ಜೂನಿಯರ್​ ಎನ್​ಟಿಆರ್​ಗೆ ಕನ್ನಡದ ಮೇಲೆ ಇದೆ ವಿಶೇಷ ಪ್ರೀತಿ..

ಜೂನಿಯರ್ ಎನ್​ಟಿಆರ್ ಅವರು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರಿಗೆ ಕನ್ನಡದ ಬಗ್ಗೆ ನಂಟು ಬೆಳೆದಿದ್ದು ಚಿಕ್ಕ ವಯಸ್ಸಿನಿಂದಲೇ. ಇದಕ್ಕೆ ಕಾರಣವೂ ಇದೆ. ಜೂನಿಯರ್​ ಎನ್​ಟಿಆರ್ ಅವರ ತಾಯಿ ಕನ್ನಡದವರು.

ಜೂನಿಯರ್​ ಎನ್​ಟಿಆರ್​ಗೆ ಕನ್ನಡದ ಮೇಲೆ ಇದೆ ವಿಶೇಷ ಪ್ರೀತಿ..
Jr NTR
Edited By:

Updated on: Nov 01, 2024 | 7:46 AM

ಜೂನಿಯರ್​ ಎನ್​ಟಿಆರ್ ಅವರು ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು ಅನ್ನೋದು ಅನೇಕರಿಗೆ ಗೊತ್ತು. ಕನ್ನಡದ ರಾಜ್ಯೋತ್ಸವದ ದಿನ ಆ ವಿಚಾರವನ್ನು ನಾವು ಇಂದು ಮತ್ತೊಮ್ಮೆ ಹೇಳುತ್ತಿದ್ದೇವೆ. ಜೂನಿಯರ್​ ಎನ್​ಟಿಆರ್ ನಟನೆಯ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆದರೆ ತಾವೇ ಅದನ್ನು ಡಬ್ ಮಾಡುತ್ತಾರೆ ಅನ್ನೋದು ವಿಶೇಷ. ಕನ್ನಡದಲ್ಲಿ ಅವರು ಹಾಡನ್ನು ಹಾಡಿದ್ದರು. ಅವರು ಕರ್ನಾಟಕದಲ್ಲಿ ಸುದ್ದಿಗೋಷ್ಠಿಯನ್ನು ಕನ್ನಡದಲ್ಲೇ ಮಾಡುತ್ತಾರೆ.

ಜೂನಿಯರ್ ಎನ್​ಟಿಆರ್ ಅವರು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರಿಗೆ ಕನ್ನಡದ ಬಗ್ಗೆ ನಂಟು ಬೆಳೆದಿದ್ದು ಚಿಕ್ಕ ವಯಸ್ಸಿನಿಂದಲೇ. ಇದಕ್ಕೆ ಕಾರಣವೂ ಇದೆ. ಜೂನಿಯರ್​ ಎನ್​ಟಿಆರ್ ಅವರ ತಾಯಿ ಕನ್ನಡದವರು. ಹೀಗಾಗಿ, ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಬೆಳೆದಿದೆ ಎನ್ನಬಹುದು.

ಇನ್ನು, ಪುನೀತ್ ರಾಜ್​ಕುಮಾರ್ ಜೊತೆಗಿನ ಗೆಳೆತನದ ಕಾರಣದಿಂದಲೂ ಜೂನಿಯರ್ ಎನ್​ಟಿಆರ್ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಹುಟ್ಟಿದೆ ಎಂದು ಹೇಳಬಹುದು. ಪುನೀತ್ ಅವರ ಜೊತೆ ಜೂನಿಯರ್​ ಎನ್​ಟಿಆರ್​ಗೆ ವಿಶೇಷ ಪ್ರೀತಿ ಇತ್ತು. ಪುನೀತ್ ಸಿನಿಮಾಗಾಗಿ ‘ಗೆಳೆಯ..’ ಹಾಡನ್ನು ಕನ್ನಡದಲ್ಲೇ ಹಾಡಿದ್ದರು ಜೂನಿಯರ್ ಎನ್​ಟಿಆರ್.

ಈ ಮೊದಲು ರಿಲೀಸ್ ಆದ ‘ಆರ್​ಆರ್​ಆರ್’, ‘ದೇವರ’ ಸಿನಿಮಾಗಳನ್ನು ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಜೂನಿಯರ್ ಎನ್​ಟಿಆರ್ ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಸ್ಟಾರ್ ಹೀರೋ ಎಂದಾಗ ಈ ರೀತಿಯ ರಿಸ್ಕ್​ನ ತೆಗೆದುಕೊಳ್ಳೋಕೆ ಯಾರೂ ಮುಂದಾಗುವುದಿಲ್ಲ. ಆದರೆ, ಜೂನಿಯರ್​ ಎನ್​ಟಿಆರ್ ಅವರು ಈ ರೀತಿಯ ಸಾಧನೆ ಮಾಡಿದ್ದರು. ಇದು ಅವರಿಗೆ ಕನ್ನಡದ ಮೇಲಿನ ಪ್ರೀತಿಗೆ ಸಿಕ್ಕ ಉದಾಹರಣೆ ಆಗಿದೆ.

ಇದನ್ನೂ ಓದಿ: ‘ಬಘೀರ’ ಯಶಸ್ಸು: ಪುನೀತ್ ರಾಜ್​ಕುಮಾರ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ

ಸಿನಿಮಾ ವಿಚಾರಕ್ಕೆ ಬರೋದಾದರೆ, ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಅವರು ಈಗ ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಕೂಡ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಪ್ರಶಾಂತ್ ನೀಲ್ ಸಿನಿಮಾದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us