Toxic Movie: ಯಶ್ ನಿರ್ಧಾರದಿಂದ ಹೆಚ್ಚಿತು ‘ಟಾಕ್ಸಿಕ್’ ಚಿತ್ರದ ಬಜೆಟ್
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಜೆಟ್ ಶೇಕಡಾ 40ರಷ್ಟು ಏರಿಕೆಯಾಗಿದೆ. ಪ್ಯಾನ್ ವರ್ಲ್ಡ್ ಬಿಡುಗಡೆಗಾಗಿ ಇಂಗ್ಲಿಷ್‌ನಲ್ಲಿಯೂ ಚಿತ್ರೀಕರಣ ನಡೆಯುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಯಶಸ್ಸಿಗೆ ಹಾಲಿವುಡ್ ನಿರ್ಮಾಣ ಸಂಸ್ಥೆಗಳೊಂದಿಗಿನ ಸಹಯೋಗ ಕೂಡ ಕಾರಣವಾಗಬಹುದು.

‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದ ಯಶ್ ಅವರು ಈಗ ಗೀತು ಮೋಹನ್ದಾಸ್ ಜೊತೆ ‘ಟಾಕ್ಸಿಕ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾ ಇತ್ತೀಚೆಗೆ ಅಧಿಕೃತವಾಗಿ ಘೋಷಣೆ ಆಗಿದ್ದು, ಯಶ್ ಬರ್ತ್ಡೇ ದಿನ ಟೀಸರ್ ಕೂಡ ರಿಲೀಸ್ ಆಗಿದೆ. ಈ ಚಿತ್ರದ ಬಜೆಟ್ ಶೇ.40 ಏರಿಕೆ ಆಗಿದೆ. ಇದಕ್ಕೆ ಕಾರಣ ಆಗಿದ್ದು, ಯಶ್ ಹಾಗೂ ಗೀತು ಮೋಹನ್ದಾಸ್ ಅವರ ನಿರ್ಧಾರ ಎಂದು ಹೇಳಲಾಗಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಶೂಟ್ ಭರ್ಜರಿ ವೇಗದಲ್ಲಿ ಸಾಗುತ್ತಿದೆ. ಇದನ್ನು ಕನ್ನಡದ ಜೊತೆ ಪರ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವ ಆಲೋಚನೆ ಇದೆ. ಈಗ ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ಶೂಟ್ ಆಗುತ್ತಿದೆ ಎಂದು ಹೇಳಲಾಗಿದೆ.
‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲೂ ಶೂಟ್ ಆಗುತ್ತಿದೆ! ಹೌದು ಯಶ್ ಹಾಗೂ ಇತರ ಕಲಾವಿದರು ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲೂ ಡೈಲಾಗ್ ಹೇಳುತ್ತಿದ್ದಾರೆ. ಈ ಮೂಲಕ ಸಿನಿಮಾನ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿದೆ.
‘ಟಾಕ್ಸಿಕ್’ ಚಿತ್ರವನ್ನು ಇಂಗ್ಲಿಷ್ಗೆ ಡಬ್ ಮಾಡಬಹುದು. ಆದರೆ, ತಂಡದವರು ಹಾಗೆ ಮಾಡದೆ ಅದೇ ಭಾಷೆಯಲ್ಲಿ ಶೂಟ್ ಮಾಡುವ ಆಲೋಚನೆ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಚಿತ್ರವನ್ನು ಒಟ್ಟಿಗೆ ಶೂಟ್ ಮಾಡುವ ನಿರ್ಧಾರದಿಂದ ಚಿತ್ರದ ಬಜೆಟ್ ಶೇ.40 ಏರಿಕೆ ಆಗಿದೆ. ಈ ಬಜೆಟ್ನ ಭರಿಸಲು ‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ ರೆಡಿ ಇದೆ.
‘ಟಾಕ್ಸಿಕ್’ ಭಾರತ ಚಿತ್ರರಂಗದ ದುಬಾರಿ ಸಿನಿಮಾ ಎನಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬೆಂಗಳೂರು, ಗೋವಾ ಮೊದಲಾದ ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ಈ ಚಿತ್ರವನ್ನು ಇಂಗ್ಲಿಷ್ನಲ್ಲಿ ಹಂಚಿಕೆ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಹಾಲಿವುಡ್ ನಿರ್ಮಾಣ ಸಂಸ್ಥೆಗಳ ಜೊತೆ ಈಗಾಗಲೇ ಯಶ್ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಯಶ್ ಜೊತೆ ‘ಟಾಕ್ಸಿಕ್’ ಶೂಟಿಂಗ್ ಆರಂಭಿಸಿದ ಸ್ಟಾರ್ ನಟಿ ನಯನತಾರಾ
‘ಕೆಜಿಎಫ್’ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ಯಶ್ ಅವರದ್ದೇ ಆಗಿತ್ತು. ಈಗ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ಕೂಡ ಅವರದ್ದೇ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:47 am, Mon, 10 February 25




