AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ ನೋಡಿ ಮಗಳು ಕೆಲ ದಿನ ನಿದ್ರಿಸಲೇ ಇಲ್ಲ’; ರಿಷಬ್ ಎದುರು ಮೆಚ್ಚುಗೆ ಸೂಚಿಸಿದ ಅಮಿತಾಭ್

ಅಮಿತಾಭ್ ಬಚ್ಚನ್ ಅವರ ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಅಮಿತಾಭ್ ಬಚ್ಚನ್ ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ‘ಕಾಂತಾರ’ ಸಿನಿಮಾ ನೋಡಿ ಕೆಲವು ದಿನ ನಿದ್ರಿಸಿಯೇ ಇಲ್ಲ ಎಂದು ಅಚ್ಚರಿ ಮಾಹಿತಿ ಹಂಚಿಕೊಂಡರು. ರಿಷಬ್ ಅವರ ನಟನೆಗೆ ಶ್ವೇತಾ ಫಿದಾ ಆಗಿದ್ದಾರೆ.

‘ಕಾಂತಾರ ನೋಡಿ ಮಗಳು ಕೆಲ ದಿನ ನಿದ್ರಿಸಲೇ ಇಲ್ಲ’; ರಿಷಬ್ ಎದುರು ಮೆಚ್ಚುಗೆ ಸೂಚಿಸಿದ ಅಮಿತಾಭ್
ರಿಷಬ್-ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on: Oct 20, 2025 | 4:03 PM

Share

ಅಮಿತಾಭ್ ಬಚ್ಚನ್ ಅವರ ‘ಕೌನ್ ಬನೇಗಾ ಕರೋಡ್ಪತಿ’ (KBC) ಶೋಗೆ ರಿಷಬ್ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಹಲವು ವಿಚಾರಗಳನ್ನು ರಿಷಬ್ ಅವರು ಹಂಚಿಕೊಂಡಿದ್ದಾರೆ. ಇದೇ ವೇಳೆ ರಿಷಬ್ ಅವರ ಬಳಿ ಅಮಿತಾಭ್ ಬಚ್ಚನ್ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ‘ಕಾಂತಾರ’ ಸಿನಿಮಾ ನೋಡಿ ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಅವರು ಕೆಲ ದಿನಗಳ ಕಾಲ ನಿದ್ರಿಸಿಯೇ ಇರಲಿಲ್ಲವಂತೆ.

ರಿಷಬ್ ಅವರು ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ಸಾಕಷ್ಟು ಗಮನ ಸೆಳೆದರು. ಈ ಶೋನಲ್ಲಿ ಅವರು ತಾವು ಚಿತ್ರರಂಗಕ್ಕೆ ಬಂದಿದ್ದು, ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಂಡರು. ಈ ವೇಳೆ ಅಮಿತಾಭ್ ಬಚ್ಚನ್ ಅವರು ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದರು. ಶ್ವೇತಾ ಬಚ್ಚನ್ ಈ ಚಿತ್ರವನ್ನು ನೋಡಿ ಹೇಗೆ ಬೆರಗಾದರು ಎಂಬುದನ್ನು ಅಮಿತಾಭ್ ಹೇಳಿದ್ದರು.

‘ನಾನು ನಿಮ್ಮ ಯಾವುದೇ ಸಿನಿಮಾಗಳನ್ನು ನೋಡಿಲ್ಲ. ಇದಕ್ಕೆ ನಾನು ನಿಮಗೆ ಕ್ಷಮೆ ಕೇಳಲೇಬೇಕು. ಆದರೆ, ನಮ್ಮ ಶೆಡ್ಯೂಲ್ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆ ಅಲ್ಲವೆ. ನನ್ನ ಮಗಳು ಶ್ವೇತಾ ಕಾಂತಾರ ಸಿನಿಮಾ ನೋಡಿದರು. ಆ ಬಳಿಕ ಅವಳು ಕೆಲವು ದಿನ ನಿದ್ರಿಸಲೇ ಇಲ್ಲ. ನಿಮ್ಮ ನಟನೆಗೆ ಅವಳು ಫಿದಾ ಆಗಿದ್ದಾರೆ. ಕೊನೆಯ ದೃಶ್ಯ ಅವರನ್ನು ತುಂಬಾನೇ ಕಾಡಿದೆ’ ಎಂದಿದ್ದಾರೆ ಅಮಿತಾಭ್.

ಇದನ್ನೂ ಓದಿ
Image
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪರಿಣಿತಿ ಚೋಪ್ರಾ
Image
ಶಾಲಲ್ಲಿ ಚಪ್ಪಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್
Image
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
Image
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್​​ನಲ್ಲಿ ರಿಷಬ್ ಶೆಟ್ಟಿ: ಇದು ವಿಶೇಷ ಸಂಚಿಕೆ

ಇದನ್ನು ಕೇಳಿ ರಿಷಬ್ ಕೂಡ ಖುಷಿಪಟ್ಟರು. ಓರ್ವ ನಿರ್ದೇಶಕ ಹಾಗೂ ನಟನಿಗೆ ತಾವು ಮಾಡಿದ ಸಿನಿಮಾ ಬಗ್ಗೆ ಮೆಚ್ಚುಗೆ ಸಿಕ್ಕರೆ ಅದಕ್ಕಿಂತ ಖುಷಿಯ ವಿಚಾರ ಮತ್ತೇನು ಇರುವುದಿಲ್ಲ. ಅಂತಹ ವಿಶೇಷ ಕಮೆಂಟ್​ನ ಬಚ್ಚನ್ ಕಡೆಯಿಂದ ಪಡೆದರು ಅನ್ನೋದು ವಿಶೇಷ. ರಿಷಬ್ ಅವರು ಮುಂಬೈನಲ್ಲಿ ಕೆಲ ದಿನಗಳ ಕಾಲ ಇದ್ದರು. ಅವರು ಇದರಿಂದ ಸಾಕಷ್ಟು ಪ್ರೀತಿ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.