ಪ್ರೀಮಿಯರ್ ಶೋಗಳಿಂದಲೇ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’

Kantara: Chapter 1 Collcetion: 'ಕಾಂತಾರ: ಚಾಪ್ಟರ್ 1' ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ದುಬಾರಿ ಟಿಕೆಟ್ ಬೆಲೆ ಮತ್ತು ಯಶಸ್ವಿ ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ ಕೋಟಿ ಕೋಟಿ ಹರಿದುಬಂದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವು ಮೊದಲ ದಿನವೇ ಭಾರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

ಪ್ರೀಮಿಯರ್ ಶೋಗಳಿಂದಲೇ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’
ರಿಷಬ್

Updated on: Oct 02, 2025 | 7:41 AM

‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು (ಅಕ್ಟೋಬರ್ 2) ವಿಶ್ವಾದ್ಯಂತ ರಿಲೀಸ್ ಆಗಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 1ರಂದು ಸಿನಿಮಾಗೆ ವಿಶ್ವಾದ್ಯಂತ ಹಲವು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಈ ಚಿತ್ರದ ಟಿಕೆಟ್ ಬೆಲೆ ಕೂಡ ಸಖತ್ ದುಬಾರಿ ಆಗಿತ್ತು. ಹೀಗಾಗಿ, ಸಿನಿಮಾಗೆ ಕೋಟಿ ಕೋಟಿ ರೂಪಾಯಿ ಹರಿದು ಬರೋದು ಪಕ್ಕಾ ಆಗಿದೆ. ಇದರಿಂದ ನಿರ್ಮಾಪಕರು ಖುಷಿಯಾಗಿದ್ದಾರೆ.

‘ಕಾಂತಾರ’ ಸಿನಿಮಾದಲ್ಲಿ ದೈವದ ವಿಚಾರಗಳನ್ನು ಇಟ್ಟುಕೊಂಡು ರಿಷಬ್ ಕಥೆ ಹೇಳಿದ್ದರು. ಈಗ ಅವರು ಈ ಚಿತ್ರಕ್ಕೆ ಪ್ರೀಕ್ವೆಲ್ ಮಾಡಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಮೋಡಿ ಮಾಡುತ್ತಾ ಇದೆ. ಈ ಸಿನಿಮಾಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾ ಉದ್ದಕ್ಕೂ ದೈವದ ವಿಚಾರವೇ ಹೈಲೈಟ್ ಆಗಿದೆ. ಜೊತೆಗೆ, ಕೆಲವೊಂದು ಟ್ವಿಸ್ಟ್​ಗಳನ್ನು ಕೂಡ ಇಡಲಾಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಸಿನಿಮಾ ಅಪ್​ಲೋಡ್ ಆಗಿಯೇ ಇರಲಿಲ್ಲ. ಈ ಕಾರಣದಿಂದಲೇ ಪ್ರೀಮೀಯರ್ ಶೋಗಳನ್ನು ಮಾಡೋದು ಅನುಮಾನ ಎನ್ನಲಾಯಿತು. ಕೊನೆಯ ಕ್ಷಣದಲ್ಲಿ ಚಿತ್ರಕ್ಕೆ ಪ್ರೀಮಿಯರ್ ಶೋಗಳನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರಿನಲ್ಲೇ ಚಿತ್ರಕ್ಕೆ ಸಾಕಷ್ಟು ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಇದು ಸಿನಿಮಾಗೆ ಸಹಕಾರಿ ಆಗಿದೆ. ಹೀಗಾಗಿ, ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಹಲವು ಕೋಟಿ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ
ಅಡುಗೆ ಮಾಡುತ್ತಾ ರಿಷಬ್, ಮೇಘನಾ, ಸುದೀಪ್ ಹರಟೆ; ಅಪರೂಪದ ವಿಡಿಯೋ ಇಲ್ಲಿದೆ
ಸ್ತನ ಕ್ಯಾನ್ಸರ್​ನಿಂದ ಕಿರುತೆರೆ ನಟಿ ಕಮಲಶ್ರೀ ನಿಧನ
‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಜಾನ್ವಿ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಇನ್ನು, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೊದಲ ದಿನದ ಕಲೆಕ್ಷನ್ ಬಗ್ಗೆಯೂ ಕುತೂಹಲ ಇದೆ. ಈಗಾಗಲೇ ಕರ್ನಾಟಕದಾದ್ಯಂತ ಮೊದಲ ದಿನದ ಶೋ ಬಹುತೇಕ ಹೌಸ್​ಫುಲ್ ಕಂಡಿದೆ. ಹೀಗಾಗಿ, ಕಲೆಕ್ಷನ್ ಕೂಡ ದೊಡ್ಡ ಮಟ್ಟದಲ್ಲೇ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್1’ ವಿಮರ್ಶೆ: ದಂತಕಥೆಯಲ್ಲಿ ಅದ್ದೂರಿತನ; ಇದು ದೈವದ ಕಥನ

‘ಕಾಂತಾರ: ಚಾಪ್ಟರ್ ’ ಸಿನಿಮಾಗೆ ರಿಷಬ್ ಶೆಟ್ಟಿ ನಾಯಕ. ನಿರ್ದೇಶನ ಕೂಡ ಅವರದ್ದೇ. ಹೆಚ್ಚು ಅದ್ದೂರಿಯಾಗಿ ಸಿನಿಮಾನ ಕಟ್ಟಿಕೊಟ್ಟಿದ್ದಾರೆ. ರುಕ್ಮಿಣಿ ವಸಂತ್, ಜಯರಾಂ, ಕುಲ್ಶನ್ ದೇವಯ್ಯ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಕೆಲವು ತಿರುವುಗಳು ರೋಮಾಂಚನ ಎನಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:39 am, Thu, 2 October 25