‘ಕಾಂತಾರ’ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಹಳೆ ಹೇಳಿಕೆ ವೈರಲ್
Kantara: Chapter 1: ಪ್ರಭಾಸ್, ಜೂ ಎನ್ಟಿಆರ್, ರಾಮ್ ಗೋಪಾಲ್ ವರ್ಮಾ, ಸಂದೀಪ್ ರೆಡ್ಡಿ ವಂಗಾ ಇನ್ನೂ ಹಲವಾರು ಮಂದಿ ಖ್ಯಾತ ತಾರೆಯರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ತಂಡದಿಂದಲೇ ಚಿತ್ರರಂಗಕ್ಕೆ ಪರಿಚಯಗೊಂಡು ಈಗ ಬಾಲಿವುಡ್ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈ ಹಿಂದೆ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ನೋಡಿದ್ದಾಗ ನೀಡಿದ್ದ ಹೇಳಿಕೆ ಈಗ ವೈರಲ್ ಆಗಿದೆ.

‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಬಿಡುಗಡೆ ಆಗಿ ವಾರವಾಗಿದ್ದು ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪ್ರಭಾಸ್, ಜೂ ಎನ್ಟಿಆರ್, ರಾಮ್ ಗೋಪಾಲ್ ವರ್ಮಾ, ಸಂದೀಪ್ ರೆಡ್ಡಿ ವಂಗಾ ಇನ್ನೂ ಹಲವಾರು ಮಂದಿ ಖ್ಯಾತ ತಾರೆಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ತಂಡದಿಂದಲೇ ಚಿತ್ರರಂಗಕ್ಕೆ ಪರಿಚಯಗೊಂಡು ಈಗ ಬಾಲಿವುಡ್ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ, ಈ ಹಿಂದೆ ‘ಕಾಂತಾರ’ ಸಿನಿಮಾ ನೋಡಿ ನೀಡಿದ್ದ ಹೇಳಿಕೆ ಈಗ ಮತ್ತೆ ವೈರಲ್ ಆಗಿದೆ.
‘ಸಿನಿಮಾ ಬಿಡುಗಡೆ ಆದ ಎರಡು ಮೂರು ದಿನಗಳಲ್ಲಿಯೇ ನನಗೆ ನೋಡಲು ಸಾಧ್ಯವಿಲ್ಲ. ಹಾಗಾಗಿ ಸಿನಿಮಾ ರಿಲೀಸ್ ಆದ ಕೂಡಲೇ ನಾನು ಸಿನಿಮಾ ವೀಕ್ಷಿಸಲಿಲ್ಲ. ಆದರೆ ಇತ್ತೀಚೆಗಷ್ಟೆ ಸಿನಿಮಾ ನೋಡಿದೆ. ನನಗೆ ಇಷ್ಟವಾಯ್ತು, ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ, ಅವರು ಧನ್ಯವಾದ ಎಂದು ಪ್ರತಿಕ್ರಿಯೆ ನೀಡಿದ್ದಾರೆ’ ಎಂದಿದ್ದರು. ಆದರೆ ಈಗ ಬಿಡುಗಡೆ ಆಗಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ರಶ್ಮಿಕಾ ಇನ್ನೂ ನೋಡಿದಂತಿಲ್ಲ.
#RashmikaMandanna on Trolls and also clarifies she did actually watch #Kantara recently! pic.twitter.com/9jqGM68E6G
— AndhraBoxOffice.Com (@AndhraBoxOffice) December 8, 2022
‘ಒಳಗೆ ಏನು ನಡೆಯುತ್ತಿದೆ ಎಂಬುದು ಸಮಾಜಕ್ಕೆ ಗೊತ್ತಿರುವುದಿಲ್ಲ. ನಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲವನ್ನೂ ಕ್ಯಾಮೆರಾನಲ್ಲಿ ಸೆರೆ ಹಿಡಿದು ತೋರಿಸಲು ಆಗುವುದಿಲ್ಲ. ಏನು ನಡೆಯುತ್ತಿದೆ ಎಂಬುದು ದೇವರಿಗೆ ಮಾತ್ರವೇ ಗೊತ್ತಿರುತ್ತದೆ. ಅಲ್ಲದೆ, ನಡೆದ ಪ್ರತಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವ್ಯಕ್ತಿತ್ವವೂ ನನ್ನದಲ್ಲ. ಏನು ಕಾಣುತ್ತಿದೆಯೋ ಅದಕ್ಕಿಂತಲೂ ಭಿನ್ನವಾದ ಕತೆ ಇರುತ್ತದೆ’ ಎಂದು ಹೇಳಿದ್ದರು ರಶ್ಮಿಕಾ ಮಂದಣ್ಣ. ಮುಂದುವರೆದು, ‘ನನ್ನ ಖಾಸಗಿ ಜೀವನದ ಬಗ್ಗೆ ಜನ ಏನು ಹೇಳುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಆದರೆ ನನ್ನ ವೃತ್ತಿ ಜೀವನದ ಬಗ್ಗೆ ಏನು ಹೇಳುತ್ತಾರೆ ಎನ್ನುವುದು ಮುಖ್ಯ. ಅಂಥಹಾ ಸಲಹೆಗಳನ್ನು ಸ್ವೀಕರಿಸಿ ನಾನು ಅವನ್ನು ಅಳವಡಿಸಿಕೊಳ್ಳುತ್ತೇನೆ. ಮಿಕ್ಕಿದ್ದನ್ನು ಬಿಟ್ಟು ಮುಂದೆ ಹೋಗುತ್ತೇನೆ’ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.
ಇದನ್ನೂ ಓದಿ:ರಶ್ಮಿಕಾ ಮಂದಣ್ಣರ ಈ ಹಾಟ್ ಅವತಾರ ಹಿಂದೆಂದೂ ನೋಡಿರಲಾರಿರಿ
‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ನಟನೆಗೆ ಕಾಲಿರಿಸಿದರು. ಅದೇ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡರು. ಆದರೆ ನಿಶ್ಚಿತಾರ್ಥ ಮುರಿದುಕೊಂಡು ವೃತ್ತಿಯ ಮೇಲೆ ಗಮನ ಹರಿಸಿದರು. ಇದೇ ಕಾರಣಕ್ಕೆ ರಿಷಬ್ ಶೆಟ್ಟಿಗೆ ಮೊದಲಿನಿಂದಲೂ ರಶ್ಮಿಕಾ ಮೇಲೆ ವಿಪರೀತ ಸಿಟ್ಟು. ಈಗಲೂ ಸಹ ಕೆಲ ಸಂದರ್ಶನಗಳಲ್ಲಿ ರಶ್ಮಿಕಾ ಹೆಸರು ಹೇಳದೆ ಪರೋಕ್ಷವಾಗಿ ಟಾಂಗ್ ಕೊಡುತ್ತಲೇ ಇರುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Thu, 9 October 25




