
ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳ ನಂತರವೂ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ‘ಕಾಂತಾರ: ಚಾಪ್ಟರ್ 1’ ಅಬ್ಬರಕ್ಕೆ ಹೆದರಿ ಬೇರೆ ಭಾಷೆಗಳಲ್ಲಿ ಯಾವ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿಲ್ಲ. ಕೆಲ ಸಿನಿಮಾಗಳ ಬಿಡುಗಡೆಯೂ ಮುಂದೂಡಲ್ಪಟ್ಟಿದೆ. ಹಿಂದಿಯಲ್ಲಂತೂ ‘ಕಾಂತಾರ: ಚಾಪ್ಟರ್ 1’ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಆದರೆ ಇದೀಗ ರಶ್ಮಿಕಾ ಮಂದಣ್ಣ ಅವರ ಹೊಸ ಸಿನಿಮಾ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದ್ದು, ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ಗೆ ಈ ಸಿನಿಮಾ ಬ್ರೇಕ್ ಹಾಕಲಿದೆಯಾ?
ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ ‘ಥಮ’ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಯುಷ್ಮಾನ್ ಖುರಾನಾ ಈ ಸಿನಿಮಾದ ನಾಯಕ. ನವಾಜುದ್ಧೀನ್ ಸಿದ್ಧಿಖಿ ಸಿನಿಮಾದ ವಿಲನ್. ಮ್ಯಾಡ್ಲಾಕ್ ಅವರು ನಿರ್ಮಿಸಿರುವ ಈ ಸಿನಿಮಾ ಹಾರರ್ ಕಥಾವಸ್ತು ಒಳಗೊಂಡಿದೆ. ‘ಥಮ’ ಸಿನಿಮಾನಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಸಿನಿಮಾನಲ್ಲಿ ಮೂರು ಐಟಂ ಹಾಡುಗಳು ಬೇರೆ ಇವೆಯಂತೆ.
ರಿಷಬ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಮನಸ್ಥಾಪ ಇರುವುದು ಜಗಜ್ಜಾಹೀರು. ಇದೀಗ ಬಾಕ್ಸ್ ಆಫೀಸ್ನಲ್ಲಿ ಈ ಇಬ್ಬರ ಸಿನಿಮಾಗಳು ಪರಸ್ಪರ ಎದುರಾಗುತ್ತಿವೆ. ಆದರೆ ‘ಕಾಂತಾರ: ಚಾಪ್ಟರ್ 1’ ಈಗಾಗಲೇ ಬಾಲಿವುಡ್ ಪ್ರಾಂತ್ಯದಲ್ಲಿ 150 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿ ನಾಗಾಲೋಟದಲ್ಲಿದೆ. ರಶ್ಮಿಕಾರ ಹೊಸ ಸಿನಿಮಾ ‘ಕಾಂತಾರ 1’ ಸಿನಿಮಾದ ಕಲೆಕ್ಷನ್ ಅನ್ನು ಕುಗ್ಗಿಸಲಿದೆಯೇ? ಸಿನಿಮಾಕ್ಕೆ ಸ್ಪರ್ಧೆ ಒಡ್ಡಲಿದೆಯೇ ಎಂಬುದು ಸಿನಿಮಾ ಪ್ರೇಮಿಗಳ ಕುತೂಹಲ.
ಇದನ್ನೂ ಓದಿ:‘ಕಾಂತಾರ’ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಹಳೆ ಹೇಳಿಕೆ ವೈರಲ್
ರಶ್ಮಿಕಾ ಮಂದಣ್ಣ ಅವರ ಸಿನಿಮಾ ದೆವ್ವದ ಕತೆ ಹೊಂದಿರುವ ಸಿನಿಮಾ ಆಗಿದ್ದರೆ ರಿಷಬ್ ಶೆಟ್ಟಿಯವರ ಸಿನಿಮಾ ದೈವದ ಕತೆ ಹೊಂದಿರುವ ಸಿನಿಮಾ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ದೈವದ ಕತೆ ಈಗಾಗಲೇ ಗೆದ್ದಾಗಿದೆ. ಆದರೆ ದೆವ್ವದ ಕತೆಯುಳ್ಳ ಸಿನಿಮಾದ ದೈವದ ಸಿನಿಮಾದ ಕಲೆಕ್ಷನ್ ಅನ್ನು ತಗ್ಗಿಸಲಿದೆಯೇ ಎಂಬುದಷ್ಟೆ ಉಳಿದಿರುವ ಕುತೂಹಲ.
ರಶ್ಮಿಕಾ ಮಂದಣ್ಣ ಹಿಂದೆ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಾರದಷ್ಟು ಹಾಟ್ ಆಗಿ ‘ಥಮ’ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಉಡುಗೆಗಳನ್ನು ಧರಿಸಿ ಬಲು ಮಾದಕವಾಗಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ ಜೊತೆಗೆ ನಾಯಕ ಆಯುಷ್ಮಾನ್ ಖುರಾನಾ ಜೊತೆಗೆ ತುಸು ಹಾಟ್ ಆಗಿರುವ ದೃಶ್ಯಗಳಲ್ಲಿ ಸಹ ನಟಿಸಿದ್ದಾರೆ. ಆದಿತ್ಯ ಸರ್ಪೋತ್ಧಾರ್ ‘ಥಮ’ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ