‘ಕಾಂತಾರ: ಚಾಪ್ಟರ್ 1’ ಚಿತ್ರದ ಮೊದಲಾರ್ಧ ವಿಮರ್ಶೆ; ರಿಷಬ್ ಚಿತ್ರದಲ್ಲಿ ಏನೆಲ್ಲ ಇದೆ?
ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಪಡೆದರು. ಈಗ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ರುಕ್ಮಿಣಿ ವಸಂತ್ ಅವರು ಈ ಚಿತ್ರಕ್ಕೆ ನಾಯಕಿ. ಸಿನಿಮಾನ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ.

ರಿಷಬ್-ರುಕ್ಮಿಣಿ
‘ಕಾಂತಾರ: ಚಾಪ್ಟರ್ 1’ (Kantara Chapter 1) ಚಿತ್ರ ಅನೌನ್ಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸುತ್ತಾ ಬಂದಿದೆ. ಈಗ ಈ ಚಿತ್ರ ರಿಲೀಸ್ ಆಗಿದೆ. ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಸಿನಿಮಾಗೆ ಪ್ರೀಮಿಯರ್ ಶೋನ ಆಯೋಜನೆ ಮಾಡಲಾಗಿದೆ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ. ರಿಷಬ್ ಶೆಟ್ಟಿ (Rishab Shetty) ಅವರು ಈ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ. ಹಾಗಾದರೆ ಈ ಚಿತ್ರದ ಇಂಟರ್ವಲ್ತನಕ ಏನೆಲ್ಲ ಇದೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಸಂಪೂರ್ಣ ವಿಮರ್ಶೆ ಇನ್ನು ಕೆಲವೇ ಗಂಟೆಗಳಲ್ಲಿ ಅಪ್ಲೋಡ್ ಆಗಲಿದೆ.
- ಮೊದಲ ದೃಶ್ಯವೇ ರೋಮಾಂಚಕವಾಗಿದೆ. ಬ್ರಹ್ಮರಾಕ್ಷಸನ ದರ್ಶನವಾಗಿದೆ.
- ಸಿನಿಮಾ ಆರಂಭವಾದ ಕೆಲವೇ ಹೊತ್ತಲ್ಲಿ ರಥದ ಚೇಸಿಂಗ್ ದೃಶ್ಯ ಬರುತ್ತದೆ. ಇದರಲ್ಲಿ ರಿಷಬ್ ತೆಗೆದುಕೊಂಡ ರಿಸ್ಕ್ ಕಾಣಿಸುತ್ತದೆ.
- ಪ್ರಕಾಶ್ ತುಮಿನಾಡ್ ಕಡೆಯಿಂದ ಹಾಸ್ಯದ ಹೊಳೆ ಹರಿಯುತ್ತದೆ. ಅವರು ಬಹುವಾಗಿ ನಗಿಸುತ್ತಾರೆ.
- ರಿಷಬ್ ಹಾಗೂ ರುಕ್ಮಿಣಿ ಪ್ರೇಮಕತೆ ಮೊದಲಾರ್ಧದಲ್ಲಿ ಬರುತ್ತದೆ. ರೊಮ್ಯಾಂಟಿಕ್ ಸಾಂಗ್ ಕೂಡ ಇದೆ.
- ‘ಕಾಂತಾರ: ಚಾಪ್ಟರ್ 1’ ಸಿನಿಮಾನ ರಿಷಬ್ ಶೆಟ್ಟಿ ಅವರು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲಾರ್ಧದ ಎಲ್ಲಾ ಫ್ರೇಮ್ಗಳು ಅದ್ದೂರಿಯಾಗಿ ಮೂಡಿಬಂದಿವೆ.
- ರುಕ್ಮಿಣಿ ವಸಂತ್ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಅಂದಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು.
- ‘ಕಾಂತಾರ’ ಚಿತ್ರದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಗಮನ ಸೆಳೆದಿತ್ತು. ಎರಡನೇ ಪಾರ್ಟ್ನಲ್ಲೂ ಅದು ಮುಂದುವರಿದಿದೆ. ಸಿನಿಮಾ ಉದ್ದಕ್ಕೂ ಅವರ ಸಂಗೀತ ಗಮನ ಸೆಳೆಯುವಂತಿದೆ.
- ಹಿನ್ನೆಲೆ ಸಂಗೀತ ಸಂಯೋಜನೆ ಸಿನಿಮಾಗೆ ತೂಕ ಕೊಡುತ್ತದೆ. ಛಾಯಾಗ್ರಹಣ ಕೂಡ ಅದ್ಭುತವಾಗಿ ಮೂಡಿಬಂದಿದೆ.
- ಕಾಡು ಹಾಗೂ ನಾಡಿನ ತಿಕ್ಕಾಟವನ್ನು ತೋರಿಸುವ ಪ್ರಯತ್ನ ನಡೆದಿದೆ.
- ಮೈವಿರೇಳಿಸುವ ದೃಶ್ಯ ಹಾಗೂ ಟ್ವಿಸ್ಟ್ ಮೂಲಕ ಮಧ್ಯಂತರದ ಬೋರ್ಡ್ ಬರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:31 pm, Wed, 1 October 25




