AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhika Pandit: ಯಶ್​ಗೆ 30 ದಿನಕ್ಕೆ 30 ಲೆಟರ್​ ಬರೆದಿದ್ದ ರಾಧಿಕಾ ಪಂಡಿತ್

ಯಶ್ ಮತ್ತು ರಾಧಿಕಾ ಪಂಡಿತ್ ಅವರ ದಾಂಪತ್ಯ ಜೀವನಕ್ಕೆ 10 ವರ್ಷ ತುಂಬುತ್ತಿದೆ. ರಾಧಿಕಾ ಅವರು ಯಶ್ ಅವರಿಗೆ 30 ದಿನಗಳಲ್ಲಿ 30 ಪತ್ರಗಳನ್ನು ಬರೆದಿದ್ದರು ಎಂಬ ವಿಚಾರ ಗೊತ್ತೇ? ಅವರ ಚಲನಚಿತ್ರ ಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಯಶ್ ಅವರ ಮುಂಬರುವ ಚಿತ್ರ ‘ಟಾಕ್ಸಿಕ್’ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗಿದೆ.

Radhika Pandit: ಯಶ್​ಗೆ 30 ದಿನಕ್ಕೆ 30 ಲೆಟರ್​ ಬರೆದಿದ್ದ ರಾಧಿಕಾ ಪಂಡಿತ್
ಯಶ್-ರಾಧಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Feb 14, 2025 | 7:50 AM

Share

ಯಶ್ ಹಾಗೂ ರಾಧಿಕಾ ಪಂಡಿತ್ ನಡುವಣ ಪ್ರೀತಿ ಈಗಲೂ ಭದ್ರವಾಗಿದೆ. ಇವರು ವಿವಾಹ ಆಗಿ ದಶಕ ಕಳೆಯುತ್ತಾ ಬಂದಿದೆ. ಇವರ ಪ್ರೀತಿಗೆ ಮತ್ತಷ್ಟು ಗಟ್ಟಿಯಾಗಿದೆ. ಯಶ್ ಹಾಗೂ ರಾಧಿಕಾ ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಹೆಚ್ಚು ಸುತ್ತಾಟ ಮಾಡಿದವರಲ್ಲ. ಎಲ್ಲಿಯೂ ಸುದ್ದಿ ಆದವರಲ್ಲ. ಒಂದು ದಿನ ನಿಶ್ಚಿತಾರ್ಥ ಮಾಡಿಕೊಂಡು, ಮದುವೆ ಆದರು. ವಿಶೇಷ ಎಂದರೆ ರಾಧಿಕಾ ಪಂಡಿತ್ ಅವರಿಗೆ ಪತ್ರ ಬರೆಯುವ ಕ್ರೇಜ್ ಇತ್ತು. ರಾಧಿಕಾ ಅವರು ಯಶ್​​ಗಾಗಿ 30 ದಿನಕ್ಕೆ 30 ಪತ್ರ ಬರೆದಿದ್ದರು. ಪ್ರೇಮಿಗಳ ದಿನದಂದು (ಫೆಬ್ರವರಿ 14) ಅದನ್ನು ನಾವು ನೆನಪಿಸಿಕೊಳ್ಳೋಣ.

ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಾಗಿ ಕಿರುತೆರೆಯಲ್ಲಿ ನಟಿಸಿದವರು. ಆ ಬಳಿಕ ಇವರು ಹಿರಿತೆರೆಯಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡರು. ಇವರ ಮಧ್ಯೆ ಪ್ರೀತಿ ಮೂಡಿತು. ಆ ಪ್ರೀತಿ ಈಗ ಹೆಮ್ಮರವಾಗಿ ಬೆಳೆದಿದೆ. ಮುಂದಿನ ಜನ್ಮಗಳಲ್ಲಿ ಇವರು ಒಟ್ಟಾಗಿ ಇರಬೇಕು ಎಂದು ಅಭಿಮಾನಿಗಳೂ ಬಯಸುವಂತೆ ಇವರು ಬದುಕಿ ತೋರಿಸುತ್ತಿದ್ದಾರೆ. ಮೊದಲಿನಿಂದಲೂ ಇವರ ಮಧ್ಯೆ ಅಪಾರ ಪ್ರೀತಿ ಇತ್ತು.

‘ರಾಧಿಕಾ ಪತ್ರ ಬರೆಯೋದು ಜಾಸ್ತಿ. ಜಗಳ ಆದಾಗ ಪೇಟಿಂಗ್ ಮಾಡಿದ್ದಳು. ಬೇಸರದಲ್ಲಿ ಕುಳಿತಂತೆ ಪೇಂಟ್ ಮಾಡಿದ್ದಳು. ಅದನ್ನು ನೋಡಿದಾಗ ಕೋಪ ಹೋಗುತ್ತದೆ. ನಾನೂ ಸಣ್ಣ ಪತ್ರ ಬರೆದಿದ್ದೇನೆ. ನೆನಪಲ್ಲಿ ಉಳಿಯುವ ರೀತಿಯಲ್ಲಿ ಪತ್ರ ಬರೆಯುತ್ತಿದ್ದಳು’ ಎಂದಿದ್ದರು ಯಶ್.

‘ಒಮ್ಮೆ ಸ್ವೀಡನ್​ಗೆ ಶೂಟ್​ಗೆ ಹೋಗಿದ್ದೆ. 30 ದಿನ ಅಲ್ಲಿಯೇ ಇರಬೇಕಿತ್ತು. ಅಷ್ಟು ದೀರ್ಘವಾಗಿ ವಿದೇಶದಲ್ಲಿ ಇದ್ದಿದ್ದು ಅದೇ ಮೊದಲಾಗಿತ್ತು. ವಿಶೇಷ ಎಂದರೆ 30 ದಿನಕ್ಕೆ 30 ಪತ್ರ ಬರೆದಿದ್ದರು. ಪ್ರತಿ ದಿನ ಒಬ್ಬರು ತಂದುಕೊಡುತ್ತಿದ್ದರು. ಸಣ್ಣ ಲೆಟರ್ ಆದರೂ ಚೆನ್ನಾಗಿತ್ತು. ಬೆಳಿಗ್ಗೆ ಎದ್ದ ತಕ್ಷಣ ಲೆಟರ್ ಸಿಗುತ್ತಿತ್ತು’ ಎಂದಿದ್ದರು ರಾಧಿಕಾ ಪಂಡಿತ್.

ಇದನ್ನೂ ಓದಿ: Toxic Movie: ಯಶ್ ನಿರ್ಧಾರದಿಂದ ಹೆಚ್ಚಿತು ‘ಟಾಕ್ಸಿಕ್’ ಚಿತ್ರದ ಬಜೆಟ್

ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಶ್ ಜನ್ಮದಿನಕ್ಕಾಗಿ ಈ ಚಿತ್ರದ ಕಡೆಯಿಂದ ವಿಶೇಷ ಗಿಫ್ಟ್ ಒಂದು ಸಿಕ್ಕಿತ್ತು. ಈ ಚಿತ್ರ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. ಕನ್ನಡದ ಜೊತೆ ಇಂಗ್ಲಿಷ್​ನಲ್ಲೂ ಸಿನಿಮಾ  ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:49 am, Fri, 14 February 25