‘ಕ್ಷಮಿಸಿ, ಅದು ದರ್ಶನ್ ಫ್ಯಾನ್ಸ್​ಗೆ ಕೊಟ್ಟ ಟಾಂಟ್ ಅಲ್ಲ’; ಸುದೀಪ್ ಸ್ಪಷ್ಟನೆ

ದರ್ಶನ್ ಅರೆಸ್ಟ್ ಆದ ವಿಚಾರಕ್ಕೆ ಸಂಬಂಧಿಸಿ ಅನೇಕರು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ದರ್ಶನ್ ಈ ಮೊದಲು ಗೆಳೆಯರಾಗಿದ್ದರು. ಈಗ ಅವರ ಗೆಳೆತನ ಮುರಿದು ಬಿದ್ದಿದೆ. ಇತ್ತೀಚೆಗೆ ಸುದೀಪ್ ಮಾತನಾಡಿದ್ದ ವಿಚಾರ ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

‘ಕ್ಷಮಿಸಿ, ಅದು ದರ್ಶನ್ ಫ್ಯಾನ್ಸ್​ಗೆ ಕೊಟ್ಟ ಟಾಂಟ್ ಅಲ್ಲ’; ಸುದೀಪ್ ಸ್ಪಷ್ಟನೆ
ದರ್ಶನ್-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Aug 31, 2024 | 2:43 PM

ನಟ ಸುದೀಪ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ಈ ಹೇಳಿಕೆಯಲ್ಲಿ ಅವರು ‘ನೋಡುವವರಿಗಾಗಿ ಸಿನಿಮಾ ಮಾಡಿ. ನೋಡದೆ ಇದ್ದವರು ನೋಡೋದು ಬೇಡ’ ಎಂದಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದು ದರ್ಶನ್ ಫ್ಯಾನ್ಸ್​ಗೆ ಹೇಳಿದ ಮಾತು ಎಂದು ಅನೇಕರು ಭಾವಿಸಿದ್ದರು. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ಅದು ದರ್ಶನ್ ಫ್ಯಾನ್ಸ್​ಗೆ ಕೊಟ್ಟ ಟಾಂಟ್ ಅಲ್ಲ. ನಾನು ಹೇಳೋದಾದರೆ ನೇರವಾಗಿ ಹೇಳುತ್ತೇನೆ’ ಎಂದಿದ್ದಾರೆ.

ನಡೆದಿದ್ದೇನು?

‘ದರ್ಶನ್ ಹೊರಗೆ ಬರುವವರೆಗೂ ನಾವು ಕನ್ನಡ ಸಿನಿಮಾ ನೋಡಲ್ಲ’ ಎಂದು ದರ್ಶನ್ ಫ್ಯಾನ್ಸ್ ಹೇಳಿದ್ದರು. ಈ ಬೆನ್ನಲ್ಲೇ ಅನೇಕರು ಕನ್ನಡ ಸಿನಿಮಾಗಳು ಸೋಲುತ್ತಿವೆ ಎನ್ನುವ ಮಾತು ಶುರುವಾಯಿತು. ಅನೇಕ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಬಂದು ‘ದಯವಿಟ್ಟು ನಮ್ಮ ಸಿನಿಮಾ ನೋಡಿ’ ಎಂದು ಕೇಳಿಕೊಂಡಿದ್ದರು. ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಸುದೀಪ್ ಅವರು, ‘ನೋಡದೇ ಇದ್ದವರನ್ನು ಬಿಡಿ, ನೋಡುವವರಿಗಾಗಿ ಸಿನಿಮಾ ಮಾಡಿ’ ಎಂದು ಕೇಳಿಕೊಂಡಿದ್ದರು.

ಸ್ಪಷ್ಟನೆ

ಇಂದು (ಆಗಸ್ಟ್ 31) ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ. ‘ಕಲಾವಿದನ (ದರ್ಶನ್) ಅಭಿಮಾನಿಗಳಿಗೆ ಹೇಳಿದೆ ಎಂದುಕೊಳ್ಳಬೇಡಿ. ಕನ್ನಡ ಇಂಡಸ್ಟ್ರಿಯಲ್ಲಿ ನಿಂತು ಕನ್ನಡ ಸಿನಿಮಾ ನೋಡಿ ಎಂದು ಭಿಕ್ಷೆ ಬೇಡೋದು ತಪ್ಪು. ಬೇರೆಯವರಿಗೆ ಹೇಗೆ ಕಾಣುತ್ತೇವೆ ಯೋಚಿಸಿ. ಕರ್ನಾಟಕದಲ್ಲಿ ಕೇವಲ 30 ಲಕ್ಷ ಜನರು ಮಾತ್ರ ಸಿನಿಮಾ ನೋಡುತ್ತಿದ್ದಾರೆ. ಆ ಲೆಕ್ಕವೇ ದೊಡ್ಡ ಆಗುತ್ತದೆ. ಗತ್ತು ಬಿಟ್ಟುಕೊಡಬೇಡಿ’ ಎಂದು ಕೇಳಿದ್ದಾರೆ ಸುದೀಪ್.

ಇದನ್ನೂ ಓದಿ: ‘ಮೂವ್​ ಆನ್ ಆಗಲೇಬೇಕು’; ಬಿಗ್ ಬಾಸ್​ ನಿರೂಪಣೆ ಬಗ್ಗೆ ಮೌನಮುರಿದ ಸುದೀಪ್

‘ನಾನು ಯಾರಿಗೂ ಟಾಂಟ್ ಕೊಡುವವನಲ್ಲ. ಹೇಳಿದರೆ ನೇರವಾಗಿ ಹೇಳುತ್ತೇನೆ. ಎಲ್ಲಾ ಫ್ಯಾನ್ಸ್​ಗೆ ನೊವು ಇರುತ್ತದೆ. ಆ ನೋವಲ್ಲಿ ಸಾವಿರ ಮಾತನಾಡುತ್ತಾರೆ, ಕ್ಷಮಿಸಿಬಿಡಿ. ನಮ್ಮ ಫ್ಯಾನ್ಸ್ ತಪ್ಪು ಮಾಡಿದರೆ ಕರೆದು ಹೇಳಬಹುದು. ಬೇರೆಯವರ ಬಗ್ಗೆ ನಮಗೆ ಗೊತ್ತಿಲ್ಲ. ಆ ಅಧಿಕಾರವೂ ಬೇಡ. ನಾನು ಕರೆಕ್ಷನ್ ಮಾಡೋಕೆ ಹುಟ್ಟಿಲ್ಲ. ಸರಿ ಹೋಗಲು ಟೈಮ್ ಕೊಡಿ. ಏನಾದರೂ ಇದ್ದರೆ ನೇರವಾಗಿ ಹೇಳ್ತೀನಿ. ಎಲ್ಲವನ್ನೂ ಲಿಂಕ್ ಮಾಡಬೇಡಿ’ ಎಂದು ಕೇಳಿದ್ದಾರೆ ಕಿಚ್ಚ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.