ಮತ್ತೆ ತಾಯಿ ಸಾಂಗ್​ಗೆ ಪ್ರೇಮ್ ಧ್ವನಿ​; ‘ಪರಿಮಳ ಡಿಸೋಜಾ’ ಚಿತ್ರದ ಗೀತೆಗೆ ಕೆ. ಕಲ್ಯಾಣ್​ ಸಾಹಿತ್ಯ

| Updated By: ರಾಜೇಶ್ ದುಗ್ಗುಮನೆ

Updated on: Feb 21, 2023 | 8:30 AM

Prem Songs | K Kalyan: ‘ಅಮ್ಮ ಎಂಬ ಹೆಸರೇ ಆತ್ಮ ಬಲ..’ ಹಾಡನ್ನು ಕೆ. ಕಲ್ಯಾಣ್ ಬರೆದಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಈ ಗೀತೆ ರಿಲೀಸ್​ ಆಗಿದೆ.

ಮತ್ತೆ ತಾಯಿ ಸಾಂಗ್​ಗೆ ಪ್ರೇಮ್ ಧ್ವನಿ​; ‘ಪರಿಮಳ ಡಿಸೋಜಾ’ ಚಿತ್ರದ ಗೀತೆಗೆ ಕೆ. ಕಲ್ಯಾಣ್​ ಸಾಹಿತ್ಯ
‘ಪರಿಮಳ ಡಿಸೋಜಾ’ ಸಿನಿಮಾ ತಂಡ. ಜೋಗಿ ಪ್ರೇಮ್​
Follow us on

‘ಜೋಗಿ’ ಪ್ರೇಮ್​ (Jogi Prem) ಅವರು ಬಹುಮುಖ ಪ್ರತಿಭೆ. ನಿರ್ದೇಶಕನಾಗಿ, ನಟನಾಗಿ, ಗೀತರಚನಕಾರನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಅವರು ಫೇಮಸ್​. ಅವರ ಕಂಠದಲ್ಲಿ ತಾಯಿ ಸೆಂಟಿಮೆಂಟ್​ ಗೀತೆ ಮೂಡಿಬಂದರೆ ಆ ಹಾಡಿನ ಮೆರುಗು ಹೆಚ್ಚುತ್ತದೆ. ಈವರೆಗೂ ಅಂಥ ಒಂದಷ್ಟು ಗೀತೆಗಳಿಗೆ ಪ್ರೇಮ್​ ಧ್ವನಿ ನೀಡಿದ್ದುಂಟು. ‘ಎಕ್ಸ್​ಕ್ಯೂಸ್​ ಮೀ’ ಚಿತ್ರದ ‘ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ..’ ಹಾಡು ಇಂದಿಗೂ ಕೇಳುಗರ ಫೇವರಿಟ್​. ‘ಜೋಗಿ’ ಸಿನಿಮಾದಲ್ಲಿನ ‘ಬೇಡುವೆನು ವರವನ್ನು..’ ಗೀತೆ ಎವರ್​ಗ್ರೀನ್​ ಆಗಿದೆ. ಅದೇ ರೀತಿ ಅವರು ಮತ್ತೊಂದು ಹಾಡಿಗೆ ಧ್ವನಿ ನೀಡಿದ್ದಾರೆ. ಈ ಸಿನಿಮಾದ ಹೆಸರು ‘ಪರಿಮಳ ಡಿಸೋಜಾ’ (Parimala D’souza). ಅದರ ಲಿರಿಕಲ್​ ವಿಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ತಾಯಿ ಕುರಿತ ಹಾಡಿನ ಅನಾವರಣ ಆದ್ದರಿಂದ ಮೂವರು ತಾಯಂದಿರನ್ನು ಈ ವೇಳೆ ಸನ್ಮಾನಿಸಲಾಯಿತು.

‘ಪರಿಮಳ ಡಿಸೋಜಾ’ ಸಿನಿಮಾಗೆ ಡಾ. ಗಿರಿಧರ್​ ಹೆಚ್​.ಟಿ. ನಿರ್ದೇಶನ ಮಾಡಿದ್ದಾರೆ. ತಾಯಿ ಕುರಿತಾದ ‘ಅಮ್ಮ ಎಂಬ ಹೆಸರೇ ಆತ್ಮ ಬಲ..’ ಹಾಡನ್ನು ಕೆ. ಕಲ್ಯಾಣ್ ಬರೆದಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಈ ಗೀತೆ ರಿಲೀಸ್​ ಆಗಿದೆ. ಶೀಘ್ರದಲ್ಲೇ ‘ಪರಿಮಳ ಡಿಸೋಜಾ’ ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: South Indian Hero: ಸಿನಿಪ್ರಿಯರಿಗೆ ‘ಸೌತ್​ ಇಂಡಿಯನ್​ ಹೀರೋ’ ಬಗ್ಗೆ ಯಾಕಿಷ್ಟು ಕುತೂಹಲ? ಇಲ್ಲಿದೆ ಉತ್ತರ..

ಇದನ್ನೂ ಓದಿ
ಮತ್ತೆ ಹೀರೋ ಆಗಿ ನಟಿಸಲಿರುವ ಜೋಗಿ ಪ್ರೇಮ್​; ಈ ಬಾರಿ ನಿರ್ದೇಶನ ಮಾಡೋದು ಯಾರು?
ಅಂಬರೀಷ್​ ಎದುರು ಎಲೆಕ್ಷನ್​ ನಿಲ್ಲೋಕೆ ಪ್ರೇಮ್​ಗೆ ಬಂದಿತ್ತು ಆಫರ್​; ನಿರಾಕರಿಸಿದ್ದಕ್ಕೆ ಕಾರಣ ತಿಳಿಸಿದ ಡೈರೆಕ್ಟರ್​
ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ; ಸುದ್ದಿಗೋಷ್ಠಿ ಕರೆದು ಕಿಡಿಕಾರಿದ ಜೋಗಿ ಪ್ರೇಮ್​
ರಜನಿಕಾಂತ್​, ಪ್ರಭಾಸ್ ಸಿನಿಮಾ ಮಾಡೋಕೆ ಕರೆದಿದ್ರು, ನಾನು ಹೋಗಿಲ್ಲ; ಜೋಗಿ ಪ್ರೇಮ್​

ಮರ್ಡರ್ ಮಿಸ್ಟರಿ, ಆಕ್ಷನ್, ಸೆಂಟಿಮೆಂಟ್ ಮುಂತಾದ ಅಂಶಗಳನ್ನು ಒಳಗೊಂಡಿರುವ ‘ಪರಿಮಳ ಡಿಸೋಜಾ’ ಚಿತ್ರದಲ್ಲಿ ಹಿರಿಯ ನಟಿ ಭವ್ಯ ಅವರು ತಾಯಿ ಪಾತ್ರ ಮಾಡಿದ್ದಾರೆ. ‘ನಿರ್ದೇಶಕರು ಹೇಳಿದ ಕಥೆ ನನಗೆ ಇಷ್ಟವಾಯಿತು. ಆದ್ದರಿಂದ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಹಾಡು ತುಂಬಾ ಚೆನ್ನಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ನಟಿ ಭವ್ಯ ಶುಭ ಕೋರಿದ್ದಾರೆ.

ಇದನ್ನೂ ಓದಿ: Vinod Prabhakar: ಮಾಡರ್ನ್​ ಮಹಾಲಕ್ಷ್ಮಿಗೆ ಮಾಲಾಶ್ರೀ ಸಾತ್​; ‘ಲಂಕಾಸುರ’ ಚಿತ್ರದ ಹೊಸ ಹಾಡು ರಿಲೀಸ್​ ಮಾಡಿದ ಸ್ಟಾರ್​ ನಟಿ

ಹಾಡಿನ ಬಗ್ಗೆ ಕೆ. ಕಲ್ಯಾಣ್​ ಮಾತನಾಡಿದರು. ‘ತಾಯಿ ಬಗ್ಗೆ ಗೀತೆ ಬರೆಯಬೇಕೆಂದರೆ ಏನೋ ಒಂಥರ ಖುಷಿ. ಈ ಹಾಡನ್ನು ಶೀಘ್ರವಾಗಿ ಬರೆಯಬೇಕಿತ್ತು. ಆಗ ನಿರ್ಮಾಪಕರು ನನ್ನ ಅತ್ತಿಗೆಯ ಮೂಲಕ ಬೇಗ ಬರೆದುಕೊಡಲು ಹೇಳಿಸಿದರು. ಆಗ ನನಗೆ ತಿಳಿಯಿತು ನಿರ್ಮಾಪಕರು ನಮಗೆ ಬಳಗದವರು ಎಂದು. ಅಮ್ಮನ ಹಾಡನ್ನು ಪ್ರೇಮ್ ತುಂಬ ಚೆನ್ನಾಗಿ ಹಾಡಿದ್ದಾರೆ’ ಎಂದು ಕಲ್ಯಾಣ್ ಮೆಚ್ಚುಗೆ ಸೂಚಿಸಿದ್ದಾರೆ.

‘ಪರಿಮಳ ಡಿಸೋಜಾ’ ಚಿತ್ರದಲ್ಲಿ ಶ್ರೀನಿವಾಸ್​ ಪ್ರಭು, ಕೋಮಲಾ ಬನವಾಸಿ, ಸುನಿಲ್​ ಮುಂತಾದವರು ಬಣ್ಣ ಹಚ್ಚಿದ್ದಾರೆ. ನಿರ್ಮಾಪಕ ವಿನೋದ್ ಶೇಷಾದ್ರಿ ಕೂಡ ನಟಿಸಿದ್ದಾರೆ. ಸಂಜೀವ್​ ರೆಡ್ಡಿ ಸಂಕಲನ, ರಾಮು ಛಾಯಾಗ್ರಹಣ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:00 am, Tue, 21 February 23