ಆಸ್ಟ್ರೇಲಿಯಾದಲ್ಲಿ ‘ಕಾಂತಾರ: ಚಾಪ್ಟರ್ 1’ ಹೊಸ ದಾಖಲೆ; ಭಾರತದ ಯಾವ ಚಿತ್ರವೂ ಮಾಡಿಲ್ಲ

'ಕಾಂತಾರ: ಚಾಪ್ಟರ್ 1' ಸಿನಿಮಾ ಜಾಗತಿಕವಾಗಿ ಭರ್ಜರಿ ಯಶಸ್ಸು ಕಂಡಿದೆ. ಭಾರತದ ಜೊತೆಗೆ ವಿಶ್ವದ 30 ದೇಶಗಳಲ್ಲಿ ತೆರೆಕಂಡ ಈ ಚಿತ್ರ ಮೆಚ್ಚುಗೆ ಪಡೆದಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ಸಿನಿಮಾ ಆಗಿ ಇದು ಹೊಸ ದಾಖಲೆ ಬರೆದಿದೆ. ಒಟ್ಟಾರೆ 700 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ‘ಕಾಂತಾರ: ಚಾಪ್ಟರ್ 1’ ಹೊಸ ದಾಖಲೆ; ಭಾರತದ ಯಾವ ಚಿತ್ರವೂ ಮಾಡಿಲ್ಲ
ಕಾಂತಾರ

Updated on: Oct 20, 2025 | 6:08 PM

‘ಕಾಂತಾರ: ಚಾಪ್ಟರ್ 1’ ಸಿನಿಮಾ (Kantara) ಕೇವಲ ಭಾರತ ಮಾತ್ರವಲ್ಲದೆ, ಪರಭಾಷೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಮುಂಬೈ, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ಎಲ್ಲ ಕಡೆಗಳಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಆಸ್ಟ್ರೇಲಿಯಾದಲ್ಲಿ ಹೊಸ ದಾಖಲೆ ಬರೆದಿದೆ. ಈ ವರ್ಷ ಭಾರತದ ಯಾವ ಚಿತ್ರವೂ ಮಾಡಿರದ ದಾಖಲೆಯನ್ನು ಈ ಸಿನಿಮಾ ಬರೆದಿದೆ ಅನ್ನೋದು ವಿಶೇಷ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನಿಡಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದ ಜೊತೆಗೆ ವಿಶ್ವದ 30 ದೇಶಗಳಲ್ಲಿ ಒಟ್ಟಿಗೆ ರಿಲೀಸ್ ಆಯಿತು. ಈ ಸಿನಿಮಾನ ಆಸ್ಟ್ರೇಲಿಯಾ ಕನ್ನಡಿಗರು ಇಷ್ಟಪಟ್ಟು ವೀಕ್ಷಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ಈ ಚಿತ್ರ ಇಂಗ್ಲಿಷ್ ಭಾಷೆಯಲ್ಲೂ ವೀಕ್ಷಣೆಗೆ ಲಭ್ಯವಿದೆ. ಹೀಗಾಗಿ, ಆಸ್ಟ್ರೇಲಿಯಾ ಮಂದಿಯನ್ನು ಕೂಡ ಈ ಸಿನಿಮಾ ಸೆಳೆದುಕೊಂಡಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ.

ಇದನ್ನೂ ಓದಿ
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪರಿಣಿತಿ ಚೋಪ್ರಾ
ಶಾಲಲ್ಲಿ ಚಪ್ಪಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಇದನ್ನೂ ಓದಿ: ‘ಕಾಂತಾರ ನೋಡಿ ಮಗಳು ಕೆಲ ದಿನ ನಿದ್ರಿಸಲೇ ಇಲ್ಲ’; ರಿಷಬ್ ಎದುರು ಮೆಚ್ಚುಗೆ ಸೂಚಿಸಿದ ಅಮಿತಾಭ್

ಈ ವರ್ಷ ಭಾರತದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ರಿಲೀಸ್ ಆದವು. ಈ ಎಲ್ಲಾ ದಾಖಲೆಗಳನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೀರಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ 2025ರಲ್ಲೇ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಭಾರತದ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಿಕ್ಕಿದೆ. ಈ ಬಗ್ಗೆ ಹೊಂಬಾಳೆ ಸಿನಿಮಾ ಮಾಹಿತಿ ನೀಡಿದೆ. ಆದರೆ, ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಕೇರಳದಲ್ಲಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಬ್ಬರಿಸುತ್ತಿದೆ. ಈ ಸಿನಿಮಾ ಆ ಭಾಗದಲ್ಲಿ 55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ತಂಡದವರು ಮಾಹಿತಿ ನೀಡಿದ್ದಾರೆ. ಕನ್ನಡದ ಚಿತ್ರವೊಂದು ಕೇರಳದಲ್ಲಿ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿದ್ದು ನಿಜಕ್ಕೂ ವಿಶೇಷ. ಸದ್ಯ ಸಿನಿಮಾದ ಒಟ್ಟಾರೆ ಕಲೆಕ್ಷನ್ 700 ಕೊಟಿ ರೂಪಾಯಿಗೂ ಮೀರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.