ಜೈಲಿನಲ್ಲಿ ದರ್ಶನ್ ಮೇಲೆ ಕ್ಯಾಮೆರಾ ಕಣ್ಗಾವಲು, ನೋಡಲು ಸಿಗಲಿದೆ ಟಿವಿ
Darshan Thoogudeepa: ದರ್ಶನ್ ತೂಗುದೀಪ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದು, ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಏನೇನು ಸಿಗಲಿದೆ? ಯಾವ ನಿಯಮಗಳು ಇರಲಿವೆ ಇಲ್ಲಿದೆ ಮಾಹಿತಿ. ಜೈಲಿನಲ್ಲಿ ನಟ ದರ್ಶನ್ಗೆ ಟಿವಿ ವ್ಯವಸ್ಥೆಯೂ ಸಹ ಇರಲಿದೆಯಂತೆ.
ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಬಳ್ಳಾರಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ ಆರೋಪ ಇರುವ ಕಾರಣ ಇದೀಗ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದ ದರ್ಶನ್ಗೆ, ಬಳ್ಳಾರಿ ಜೈಲಿನಲ್ಲಿಯೂ ಸಹ ವಿಶೇಷ ಆತಿಥ್ಯ ಸಿಗಲಿದೆಯೇ ಎಂಬ ಅನುಮಾನ ಹಲವರಿಗೆ ಮೂಡಿದೆ. ದರ್ಶನ್ ರ ಬಳ್ಳಾರಿಯ ಬ್ಯಾರಕ್ ಹೇಗಿದೆ? ಬಳ್ಳಾರಿ ಜೈಲಿನಲ್ಲಿ ಅವರಿಗೆ ಏನೇನು ಸಿಗಲಿವೆ? ದರ್ಶನ್ಗೆ ಇಲ್ಲಿ ಏನು ಸಿಗುವುದಿಲ್ಲ ಇನ್ನಿತರೆ ವಿಷಯಗಳ ಬಗ್ಗೆ ಪ್ರಿಸನ್ ನಾರ್ತ್ ಡಿಐಜಿ ಟಿಪಿ ಶೇಷ ಅವರು ಮಾತನಾಡಿದ್ದಾರೆ.
ದರ್ಶನ್ ಅವರನ್ನು ವಿಐಪಿ ಸೆಲ್ನಲ್ಲಿ ಇಡಲಾಗಿದೆ ಎಂಬುದು ಸುಳ್ಳು, ಅವರನ್ನು ಹೆಚ್ಚುವರಿ ಭದ್ರತೆ ಇರುವ ಬ್ಯಾರಕ್ನಲ್ಲಿ ಇಡಲಾಗಿದೆ. ಹೈ ಸೆಕ್ಯೂರಿಟಿ ಬ್ಯಾರಕ್ನ 15ನೇ ಅಂದರೆ ಕೊನೆಯ ಸೆಲ್ನಲ್ಲಿ ದರ್ಶನ್ ಅನ್ನು ಇಡಲಾಗಿದೆ. ಆ ಬ್ಯಾರಕ್ನಲ್ಲಿ ನಾಲ್ಕು ಜನ ಇತರೆ ಕೈದಿಗಳಿದ್ದಾರೆ. ಒಂದೊಂದು ಸೆಲ್ನಲ್ಲಿ ಒಬ್ಬೊಬ್ಬರೇ ಕೈದಿಗಳಿದ್ದಾರೆ. ದರ್ಶನ್ ಕಾವಲಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಆ ಸಿಬ್ಬಂದಿಗೆ ಬಾಡಿ ಕ್ಯಾಮ್ ಅಳವಡಿಸಲಾಗಿದ್ದು, 24 ಗಂಟೆಗಳ ಕಾಲವೂ ದರ್ಶನ್ ಮೇಲೆ ನಿಗಾವಣೆ ಇರಲಿದೆ’ ಎಂದಿದ್ದಾರೆ ಶೇಷ.
ಜೈಲಿನ ಸಿಬ್ಬಂದಿಗೂ ಸಹ ಮೊಬೈಲ್ ನಿಷೇಧ ಮಾಡಲಾಗಿದೆ. 3 ಸಿಸಿ ಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ. ಸದ್ಯಕ್ಕೆ ಕಾಲ್ ಜಾಮರ್ ಇಲ್ಲ, ಆದರೆ ಹೊಸ ಮಾದರಿಯ ಕಾಲ್ ಜಾಮರ್ ಅನ್ನು ಅಳವಡಿಸಲು ಸಿದ್ದತೆ ನಡೆಸಲಾಗಿದೆ. ಕೈದಿಯ ಇತರೆ ಕೈದಿಗಳಿಗೆ ಯಾವ ನಿಯಮ ಅನ್ವಯ ಆಗುತ್ತದೆಯೋ ಅದೇ ಕಾನೂನು ದರ್ಶನ್ಗೂ ಸಹ ಅನ್ವಯ ಆಗುತ್ತದೆ. ನಮ್ಮ ಮೇಲೆ ಸಹ ಯಾವುದೇ ರಾಜಕಾರಣಿಗಳ ಒತ್ತಡ ಅಥವಾ ಹಿರಿಯ ಅಧಿಕಾರಿಗಳ ಒತ್ತಡ ಇಲ್ಲ. ನಾವು ನಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಲಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಶುರುವಾಯ್ತು ಸಮಸ್ಯೆ, ಜೈಲಧಿಕಾರಿಗಳ ಬಳಿ ಮನವಿ
ದರ್ಶನ್ ತಮಗೆ ಬೆನ್ನು ನೋವು ಹಾಗೂ ಕೈಯಿ ನೋವು ಉಂಟಾಗಿದೆ ವೆಸ್ಟರ್ನ್ ಟಾಯ್ಲೆಟ್ ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ. ವೈದ್ಯಾಧಿಕಾರಿಗಳೊಟ್ಟಿಗೆ ಚರ್ಚಿಸಿ ನಾವು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಇನ್ನು ಕೈದಿಗಳಿಗೆ ಟಿವಿ ವ್ಯವಸ್ಥೆ ಮಾಡುವ ಸೌಲಭ್ಯ ಇದೆ. ಆದರೆ ದರ್ಶನ್ ಟಿವಿ ಕೇಳಿಲ್ಲ, ಅವರು ಟಿವಿ ಕೇಳಿದರೆ ಖಂಡಿತ ಒದಗಿಸುತ್ತೇವೆ’ ಎಂದಿದ್ದಾರೆ. ಒಟ್ಟಾರೆಯಾಗಿ ಜೈಲಿನ ನಿಯಮಗಳ ಅನುಸಾರ ಏನು ಸೌಕರ್ಯ ನೀಡಬೇಕೋ ಅದನ್ನು ನೀಡಲಾಗುತ್ತಿದೆ. ಇನ್ನು ದರ್ಶನ್ ಭೇಟಿಗೆ ಬರುವವರ ಮೇಲೆ ನಿರ್ಬಂಧ ಹೇರಲಾಗಿದೆ. ಮೊದಲ ರಕ್ತ ಸಂಬಂಧಿಗಳು ಮತ್ತು ಅವರ ವಕೀಲರು ಮಾತ್ರವೇ ದರ್ಶನ್ ಅವರನ್ನು ಭೇಟಿ ಮಾಡಬಹುದಾಗಿದೆ ಇನ್ನಿತರರು ಭೇಟಿ ಮಾಡುವಂತಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ ಶೇಷ.
ಬಳ್ಳಾರಿ ಜೈಲಿನ ಕ್ಯಾಂಟೀನ್ ಇನ್ನಿತರೆಗಳನ್ನು ದರ್ಶನ್ ಬಳಸಬಹುದಾಗಿದೆ. ಅದಕ್ಕೆಲ್ಲ ಪ್ರತ್ಯೇಕ ನಿಯಮಗಳಿವೆ. ಅದನ್ನು ಅವರು ಪಾಲಿಸಬೇಕಿದೆ. ಇನ್ನು ದರ್ಶನ್ ಜಿಮ್ ಅಥವಾ ಇನ್ಯಾವುದೇ ವಸ್ತುಗಳ ಬೇಡಿಕೆ ಇಟ್ಟರೆ ಖಂಡಿತ ಅವನ್ನೆಲ್ಲ ಕೊಡಲಾಗುವುದಿಲ್ಲ ಏಕೆಂದರೆ ಅವು ನಿಯಮದಲ್ಲಿ ಇಲ್ಲ. ಇನ್ನು ಊಟದ ವ್ಯವಸ್ಥೆಗೆ ನಮಗೆ ಶಿಸ್ತಿನ ನಿಯಮಗಳಿವೆ ಆ ನಿಯಮಗಳನ್ನು ಪಾಲಿಸಿಕೊಂಡೇ ನಾವು ಊಟದ ವ್ಯವಸ್ಥೆ ಮಾಡಲಿದ್ದೇವೆ. ಇತರೆ ಕೈದಿಗಳಿಗೆ ನೀಡುವ ಊಟವೇ ದರ್ಶನ್ಗೂ ನೀಡಲಾಗುತ್ತದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ