುದೀಪ್ ಬಂಡವಾಳ ಹೂಡುತ್ತಿದ್ದಾರೆ. ಫೆಬ್ರವರಿ 10ರಿಂದ ಸಿನಿಮಾದ ಶೂಟ್ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.