ಸಾಯಿ ಪಲ್ಲವಿಗಿತ್ತು ಶಂಕರ್​ ನಾಗ್ ಜೊತೆ ಕೆಲಸ ಮಾಡೋ ಆಸೆ

ಸಾಯಿ ಪಲ್ಲವಿ ಅವರು ಇತ್ತೀಚಿಗಿನ ಹೀರೋಯಿನ್. ಸಾಯಿ ಪಲ್ಲವಿ ಜನಿಸುವುದಕ್ಕೂ ಎರಡು ವರ್ಷ ಮೊದಲೇ ಶಂಕರ್ ನಾಗ್ ನಿಧನ ಹೊಂದಿದ್ದರು. ಆದಾಗ್ಯೂ ಶಂಕರ್ ನಾಗ್ ಅವರ ಕೆಲಸಗಳಿಂದ ಸಾಯಿ ಪಲ್ಲವಿ ಅವರು ಪ್ರಭಾವಿತರಾಗಿದ್ದಾರೆ ಅನ್ನೋದು ವಿಶೇಷ.

ಸಾಯಿ ಪಲ್ಲವಿಗಿತ್ತು ಶಂಕರ್​ ನಾಗ್ ಜೊತೆ ಕೆಲಸ ಮಾಡೋ ಆಸೆ
ಸಾಯಿ ಪಲ್ಲವಿ-ಶಂಕರ್ ನಾಗ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 31, 2024 | 9:59 AM

ಶಂಕರ್ ನಾಗ್ ಅವರು ಇಂದು ನಮ್ಮ ಜೊತೆಗೆ ಇಲ್ಲ. ಅವರು ಶ್ರೇಷ್ಠ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಆಗಿದ್ದರು. ಅವರು ಅಪಘಾತದಲ್ಲಿ ನಿಧನ ಹೊಂದಿದ್ದು ನಿಜಕ್ಕೂ ಬೇಸರದ ವಿಚಾರ. ಅವರ ಜೊತೆ ಕೆಲಸ ಮಾಡಬೇಕು ಎಂಬುದು ಹಲವರ ಆಸೆ ಆಗಿತ್ತು. ಆದರೆ, ಅನೇಕರಿಗೆ ಇದು ಸಾಧ್ಯವಾಗಿಲ್ಲ. ಈಗಿನ ಜರನೇಷನ್​ನವರು ಕೂಡ ಈ ರೀತಿಯ ಕನಸು ಕಂಡಿದ್ದರು. ಸಾಯಿ ಪಲ್ಲವಿ ಅವರು ಕೂಡ ಈ ಸಾಲಿಗೆ ಸೇರುತ್ತಾರೆ.

ಸಾಯಿ ಪಲ್ಲವಿ ಅವರು ಇತ್ತೀಚಿಗಿನ ಹೀರೋಯಿನ್. ಸಾಯಿ ಪಲ್ಲವಿ ಜನಿಸುವುದಕ್ಕೂ ಎರಡು ವರ್ಷ ಮೊದಲೇ ಶಂಕರ್ ನಾಗ್ ನಿಧನ ಹೊಂದಿದ್ದರು. ಆದಾಗ್ಯೂ ಶಂಕರ್ ನಾಗ್ ಅವರ ಕೆಲಸಗಳಿಂದ ಸಾಯಿ ಪಲ್ಲವಿ ಅವರು ಪ್ರಭಾವಿತರಾಗಿದ್ದಾರೆ. ಅವರು ಈ ಮೊದಲು ಈ ವಿಚಾರವನ್ನು ಹೇಳಿಕೊಂಡಿದ್ದರು. ಅವರ ನಟನೆಯ ‘ಗಾರ್ಗಿ’ ಚಿತ್ರ ಕನ್ನಡಕ್ಕೂ ಡಬ್ ಆಗಿತ್ತು. ಇದರ ಪ್ರಚಾರಕ್ಕಾಗಿ ಅವರು ಆ್ಯಂಕರ್ ಅನುಶ್ರೀ ಅವರ ಚಾನೆಲ್​ಗೆ ಬಂದಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಆಗ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದರು.

‘ಕನ್ನಡದಲ್ಲಿ ಯಾರ ಜೊತೆಗೆ ಕೆಲಸ ಮಾಡಬೇಕು ಎನ್ನುವ ಆಸೆ ಇದೆ’ ಎಂದು ಅನುಶ್ರೀ ಅವರು ಸಾಯಿ ಪಲ್ಲವಿ ಅವರಿಗೆ ಕೇಳಿದರು. ‘ಶಂಕರ್ ನಾಗ್ ಬದುಕಿದ್ದರೆ ಅವರ ಜೊತೆ ಕೆಲಸ ಮಾಡುತ್ತಿದ್ದೆ’ ಎಂದಿದ್ದರು. ಈ ಮೂಲಕ ಶಂಕರ್ ನಾಗ್ ಮೇಲಿನ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದರು.

View this post on Instagram

A post shared by ARJUN 💫 (@arjun1_editzz)

ಇದನ್ನೂ ಓದಿ: ಶಂಕರ್ ನಾಗ್ ತಾಕತ್ತು ಎಂಥದ್ದು? ‘ಜನ್ಮ ಜನ್ಮದ’ ಕಥೆ ವಿವರಿಸಿದ ರೋಹಿತ್ ಶ್ರೀನಾಥ್

2022ರಲ್ಲಿ ಅವರು ನಟನೆಯ ‘ಗಾರ್ಗಿ’ ಬಳಿಕ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ ಅವರು ‘ಅಮರನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.      ಈ ಚಿತ್ರ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಅವರು ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಸಖತ್ ನಿರೀಕ್ಷೆ ಇದೆ. ಈ ಚಿತ್ರ 2025ರ ಅಂತ್ಯಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:56 am, Sat, 31 August 24

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ