Murali Mohan Death: ‘ನಾಗರಹಾವು’ ಸಿನಿಮಾ ನಿರ್ದೇಶಕ ಮುರಳಿ ಮೋಹನ್ ನಿಧನ

ಹಲವು ವರ್ಷಗಳಿಂದ ನಿರ್ದೇಶಕ ಮುರಳಿ ಮೋಹನ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಂದು (ಆ.13) ನಿಧನರಾಗಿದ್ದಾರೆ. ರವಿಚಂದ್ರನ್, ಉಪೇಂದ್ರ, ಶಿವರಾಜ್​​ಕುಮಾರ್ ಮುಂತಾದ ಸ್ಟಾರ್ ನಟರ ಜೊತೆ ಮುರಳಿ ಮೋಹನ್ ಅವರು ಸಿನಿಮಾ ಮಾಡಿದ್ದರು.

Murali Mohan Death: ‘ನಾಗರಹಾವು’ ಸಿನಿಮಾ ನಿರ್ದೇಶಕ ಮುರಳಿ ಮೋಹನ್ ನಿಧನ
Murali Mohan

Updated on: Aug 13, 2025 | 7:17 PM

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ (Murali Mohan) ಅವರು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು (ಆಗಸ್ಟ್ 13) ಮಧ್ಯಾಹ್ನ 3 ಗಂಟೆ ವೇಳೆಗೆ ಅವರು ಕೊನೆಯುಸಿರು ಎಳೆದರು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಸಂತ’, ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆ ‘ಮಲ್ಲಿಕಾರ್ಜುನ’, ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯದ ‘ನಾಗರಹಾವು’ ಸಿನಿಮಾಗಳಿಗೆ ಮುರಳಿ ಮೋಹನ್ ಅವರು ನಿರ್ದೇಶನ ಮಾಡಿದ್ದರು.

ಬೆಂಗಳೂರಿನ ಜೆಸಿ ರಸ್ತೆಯಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಮುರಳಿ ಮೋಹನ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಈ ಹಿಂದೆ ಶಸ್ತ್ರಚಿಕಿತ್ಸೆಗೆ ಅನುದಾನದ ಅವಶ್ಯಕತೆಯಿದೆ ಎಂದು ಹೇಳಿಕೊಂಡಿದ್ದರು. ಐದಾರು ವರ್ಷಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಶಸ್ತ್ರಚಿಕಿತ್ಸೆಗೆ 30ರಿಂದ 35 ಲಕ್ಷ ರೂಪಾಯಿ ರೂಪಾಯಿ ಬೇಕಾಗಿತ್ತು.

ಚಿಕಿತ್ಸೆ ಫಲಕಾರಿ ಆಗದೇ ಬುಧವಾರ (ಆ.13) ನಿರ್ದೇಶಕ ಮುರಳಿ ಮೋಹನ್ ಅವರು ಮೃತರಾಗಿದ್ದಾರೆ. ಅವರ ನಿಧನಕ್ಕೆ ಆಪ್ತರು, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ಮುರಳಿ ಮೋಹನ್ ಅವರಿಗೆ 57 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ನಟ, ನಿರ್ದೇಶಕ ಉಪೇಂದ್ರ ಅವರಿಗೆ ಮುರಳಿ ಮೋಹನ್ ಆಪ್ತರಾಗಿದ್ದರು. ಕಾಲೇಜು ದಿನಗಳಿಂದ ಅವರು ಉಪೇಂದ್ರ ಜೊತೆ ಸ್ನೇಹ ಹೊಂದಿದ್ದರು. ‘ಓಂ’, ‘ಶ್’, ‘ತರ್ಲೆ ನನ್​ ಮಗ’ ಮುಂತಾದ ಸಿನಿಮಾಗಳಲ್ಲಿ ಅವರು ಉಪೇಂದ್ರ ಜೊತೆ ಅವರು ಕೆಲಸ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:35 pm, Wed, 13 August 25