ಭೂ ಮಾಫಿಯಾ ಕುರಿತ, “ಕದನ ವಿರಾಮ” ಸಿನಿಮಾಕ್ಕೆ ಚಾಲನೆ

|

Updated on: Dec 09, 2023 | 8:20 PM

Sandalwood: ಗೆಲ್ಲುವ ಆಸೆಯನ್ನಿಟ್ಟುಕೊಂಡು, ಒಂದೊಳ್ಳೆ ಕತೆ ಹೇಳುವ ಆಸೆಯನ್ನು ಹೊತ್ತು ಪ್ರತಿ ವಾರ ಹೊಸದೊಂದು ತಂಡ ಗಾಂಧಿನಗರಕ್ಕೆ ಬರುತ್ತದೆ. ಇದೀಗ ಮತ್ತೊಂದು ತಂಡ ಭೂ-ಮಾಫಿಯಾ ಕುರಿತಾದ ಕತೆ ಹೇಳಲು ಬಂದಿದೆ.

ಭೂ ಮಾಫಿಯಾ ಕುರಿತ, ಕದನ ವಿರಾಮ ಸಿನಿಮಾಕ್ಕೆ ಚಾಲನೆ
Follow us on

ಒಟಿಟಿಗಳ ಅಬ್ಬರ ಹಾಗೂ ಒಳ್ಳೆಯ ಸಿನಿಮಾಗಳ ಬೇಡಿಕೆ, ಹೊಸಬರು ಚಿತ್ರರಂಗದಲ್ಲಿ ಗೆಲ್ಲುತ್ತಿರುವ ಉದಾಹರಣೆಗಳಿಂದ ಪ್ರೇರಿತವಾಗಿ ಹೊಸ-ಹೊಸ ತಂಡಗಳು ಚಿತ್ರರಂಗಕ್ಕೆ (Sandalwood) ಕಾಲಿಡುತ್ತಲೇ ಇವೆ. ಹೊಸ ಕತೆಯೊಟ್ಟಿಗೆ ಬರುತ್ತಿರುವ ಹೊಸ ತಂಡಗಳು ಕೆಲವು ಗೆಲ್ಲುತ್ತಿವೆ, ಹಲವು ಸೋಲುತ್ತಿವೆ. ಇದೀಗ ಗೆಲ್ಲುವ ಉತ್ಸಾಹದೊಂದಿಗೆ ಹೊಸ ಸಿನಿಮಾ ತಂಡವೊಂದು ಚಿತ್ರರಂಗಕ್ಕೆ ಕಾಲಿಟ್ಟಿದೆ. ಈ ತಂಡ ಭೂ-ಮಾಫಿಯಾದ ಕತೆ ಹೇಳಲು ಬರುತ್ತಿದೆ.

ಶ್ರೀಬ್ರಹ್ಮಲಿಂಗೇಶ್ವರ ಫಿಲಂಸ್ ಲಾಂಛನದಲ್ಲಿ ಕೆ.ಭಾಸ್ಕರ್ ನಾಯ್ಕ್ (ಮಾರಣಕಟ್ಟೆ) ಹಾಗೂ ಸಾಮ್ರಾಟ್ ಮಂಜುನಾಥ್.ವಿ ಅವರು ಜಂಟಿಯಾಗಿ ‘ಕದನ ವಿರಾಮ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಮುರಳಿ ಎಸ್ ವೈ ನಿರ್ದೇಶನ ಮಾಡುತ್ತಿದ್ದಾರೆ. “ಕದನ ವಿರಾಮ” ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚಿಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಸರಳವಾಗಿ ಮಾಡಲಾಯ್ತು. ಸಿನಿಮಾದ ಮೊದಲ ದೃಶ್ಯಕ್ಕೆ ಬಿಲ್ಡರ್ ಸುರೇಶ್ ಆರಂಭ‌ ಫಲಕ ತೋರಿದರು. ಉದ್ಯಮಿ ಚಿಕ್ಕಣ್ಣ ಕ್ಯಾಮೆರಾ ಚಾಲನೆ ಮಾಡಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಬಂದು ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಇದನ್ನೂ ಓದಿ:ನರಕವಾಯ್ತು ಬಿಗ್​ಬಾಸ್ ಮನೆ: ಇದಕ್ಕೆಲ್ಲ ಕಾರಣ ಯಾರು?

ಈ ಹಿಂದೆ “ರಿವಿಲ್” ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ ಮುರಳಿ ಎಸ್ ವೈ ಅವರಿಗೆ ಎರಡನೇ ಸಿನಿಮಾ ಇದು. ‘ಕದನ ವಿರಾಮ’ ಎಂದರೆ ಭೂಮಿ ಹಾಗೂ ಮನುಷ್ಯನ ನಡುವೆ ನಡೆಯುವ ಕಥೆ. ನಿರ್ಮಾಪಕ ಭಾಸ್ಕರ್ ನಾಯ್ಕ್ ಈ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಐದು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಈ ಸಿನಿಮಾದಲ್ಲಿ ಇರಲಿವೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಿಜೊ ಪಿ ಜಾನ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ‘ಕದನ ವಿರಾಮ’ ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದಲ್ಲಿ ನಡೆಯಲಿದೆ. ಈ ತಿಂಗಳ ಕೊನೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಮುರಳಿ ಎಸ್ ವೈ ಮಾಹಿತಿ ನೀಡಿದರು.

ಈ ಸಿನಿಮಾಕ್ಕೆ ಆಕಾಶ್ ಶೆಟ್ಟಿ ನಾಯಕ. ಆಕಾಶ್ ಶೆಟ್ಟಿ ಈ ಹಿಂದೆ “ನವರಂಗಿ” ಸೇರಿದಂತೆ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಮಾರು ಏಳು ವರ್ಷಗಳ ನಂತರ ಆಕಾಶ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಛಾಯಾಶ್ರೀ “ಕದನ ವಿರಾಮ” ಸಿನಿಮಾದ ನಾಯಕಿ. ಕನ್ನಡ ಚಿತ್ರರಂಗದ ಹಲವು ಹೆಸರಾಂತ ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ