‘ಆ ಹಿಂದಿ ಸಿನಿಮಾ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’; ಕನ್ನಡ ಚಿತ್ರಕ್ಕೆ ಸ್ಕ್ರೀನ್ ಸಿಗದೇ ನೋವು ಹೊರಹಾಕಿದ ನಿರ್ದೇಶಕ

Hareesha Vayassu 36 | Gururaj Jyesta: ‘ಹರೀಶ ವಯಸ್ಸು 36’ ಮಾರ್ಚ್ 11ರಂದು ತೆರೆಕಂಡಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳೂ ಲಭ್ಯವಾಗಿತ್ತು. ಆದರೆ ಇದೀಗ ಹಿಂದಿ ಸಿನಿಮಾವೊಂದರ ಕಾರಣದಿಂದ ಚಿತ್ರಕ್ಕೆ ಸ್ಕ್ರೀನ್​ಗಳ ಸಮಸ್ಯೆ ಆಗಿದೆ. ಈ ಬಗ್ಗೆ ನಿರ್ದೇಶಕ ಗುರುರಾಜ್ ಜ್ಯೇಷ್ಠ ನೋವು ತೋಡಿಕೊಂಡಿದ್ದಾರೆ.

‘ಆ ಹಿಂದಿ ಸಿನಿಮಾ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’; ಕನ್ನಡ ಚಿತ್ರಕ್ಕೆ ಸ್ಕ್ರೀನ್ ಸಿಗದೇ ನೋವು ಹೊರಹಾಕಿದ ನಿರ್ದೇಶಕ
‘ಹರೀಶ ವಯಸ್ಸು 36’ ಪೋಸ್ಟರ್, ನಿರ್ದೇಶಕ ಗುರುರಾಜ್ ಜ್ಯೇಷ್ಠ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 15, 2022 | 7:34 PM

ಬೇರೆ ಭಾಷೆಯ ಸಿನಿಮಾಗಳಿಂದ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಈ ಹಿಂದೆ ಹಲವು ನಿರ್ದೇಶಕರು, ನಿರ್ಮಾಪಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಬೇರೆ ಭಾಷೆಯ ದೊಡ್ಡ ಚಿತ್ರಗಳು ಪ್ರಾದೇಶಿಕ ಭಾಷೆಯ ಸಣ್ಣ ಸಣ್ಣ ಚಿತ್ರಗಳ ಸ್ಕ್ರೀನ್​ಗಳನ್ನು ಕಸಿದುಕೊಳ್ಳುತ್ತಿದೆ ಎನ್ನುವುದು ಮೊದಲಿನಿಂದ ಕೇಳಿಬರುತ್ತಿರುವ ಮಾತು. ಇದೀಗ ಹಿಂದಿ ಭಾಷೆಯ ಚಿತ್ರವೊಂದರಿಂದ ಕನ್ನಡದ ಚಿತ್ರವೊಂದು ಸಮಸ್ಯೆ ಎದುರಿಸುತ್ತಿದೆ ಎಂದು ನಿರ್ದೇಶಕರೋರ್ವರು ನೋವು ತೋಡಿಕೊಂಡಿದ್ದಾರೆ.  ಮಾರ್ಚ್ 11ರಂದು ತೆರೆಕಂಡಿದ್ದ ಕನ್ನಡದ ‘ಹರೀಶ ವಯಸ್ಸು 36’ (Hareesha Vayassu 36) ಚಿತ್ರ ಈ ಪರಿಸ್ಥಿತಿ ಎದುರಿಸುತ್ತಿದ್ದು, ನಿರ್ದೇಶಕರು ನೋವು ತೋಡಿಕೊಂಡಿದ್ದಾರೆ. ‘ಹರೀಶ್ ವಯಸ್ಸು 36’ ಚಿತ್ರವನ್ನು ನಿರ್ದೇಶಿಸಿದವರು ಗುರುರಾಜ್ ಜ್ಯೇಷ್ಠ. ತಮ್ಮ ಚಿತ್ರದ ಸ್ಕ್ರೀನ್ ಗಳನ್ನು ಕಸಿದು ಮತ್ತೊಂದು ಚಿತ್ರಕ್ಕೆ ನೀಡುತ್ತಿರುವುದರ ಬಗ್ಗೆ ಅವರು ನೋವು ತೋಡಿಕೊಂಡಿದ್ದಾರೆ. ಗುರುರಾಜ್ (Gururaj Jyesta) ಅವರ ಮಾತುಗಳು ಇಲ್ಲಿವೆ.

“ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹಲವು ಪ್ರದರ್ಶನ ನೀಡಿ ‘ಹರೀಶ ವಯಸ್ಸು 36’ ಗೆದ್ದಿದೆ. ಮಂಗಳೂರಿನ ಮಾಲ್ ಒಂದರಲ್ಲಿ ಹೌಸ್ ಫುಲ್ ಆಗಿದ್ದು, ಮತ್ತೊಂದು ಮಲ್ಟಿಪ್ಲೆಕ್ಸ್​ಗೆ ಬಂದಿದ್ದೇವೆ. ಇಲ್ಲಿ ಸಿಹಿಸುದ್ದಿ ಹಾಗೂ ಕಹಿಸುದ್ದಿ ಎರಡೂ ಸಿಕ್ಕಿದೆ’’ ಎಂದು ಮಾತು ಆರಂಭಿಸಿದ್ದಾರೆ ಗುರುರಾಜ್.

‘‘ನಿನ್ನೆ (ಭಾನುವಾರ) ಚಿತ್ರ ಹೌಸ್ ಫುಲ್ ಆಗಿತ್ತು. ಇಂದು 50 ಪ್ರತಿಶತ ಭರ್ತಿಯಾಗಿದೆ. ಆದರೆ ನಾಳೆ (ಮಂಗಳವಾರ) ಯಾವುದೇ ಶೋಗಳಿಲ್ಲ. ಕಾರಣ, ಒಂದು ಹಿಂದಿ ಸಿನಿಮಾ ಬಂದಿದೆ. ಆ ಚಿತ್ರ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’’ ಎಂದು ನೋವು ಹೊರಹಾಕಿದ್ದಾರೆ ನಿರ್ದೇಶಕರು.

ಮುಂದುವರೆದು ಮಾತನಾಡಿರುವ ಅವರು, ‘‘ಆ ಹಿಂದಿ ಚಿತ್ರವನ್ನು ಎಲ್ಲರೂ ನೋಡಿ, ಅದರ ಬಗ್ಗೆ ಎರಡು ಮಾತಿಲ್ಲ. ಆದರೆ, ನಮಗೆ ಏನು ಪರಿಸ್ಥಿತಿ ಬಂದಿದೆ ಎಂದರೆ, ನಿರ್ಮಾಪಕರು ಹಾಕಿದ ದುಡ್ಡಿಗೆ ಕನ್ನಡದ ಜನತೆ ಎಷ್ಟೇ ಕಷ್ಟಪಟ್ಟರೂ ಹಣ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ನಿರ್ಮಾಪಕರು ಇನ್ನು ಮುಂದೆ ಕನ್ನಡ ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇದು ಬಹಳ ಬೇಸರದ ಸುದ್ದಿ’’ ಎಂದು ಗುರುರಾಜ್ ನೋವು ತೋಡಿಕೊಂಡಿದ್ದಾರೆ.

‘ಹರೀಶ ವಯಸ್ಸು 36’ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಹಾಡಿದ್ದಾರೆ. ಅಪ್ಪು ಅವರೇ ಹಾಡಿದ ಕನ್ನಡ ಸಿನಿಮಾವೊಂದಕ್ಕೆ ಕರ್ನಾಟಕದಲ್ಲೇ ವೇದಿಕೆ ಇಲ್ಲವೇ ಎನ್ನುವುದು ಗುರುರಾಜ್ ಅವರ ನೋವಿನ ಪ್ರಶ್ನೆ.

 ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಬಳಿಕ ಶಿವಣ್ಣ ಭಾವುಕ ಮಾತು

Published On - 6:06 pm, Mon, 14 March 22

ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್