ಬಗೆದಷ್ಟೂ ಬಯಲಾಗುತ್ತಿದೆ ಆ್ಯಂಡಿ-ದಿಗ್ಗಿ ಡ್ರಗ್ಸ್ ಪಾರ್ಟಿ ಲಿಂಕ್..
ಬೆಂಗಳೂರು: ಸ್ಯಾಂಡಲ್‌ವುಡ್ ನಟ ನಟಿಯರ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ರೋಚಕ ಸುದ್ದಿಗಳು ಬಹಿರಂಗಗೊಳ್ಳುತ್ತಿವೆ. ಡ್ರಗ್ಸ್ ದಂಧೆಯ ಸುಳಿಯಲ್ಲಿ ಸ್ಟಾರ್ ಜೋಡಿ ಸಿಕ್ಕಿಕೊಂಡಿದೆ. ಈ ಜೋಡಿಯ ಮುಂಬೈ ಸ್ನೇಹದ ಸ್ಫೋಟಕ ಸುದ್ದಿಗಳು ಎಳೆ ಎಳೆಯಾಗಿ ಬಿಜ್ಜಿಕೊಳ್ಳುತ್ತಿವೆ. ನಿರ್ಮಾಪಕ ನಿರ್ದೇಶಕರಿಗೆ ದಂಪತಿಗಳಿಂದ ಕಿರುಕುಳ: ನಟಿ ಐಂದ್ರಿತಾ ಹಾಗೂ ನಟ ದಿಗಂತ್ ಇಬ್ಬರೂ ರಾತ್ರಿ ಪಾರ್ಟಿ ಮಾಡಿ ಶೂಟಿಂಗ್‌ಗೆ ಲೇಟ್ ಆಗಿ ಬರ್ತಿದ್ದರು. ರಾತ್ರಿಯಲ್ಲಿ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ ದಂಪತಿಗಳು ಬೆಳಗ್ಗೆ ಶೂಟಿಂಗ್‌ಗೆ ತಲುಪಲು ತಡವಾಗುತ್ತಿತ್ತು. ಹೀಗಾಗಿ ಹಣ ಹೂಡಿದ […]
ಬೆಂಗಳೂರು: ಸ್ಯಾಂಡಲ್‌ವುಡ್ ನಟ ನಟಿಯರ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ರೋಚಕ ಸುದ್ದಿಗಳು ಬಹಿರಂಗಗೊಳ್ಳುತ್ತಿವೆ. ಡ್ರಗ್ಸ್ ದಂಧೆಯ ಸುಳಿಯಲ್ಲಿ ಸ್ಟಾರ್ ಜೋಡಿ ಸಿಕ್ಕಿಕೊಂಡಿದೆ. ಈ ಜೋಡಿಯ ಮುಂಬೈ ಸ್ನೇಹದ ಸ್ಫೋಟಕ ಸುದ್ದಿಗಳು ಎಳೆ ಎಳೆಯಾಗಿ ಬಿಜ್ಜಿಕೊಳ್ಳುತ್ತಿವೆ.
ನಿರ್ಮಾಪಕ ನಿರ್ದೇಶಕರಿಗೆ ದಂಪತಿಗಳಿಂದ ಕಿರುಕುಳ: ನಟಿ ಐಂದ್ರಿತಾ ಹಾಗೂ ನಟ ದಿಗಂತ್ ಇಬ್ಬರೂ ರಾತ್ರಿ ಪಾರ್ಟಿ ಮಾಡಿ ಶೂಟಿಂಗ್‌ಗೆ ಲೇಟ್ ಆಗಿ ಬರ್ತಿದ್ದರು. ರಾತ್ರಿಯಲ್ಲಿ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ ದಂಪತಿಗಳು ಬೆಳಗ್ಗೆ ಶೂಟಿಂಗ್‌ಗೆ ತಲುಪಲು ತಡವಾಗುತ್ತಿತ್ತು.
ಹೀಗಾಗಿ ಹಣ ಹೂಡಿದ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ದೊಡ್ಡ ತಲೆನೋವಾಗಿತ್ತು. ಇದರಿಂದ ಸ್ಯಾಂಡಲ್‌ವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಹೋಯ್ತು. ರಾತ್ರಿ ಪೂರ್ತಿ ಪಾರ್ಟಿ ಮಾಡಿ ಬೆಳಗ್ಗೆ ನಿದ್ದೆ ಮಾಡುತ್ತಿದ್ರು. ಶೂಟಿಂಗ್ ಸಮಯಕ್ಕೆ ಸರಿಯಾಗಿ ಭಾಗಿಯಾಗುತ್ತಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ದಿಂಗತ್‌ಗೆ ಇದೆ ಮುಂಬೈನಲ್ಲಿ ಭಾರಿ ನೆಟ್‌ವರ್ಕ್: ನಟ ದಿಂಗತ್‌ಗೆ ಮುಂಬೈನಲ್ಲಿ ಭಾರಿ ನೆಟ್‌ವರ್ಕ್ ಇತ್ತು. ಬಾಲಿವುಡ್‌ನಲ್ಲಿ ಸಾಕಷ್ಟು ಬಿಗ್ ಸ್ಟಾರ್‌ಗಳ ಜೊತೆ ದಿಂಗತ್ ಸಂಪರ್ಕ ಹೊಂದಿದ್ದರು. ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯ ಸ್ಟಾರ್ ಆಗಿದ್ದ ದಿಗಂತ್ ಹಿಂದಿ ಸಿನಿಮಾ ಮಾಡಿದ್ದೇ ಇದಕ್ಕೆ ಸಾಕ್ಷ್ಯವಾಗಿದೆ. ಅಲ್ಲಿನ ದೊಡ್ಡ ದೊಡ್ಡ ನಾಯಕರನ್ನ ಪರಿಚಯ ಮಾಡಿಕೊಂಡಿದ್ದ ನಟ ಸಲ್ಮಾನ್ ಖಾನ್ ಸಹೋದರ ಜೊತೆ ಸಂಪರ್ಕಹೊಂದಿದ್ದರು.
ಮುಂಬೈನ ಲಿಂಕ್‌ನಿಂದ ಹಿಂದಿ ಸಿನಿಮಾ ಮಾಡಿದ್ದ ದಿಂಗತ್: ಸ್ಟಾರ್ ಪಟ್ಟ ಇಲ್ಲದೆ ಇದ್ರೂ ಕನ್ನಡದಲ್ಲಿ ಮಾರ್ಕೆಟ್ ಇಲ್ಲದ ಸಮಯದಲ್ಲಿ ದಿಗಂತ್ ಹಿಂದಿ ಸಿನಿಮಾ ಮಾಡಿದ್ದರು. ಹಿಂದಿಯಲ್ಲಿ ವೆಡ್ಡಿಂಗ್ ಪುಲಾವ್ ಎಂಬ ಸಿನಿಮಾ ಮಾಡಿದ್ದರು. ಖಾನ್ ಪ್ಯಾಮಿಲಿ ಸಂಪರ್ಕದಿಂದ ಹಿಂದಿ ಸಿನಿಮಾ ಮಾಡಿದ್ರು.
ಸ್ಯಾಂಡಲ್‌ವುಡ್ ಗೂ ಮುಂಬೈಗೂ ನಂಟು ಇದೆ ಎಂದಿದ್ದ ಪೆಡ್ಲರ್: ಮುಂಬೈನಲ್ಲಿ ಪಾರ್ಟಿ ಮಾಡ್ತಿದ್ದ ನಟಿ ಐಂದ್ರಿತಾ ರೇ ಮತ್ತು ನಟ ದಿಂಗತ್ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಸಿದ್ದ ಬಗ್ಗೆ ಮಾಹಿತಿ ಇತ್ತು. ಈ ದಂಪತಿ ಬಗ್ಗೆ ಎನ್‌ಸಿಬಿ ಸಹ ಕಣ್ಣಿಟ್ಟಿತ್ತು. ಅನಿಕಾ ಬಾಯಿಬಿಟ್ಟಿದ್ದ ಹೆಸರುಗಳಲ್ಲಿ ಈ ಸ್ಟಾರ್ ದಂಪತಿಯ ಹೆಸರು ಸಹ ಬಹಿರಂಗವಾಗಿತ್ತು. ಈಗಾಗಿ ಎನ್‌ಸಿಬಿ ಅಧಿಕಾರಿಗಳು ಸಹ ಮಾಹಿತಿ ಕಲೆಹಾಕುತ್ತಿದ್ದರು. ಸ್ಯಾಂಡಲ್‌ವುಡ್‌ನ ನಟ ನಟಿಯರ ಡ್ರಗ್ಸ್ ಲಿಂಕ್ ಬಗ್ಗೆ ಅನಿಕಾ ಬಾಯಿಬಿಟ್ಟಿದ್ದರು.
ಹಿಂದಿ ಸಿನಿಮಾ ಮಾಡಿದ ಬಳಿಕ ದಿಗಂತ್‌ಗೆ ಭಾರಿ ನೆಟ್‌ವರ್ಕ್: ಹಿಂದಿ ಸಿನಿಮಾ ವೆಡ್ಡಿಂಗ್ ಪುಲಾವ್ನಲ್ಲಿ ನಟಿಸಿದ ಬಳಿಕ ದಿಗಂತ್ ನೆಟ್‌ವರ್ಕ್ ಬೆಳೆದಿತ್ತು. ಸಿನಿಮಾ ಪ್ಲಾಪ್ ಆದ್ರೂ ಬಾಲಿವುಡ್ ಸ್ಟಾರ್‌ಗಳ ಪರಿಚಯ ಹೆಚ್ಚಿತ್ತು. ಮೊದ ಮೊದಲು ಪಾರ್ಟಿಗಳ ಸಂಖ್ಯೆ ಕಡಿಮೆ ಇದ್ದವು. ಸಿನಿಮಾ ಬಳಿಕ ದಿಗಂತ್ ಹೆಚ್ಚು ಹೆಚ್ಚು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು.
ಮುಂಬೈನಲ್ಲಿ ದಿಂಗತ್ ಕಿಂಗ್ ಆದ್ರೆ ಇಲ್ಲಿ ಅಂದ್ರಿತಾ ರಾಣಿ: ಡ್ರಗ್ಸ್ ಪಾರ್ಟಿಗಳಲ್ಲಿ ಮುಂಬೈನಲ್ಲಿ ಭಾಗವಹಿಸುತ್ತಿದ್ದ ಈ ಜೋಡಿ ಕರ್ನಾಟಕದ ಪಾರ್ಟಿಗಳು ಸೇರಿದಂತೆ ಹೆಚ್ಚಾಗಿ ಮುಂಬೈ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಹೀಗಾಗಿ ಇವರಿಗೆ ಬಾಲಿವುಡ್ ಲಿಂಕ್ ಬೆಳೆದಿತ್ತು. ಅಲ್ಲದೆ ಇವರಿಬ್ಬರೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಭಾರಿ ಪಾರ್ಟಿಗಳಿಗಾಗಿಯೇ ಮುಂಬೈ ತೆರಳುತ್ತಿದ್ದರು.
ಪಾರ್ಟಿಗೆ ಹೋಗಿದ್ದಕ್ಕೂ ಹಣ ಪಡೆಯುತಿದ್ದರು: ಕ್ರೌಡ್ ಪುಲ್ಲಿಂಗ್ಗಾಗಿ ಸ್ಟಾರ್ಗಳಿಕೆ ಪಾರ್ಟಿಗೆ ಕರೆಸಲಾಗುತಿತ್ತು. ಇವೆಂಟ್ ಮ್ಯಾನೇಜ್ಮೆಂಟ್ಗಳು ಸ್ಟಾರ್ಗಳು ಬರುತ್ತಾರೆ ಎಂದು ಹೇಳಿ ಜನರನ್ಮು ಆಕರ್ಷಣೆ ಮಾಡ್ತಿದ್ರು. ಮೊದಲೆ ಸಿನಿಮಾಗಳು ಇಲ್ಲದೆ ಖಾಲಿಯಾಗಿದ್ದ ಐಂದ್ರಿತಾ ರೈ ಮತ್ತು ದಿಗಂತ್ ಪ್ರತಿ ಪಾರ್ಟಿಗೆ ಹೋದಾಗಲು ಇಂತಿಷ್ಟು ಎಂದು ಕಮಿಷನ್ ಹಣ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ. ಬೆಂಗಳೂರು, ಹೈದ್ರಾಬಾದ್, ಮುಂಬಾಯಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಸದ್ಯ ಈ ಎಲ್ಲಾ ಮಾಹಿತಿ ಕಲೆಹಾಕಿರುವ ಸಿಸಿಬಿ ಇಂದು ಸ್ಟಾರ್ ದಂಪತಿಗಳ ವಿಚಾರಣೆ ನಡೆಸಲಿದೆ.