AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮಿಗಳ ದಿನಾಚರಣೆಗೆ ರಶ್ಮಿಕಾ ಮಂದಣ್ಣ ಎಂಟ್ರಿ; ಸ್ಪರ್ಧೆಗೆ ಇಳಿದವರು ಯಾರ್ಯಾರು?

ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿರುವ ಹಲವು ಸಿನಿಮಾಗಳ ಪೈಕಿ 'ಛಾವಾ', 'ಕ್ಯಾಪ್ಟನ್ ಅಮೇರಿಕ: ಬ್ರೇವ್ ನ್ಯೂ ವರ್ಲ್ಡ್', 'ಸಿದ್ಲಿಂಗು 2' ಮತ್ತು 'ನನ್ನ ಪ್ರೀತಿಯ ರಾಮು' (ಪುನರ್ ಬಿಡುಗಡೆ) ಮುಂತಾದ ಚಿತ್ರಗಳು ಪ್ರಮುಖವಾಗಿವೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ 'ಛಾವಾ' ಐತಿಹಾಸಿಕ ಚಿತ್ರವಾಗಿದ್ದರೆ, ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ಸೂಪರ್ ಹೀರೋ ಚಿತ್ರವೂ ತೆರೆಗೆ ಬರುತ್ತಿದೆ.

ಪ್ರೇಮಿಗಳ ದಿನಾಚರಣೆಗೆ ರಶ್ಮಿಕಾ ಮಂದಣ್ಣ ಎಂಟ್ರಿ; ಸ್ಪರ್ಧೆಗೆ ಇಳಿದವರು ಯಾರ್ಯಾರು?
ಈ ವಾರ ತೆರೆಗೆ
ರಾಜೇಶ್ ದುಗ್ಗುಮನೆ
|

Updated on: Feb 12, 2025 | 12:58 PM

Share

ಪ್ರೇಮಿಗಳ ದಿನಾಚರಣೆ ಎಂದಾಗ ಒಂದಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ. ಅವೆಲ್ಲವೂ ಬಹುತೇಕ ಪ್ರೇಮ ಕಥೆಯನ್ನೇ ಹೊಂದಿರುತ್ತವೆ. ಈ ಬಾರಿಯ ಪ್ರೇಮ ದಿನಾಚರಣೆ ಸಿನಿಮಾ ಪ್ರಿಯರ ಪಾಲಿಗೆ ಭಿನ್ನವಾಗಿ ಇರಲಿದೆ. ಈ ಬಾರಿ ಪ್ರೇಮ ಕಥೆಯ ಸಿನಿಮಾಗಳ ಜೊತೆಗೆ ಒಂದಷ್ಟು ಭಿನ್ನ ಸಿನಿಮಾಗಳು ರಿಲೀಸ್ ಆಗುತ್ತಿವೆ.  ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಕೂಡ ಈ ವಾರ ತೆರೆಗೆ ಬರುತ್ತಿದೆ.

ಛಾವಾ

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಚಿತ್ರ ಫೆಬ್ರವರಿ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಅಭಿಮಾನಿಗಳ ಪಾಲಿಗೆ ವಿಶೇಷವಾಗಿರಲಿದೆ. ಇದು ಐತಿಹಾಸಿಕ ಕಥೆಯನ್ನು ಹೊಂದಿದೆ. ವಿಕ್ಕಿ ಕೌಶಲ್ ಅವರು ಛತ್ರಪತಿ ಶಿವಾಜಿ ಮಹರಾಜ್ ಅವರ ಪುತ್ರ ಛತ್ರಪತಿ ಸಾಂಭಾಜಿ ಮಹರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರು ಛತ್ರಪತಿ ಸಾಂಭಾಜಿ ಮಹರಾಜ್ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣ್ ಉಠೇಕರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್​

ಹಾಲಿವುಡ್​ನ ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್​’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ಈ ಚಿತ್ರ 2ಡಿ, 3ಡಿ, ಐಸ್ 3ಡಿ, ಮ್ಯಾಕ್ಸ್ 4ಡಿ ​ 3ಡಿ, 4ಡಿ ಎಕ್ಸ್ ​3ಡಿ ಮೊದಲಾದ ವರ್ಷನ್​ಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಆ್ಯಂಥೋನಿ ಮ್ಯಾಕಿ ಅವರು ಕ್ಯಾಪ್ಟನ್ ಅಮೆರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಸಿದ್ಲಿಂಗು 2’

ಈ ಮೊದಲು ರಿಲೀಸ್ ಆಗಿ ಹಿಟ್ ಆದ ‘ಸಿದ್ಲಿಂಗು’ ಚಿತ್ರದ ಮುಂದುವರಿದ ಭಾಗವಾಗಿ ‘ಸಿದ್ಲಿಂಗು 2’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಯೋಗಿ, ಸೋನು ಗೌಡ ಮೊದಲಾದವರು ನಟಿಸಿದ್ದಾರೆ. ವಿಜಯ್ ಪ್ರಸಾದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬಕ್ಕೆ ಬರಲಿದೆ ‘ಡೆವಿಲ್’ ಟೀಸರ್; ಸಿಹಿ ಸುದ್ದಿ ನೀಡಿದ ದಾಸ

ನನ್ನ ಪ್ರೀತಿಯ ರಾಮು

ದರ್ಶನ್ ನಟನೆಯ ‘ನನ್ನ ಪ್ರೀತಿಯ ರಾಮು’ ಚಿತ್ರ ಈ ವಾರ ರೀ-ರಿಲೀಸ್ ಆಗುತ್ತಿದೆ. ಅಂಧನ ಪಾತ್ರದಲ್ಲಿ ದರ್ಶನ್ ಅವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್