ಹಾಸ್ಯ ನಟ ಜಾನಿ ಲಿವರ್ ಎಷ್ಟು ಶ್ರೀಮಂತ ಗೊತ್ತಾ? ಯಾವ ಸ್ಟಾರ್ ಹೀರೋಗೂ ಕಡಿಮೆ ಏನಿಲ್ಲ

ಪ್ರಸಿದ್ಧ ಬಾಲಿವುಡ್ ಹಾಸ್ಯನಟ ಜಾನಿ ಲಿವರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಬಡತನದಿಂದ ಬಂದ ಜಾನಿ, ಇಂದು 300 ಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಅವರ ಯಶಸ್ಸಿನ ಹಿಂದಿನ ಕಥೆ, ಆದಾಯದ ಮೂಲಗಳು, ವೈಯಕ್ತಿಕ ಜೀವನದ ವಿವರಗಳು ಮತ್ತು ಆಸ್ತಿ ವಿವರಗಳನ್ನು ಈ ಲೇಖನ ವಿವರಿಸುತ್ತದೆ.

ಹಾಸ್ಯ ನಟ ಜಾನಿ ಲಿವರ್ ಎಷ್ಟು ಶ್ರೀಮಂತ ಗೊತ್ತಾ? ಯಾವ ಸ್ಟಾರ್ ಹೀರೋಗೂ ಕಡಿಮೆ ಏನಿಲ್ಲ
ಜಾನಿ
Updated By: ರಾಜೇಶ್ ದುಗ್ಗುಮನೆ

Updated on: Aug 14, 2025 | 8:00 AM

ಬಾಲಿವುಡ್‌ನ ಪ್ರಸಿದ್ಧ ಹಾಸ್ಯನಟ ಜಾನಿ ಲಿವರ್ (Johny Lever) ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜಾನಿ ಲಿವರ್ ಇಂದು (ಆಗಸ್ಟ್ 14) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಾನಿ 80ರ ದಶಕದಿಂದಲೂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಪ್ರತಿ ಪೈಸೆಗೂ ಕಷ್ಟಪಡುತ್ತಿದ್ದ ಜಾನಿ ಲಿವರ್, ಇಂದು ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ. ಅವರು ಯಾವ ಸ್ಟಾರ್ ಹೀರೋಗೂ ಕಡಿಮೆ ಏನಿಲ್ಲ ಅನ್ನೋದು ವಿಶೇಷ.

ಆರ್ಥಿಕ ಸಂಕಷ್ಟದಿಂದಾಗಿ ಜಾನಿ ಏಳನೇ ತರಗತಿಯವರೆಗೆ ಓದಿದ್ದರು. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಾನ್ ಕೂಡ ಮಾರುತ್ತಿದ್ದರು. ಒಂದು ಕಾಲದಲ್ಲಿ ದಿನಕ್ಕೆ 5 ರೂ. ಸಂಪಾದಿಸುತ್ತಿದ್ದ ಜಾನಿಗೆ ಇಂದು ಯಾವುದರ ಕೊರತೆಯೂ ಇಲ್ಲ.

ಕೆಲವು ವರದಿಯ ಪ್ರಕಾರ, ಜಾನಿ ಲಿವರ್ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಜಾನಿ ಲಿವರ್ ಸುಮಾರು 300 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅಭಿಮಾನಿಗಳ ಮನಸ್ಸಿನಲ್ಲಿ ಜಾನಿ ಇಷ್ಟೊಂದು  ಸಂಪತ್ತನ್ನು ಹೇಗೆ ಸಂಗ್ರಹಿಸಿದರು ಎಂಬ ಪ್ರಶ್ನೆ ಮೂಡಬಹುದು. ಹಾಗಾದರೆ ಅವರ ಮುಖ್ಯ ಆದಾಯದ ಮೂಲ ಸಿನಿಮಾ ಹಾಗೂ ಸ್ಟೇಜ್ ಪರ್ಫಾರ್ಮೆನ್ಸ್. ಜಾನಿ ಲಿವರ್ ಸಿನಿ ಮತ್ತು ಟಿವಿ ಕಲಾವಿದರ ಸಂಘ ಮತ್ತು ಮಿಮಿಕ್ರಿ ಕಲಾವಿದರ ಸಂಘದ ಅಧ್ಯಕ್ಷರು. ಅವರು ವರ್ಷಕ್ಕೆ ಕೋಟ್ಯಂತರ ರೂಪಾಯಿ ದುಡಿಯುತ್ತಿದ್ದರು.

ಇದನ್ನೂ ಓದಿ
ಗೌತಮ್ ಕೈಯಲ್ಲಿ ತಾಯಿಯ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು
20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದ ‘ಸು ಫ್ರಮ್ ಸೋ’
‘ಸತ್ಯ ಎಲ್ಲಕ್ಕಿಂತ ದೊಡ್ಡದು, ನ್ಯಾಯ ಸಿಗುತ್ತದೆ’; ಪವಿತ್ರಾ ಗೌಡ
ಶ್ವಾನಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಹೇಳೋದೇನು?

ಇದಲ್ಲದೆ, ಜಾನಿ ಮುಂಬೈನ ಅಂಧೇರಿ ಪಶ್ಚಿಮದ ಲೋಖಂಡ್ವಾಲಾದಲ್ಲಿ ಐಷಾರಾಮಿ 3BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಮುಂಬೈ ನಗರದಲ್ಲಿ ಇನ್ನೂ ಕೆಲವು ಫ್ಲಾಟ್‌ಗಳು ಮತ್ತು ಸುಂದರವಾದ ವಿಲ್ಲಾ ಕೂಡ ಇದೆ. ಜಾನಿಗೆ ಕಾರುಗಳೆಂದರೆ ತುಂಬಾ ಇಷ್ಟ. ಅವರ ಬಳಿ ಆಡಿ Q7, ಹೋಂಡಾ ಅಕಾರ್ಡ್, ಟೊಯೋಟಾ ಫಾರ್ಚೂನರ್‌ನಂತಹ ದುಬಾರಿ ಕಾರುಗಳಿವೆ.

ಇದನ್ನೂ ಓದಿ: ಜಾನಿ ಲಿವರ್ ಶ್ರೀಮಂತ ಕಾಮಿಡಿಯನ್ ಅನಿಸಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ

ಜಾನಿ ಲಿವರ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು 1984 ರಲ್ಲಿ ಸುಜಾತಾ ಅವರನ್ನು ವಿವಾಹವಾದರು. ಜಾನಿ ಲಿವರ್‌ಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮತ್ತು ಮಗಳು. ಅವರ ಇಬ್ಬರೂ ಮಕ್ಕಳು ತಮ್ಮ ತಂದೆಯಂತೆಯೇ ಹಾಸ್ಯನಟರು. ಜಾನಿ ಲಿವರ್ ಇತ್ತೀಚೆಗೆ ಸಿನಿಮಾ ಮಾಡೋದು ಕಡಿಮೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.