
ಹೊಸ ಚಿತ್ರತಂಡಗಳು ಬಣ್ಣದ ಲೋಕಕ್ಕೆ ಬಂದರೆ ಹೊಸತನ ಹೊತ್ತು ತರುತ್ತವೆ. ಅದಕ್ಕೆ ಲೇಟೆಸ್ಟ್ ಉದಾಹಣೆ ಎಂದರೆ ‘ಕೆ ಪಾಪ್’ ಸಿನಿಮಾ. ಕೊರಿಯನ್ (Korean) ಪಾಪ್ ಸಂಸ್ಕೃತಿಯನ್ನು ಬಿಂಬಿಸುವ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ಈ ಸಿನಿಮಾ ಒಂದು ಹೊಸ ಅಲೆ ಸೃಷ್ಟಿ ಮಾಡಲಿದೆ ಎಂಬ ಭರವಸೆ ಮೂಡಿದೆ. ಕೇವಲ ಟೈಟಲ್ ಪ್ರೋಮೋ ಮೂಲಕ ಎಲ್ಲರ ಗಮನ ಸೆಳೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಗರುಡ ರಾಮ್ (Garuda Ram) ಅವರು ಯಮ ಧರ್ಮರಾಯನ ಪಾತ್ರ ಮಾಡಲಿದ್ದಾರೆ. ಟೈಟಲ್ ಪ್ರೋಮೋ ನೋಡಿದ ಎಲ್ಲರಿಗೂ ‘ಕೆ ಪಾಪ್’ (K Pop) ಸಿನಿಮಾ ಮೇಲೆ ನಿರೀಕ್ಷೆ ಮೂಡುವಂತಾಗಿದೆ.
‘ಕೆ ಪಾಪ್’ ಸಿನಿಮಾಗೆ ಕೆವಿನ್ ಲೂಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಒಂದು ಫ್ಯಾಂಟಸಿ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳಲಿದ್ದಾರೆ. ಭಾರತ ಹಾಗೂ ಜಗತ್ತಿನ ವಿವಿಧ ದೇಶಗಳಲ್ಲಿ ಕೊರಿಯನ್ ಪಾಪ್ ಸಂಸ್ಕೃತಿ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ ನಿರ್ದೇಶಕರು. ಶೀರ್ಷಿಕೆಯನ್ನು ತಿಳಿಸುವ ಸಲುವಾಗಿ ಪ್ರೋಮೋ ಬಿಡುಗಡೆ ಮಾಡಲಾಗಿದೆ.
ಪ್ರೋಮೋ ಬಿಡುಗಡೆ ನಂತರ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು. ನಿರ್ದೇಶಕ ಕೆವಿನ್ ಲೂಕ್ ಅವರಿಗೆ ಈ ಸಿನಿಮಾದ ಬರವಣಿಗೆಯಲ್ಲಿ ಲಾವಣ್ಯ ಅವರು ಸಾಥ್ ನೀಡಿದ್ದಾರೆ. ಪ್ರೋಮೋದಲ್ಲಿ ಶನಿಮಹಾತ್ಮ ಹಾಗೂ ಯಮರಾಜನ ಪಾತ್ರಗಳು ಕಾಣಿಸಿಕೊಂಡಿವೆ. ಆದ್ದರಿಂದ ಕೌತುಕ ಮೂಡಿದೆ. ಸಂಜಯ್, ಗರುಡ ರಾಮ್, ವಿಷ್ಣು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
K Pop Kannada Movie Team
ಇದು ಕನಸಿನಲ್ಲಿ ನಡೆಯುವ ಕಹಾನಿ. ಕಥೆಯಲ್ಲಿ 60 ದಿನದ ಗಡುವು ಇದೆ. ಅದು ಯಾಕೆ ಎನ್ನುವುದೇ ಕುತೂಹಲ. ಈ ಪ್ರೋಮೋಗಾಗಿ ಆರು ತಿಂಗಳು ಕೆಲಸ ಮಾಡಿದ್ದೇವೆ. 7 ವಿಎಫ್ ತಂಡಗಳು ಕೆಲಸ ಮಾಡಿವೆ. 60ರಿಂದ 65 ದಿನಗಳ ಕಾಲ ಶೂಟಿಂಗ್ ಮಾಡಲಾಗುವುದು ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ. ಈ ಸಿನಿಮಾಗೆ ಶಶಿಧರ್ ಅವರ ಸಂಕಲನ, ರಾಜ್ ಕಾಂತ್ ಅವರ ಛಾಯಾಗ್ರಹಣ ಇರಲಿದೆ.
ಇದನ್ನೂ ಓದಿ: ಕೊರಿಯನ್ ಸ್ಟಾರ್ ಜೊತೆ ದಿಶಾ ಪಟಾನಿ ಡೇಟಿಂಗ್
ಅಲಗಾನಿ ಕಿರಣ್ ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಮೊದಲಿನಿಂದಲೂ ಹೀರೋ ಆಗಬೇಕು ಎನ್ನುವ ಅಸೆ ಇತ್ತು. ಆದರೆ ಆದು ಆಗಲಿಲ್ಲ. ಈಗ ಸಹೋದರ ಹೀರೋ ಆಗಿದ್ದು, ಆತನ ಆಸೆಗೆ ಬೆಂಬಲವಾಗಿದ್ದೇನೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭಿಲಾಗುವುದು. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.