ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಶುರುವಾಯ್ತು ಸಮಸ್ಯೆ, ಜೈಲಧಿಕಾರಿಗಳ ಬಳಿ ಮನವಿ
Darshan Thoogudeepa: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಾಮವಾಗಿ ದಿನಕಳೆಯುತ್ತಿದ್ದ ದರ್ಶನ್ಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ಸಮಸ್ಯೆ ಶುರುವಾಗಿದೆ. ಬೆನ್ನು ನೋವು, ಕೈ ನೋವು ಅನುಭವಿಸುತ್ತಿರುವ ನಟ ದರ್ಶನ್, ಶೌಚಾಲಯ ಬದಲಾವಣೆಗಾಗಿ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಅನ್ನು ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಹೊಸತರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ದರ್ಶನ್ ಎದುರಿಸಿದ್ದರು. ಈಗ ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರಗೊಂಡಿದ್ದು, ಸ್ಥಳಾಂತರ ಗೊಳ್ಳುವಾಗಲೇ ಕೈಗೆ ಬ್ಯಾಂಡೇಜ್ ಹಾಕಿಕೊಂಡೇ ಬಂದಿದ್ದರು. ಆದರೆ ಇದೀಗ ಮತ್ತೊಂದು ಆರೋಗ್ಯ ಸಮಸ್ಯೆಯನ್ನು ದರ್ಶನ್ ಎದುರಿಸುತ್ತಿದ್ದು, ಜೈಲು ಅಧಿಕಾರಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಅನ್ನು ಬಳ್ಳಾರಿ ಜೈಲಿನ 15ನೇ ಬ್ಯಾರಕ್ನಲ್ಲಿ ಇರಿಸಲಾಗಿದೆ. ವಿಶೇಷ ಭದ್ರತೆ ಉಳ್ಳ ಬ್ಯಾರಕ್ ಇದಾಗಿದೆ. ಆದರೆ ಈ ಬ್ಯಾರಕ್ನಲ್ಲಿ ಶೌಚಾಲಯವು ಭಾರತೀಯ ಶೈಲಿಯದ್ದು ಅಂದರೆ ಎರಡೂ ಮೊಣಕಾಲು ಮಡಚಿ ಕುಳಿತುಕೊಳ್ಳುವ ಶೈಲಿಯದ್ದಾಗಿದೆ. ಇದು ದರ್ಶನ್ರ ತಲೆನೋವಿಗೆ ಕಾರಣವಾಗಿದೆ. ಬೆನ್ನು ನೋವು ಹಾಗೂ ಎಡಗೈ ನೋವಿನಿಂದ ಬಳಲುತ್ತಿರುವ ದರ್ಶನ್ಗೆ ಭಾರತೀಯ ಶೈಲಿಯ ಶೌಚಾಲಯವನ್ನು ಬಳಸುವುದು ಕಷ್ಟವಾಗುತ್ತಿದೆಯಂತೆ.
ಈ ಬಗ್ಗೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿರುವ ನಟ ದರ್ಶನ್, ನನಗೆ ಬೆನ್ನು ನೋವು ಹಾಗೂ ಕೈ ನೋವುಗಳಿದ್ದು, ಭಾರತೀಯ ಶೌಚಾಲಯ ಬಳಸುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಈ ಬ್ಯಾರಕ್ಗೆ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ಫಿಟ್ ಮಾಡಿಕೊಡಿ ಇಲ್ಲವಾದರೆ ಸರ್ಜಿಕಲ್ ಚೇರ್ ಅನ್ನಾದರೂ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಜೈಲಧಿಕಾರಿಗಳು, ಜೈಲಿನ ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ:ದರ್ಶನ್ರನ್ನು ಐಸೋಲೇಟ್ ಮಾಡಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ: ಟಿಪಿ ಶೇಷ, ಡಿಐಜಿ
ವರ್ಷಗಳಿಂದಲೂ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ಬಳಸಿದವರಿಗೆ ಅದರಲ್ಲೂ ದೇಹತೂಕ ತುಸು ಹೆಚ್ಚಿರುವವರಿಗೆ ಭಾರತೀಯ ಶೈಲಿಯ ಶೌಚಾಲಯ ಬಳಸುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ದರ್ಶನ್ಗೆ ಬೆನ್ನು ನೋವು, ಸೊಂಟ ನೋವು ಹಾಗೂ ಎಡಗೈ ನೋವು ಸಹ ಇದೆ. ಹೀಗಿರುವಾಗಂತೂ ಭಾರತೀಯ ಶೌಚಾಲಯವನ್ನು ಬಳಸುವುದು ಬಹಳ ತ್ರಾಸದಾಯಕವಾಗಿರುತ್ತದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಸ್ವೀಕಾರ ಮಾಡಿದ ಕಾರಣ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ, ಕುರ್ಚಿಯೊಂದರ ಮೇಲೆ ಕುಳಿತು ಸಿಗರೇಟು ಸೇದುತ್ತಾ, ಕಾಫಿ ಹೀರುತ್ತಿರುವ ಚಿತ್ರವೊಂದು ವೈರಲ್ ಆಗಿತ್ತು. ಆ ಚಿತ್ರ ವೈರಲ್ ಆದ ಬಳಿಕ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಇನ್ನಿತರೆ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆಡೆಗೆ ಶಿಫ್ಟ್ ಮಾಡಲಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ