ಶುರುವಾಯ್ತು ಧಾರಾವಾಹಿ ಚಿತ್ರೀಕರಣ.. ಹೇಗಿದೆ ವಾತಾವರಣ? Photos ನೋಡಿ!

ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್​ಡೌನ್​ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್​ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್​ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್​ಗಳು ಸಜ್ಜಾಗತೊಡಗಿವೆ. ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ. ಹಾಗಾಗಿ […]

ಶುರುವಾಯ್ತು ಧಾರಾವಾಹಿ ಚಿತ್ರೀಕರಣ.. ಹೇಗಿದೆ ವಾತಾವರಣ? Photos ನೋಡಿ!
ಸಾಧು ಶ್ರೀನಾಥ್​

Updated on: May 25, 2020 | 1:35 PM

ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್​ಡೌನ್​ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್​ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್​ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್​ಗಳು ಸಜ್ಜಾಗತೊಡಗಿವೆ.

ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ.

ಹಾಗಾಗಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಶೂಟಿಂಗ್ ಸ್ಪಾಟ್​ನಲ್ಲಿ 20ಕ್ಕೂ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಬೇಕು.
ಮೇಕಪ್‌ ಕಿಟ್‌ಗಳನ್ನು ಕಲಾವಿದರೇ ತರಬೇಕು ಎಂಬ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ ಪ್ರತಿ 2 ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್ ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು. ಈ ಸೂಚನೆಗಳಿಗೆ ಅನ್ವಯಪಟ್ಟು ಕಲಾವಿದರು ಮತ್ತು ತಾಂತ್ರಕವರ್ಗ ಇಂದಿನಿಂದ ಶೂಟಿಂಗ್ ಆಕ್ಷನ್ ಕಟ್ ಹೇಳಿದೆ.

ಕೊರೊನಾ ಸಂಕಷ್ಟದಿಂದ ನಲುಗಿದ್ದ ಕನ್ನಡ ಕಿರುತೆರೆಯಲ್ಲಿ ಚಟುವಟಿಕೆ ಗರಿಗೆದರಿದೆ. 2,000 ದಿಂದ 3,000 ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ್ದಾರೆ. ಜೂನ್ 1 ರಿಂದ ವಿವಿಧ ಧಾರಾವಾಹಿಗಳು ಹೊಸ ರೂಪದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಉದ್ಯಮದ ಮೂಲಗಳು ಟಿವಿ9 ಗೆ ತಿಳಿಸಿವೆ.

 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us