‘ಸಿನಿಮಾ ನೋಡಿ ಮಜಾ ಬಂತು’; ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಮೆಚ್ಚುಗೆ

|

Updated on: Jul 28, 2023 | 1:21 PM

Rocky Aur Rani Kii Prem Kahaani Twitter Review: ಕರಣ್ ಜೋಹರ್ ಅವರದ್ದೇ ನಿರ್ದೇಶನ ಹಾಗೂ ನಿರ್ಮಾಣ ಇರುವುದರಿಂದ ಅವರು ಮತ್ತಷ್ಟು ಅದ್ದೂರಿಯಾಗಿ ಸಿನಿಮಾ ಮಾಡಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಟ್ರೇಲರ್ ನೋಡಿದವರಿಗೆ ಇದು ಮನವರಿಕೆ ಆಗಿತ್ತು

‘ಸಿನಿಮಾ ನೋಡಿ ಮಜಾ ಬಂತು’; ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಮೆಚ್ಚುಗೆ
ರಣವೀರ್​-ಆಲಿಯಾ
Follow us on

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Kii Prem Kahaani Movie) ಸಿನಿಮಾ ಇಂದು (ಜುಲೈ 28) ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್​ ಹಾಗೂ ಆಲಿಯಾ ಭಟ್ (Alia Bhatt) ಅವರು ಒಟ್ಟಾಗಿ ನಟಿಸಿದ್ದಾರೆ. ಹಲವು ವರ್ಷಗಳ ಬಳಿಕ ಕರಣ್ ಜೋಹರ್ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಚಿತ್ರ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಈ ಚಿತ್ರದಿಂದ ರಣವೀರ್ ಸಿಂಗ್, ಆಲಿಯಾಗೆ ಮತ್ತೊಂದು ಗೆಲುವು ಸಿಗುವ ನಿರೀಕ್ಷೆ ಇದೆ.

ಕರಣ್ ಜೋಹರ್ ಅವರು ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಎತ್ತಿದ ಕೈ. ಅವರ ಧರ್ಮ ಪ್ರೊಡಕ್ಷನ್​ನಿಂದ ಹಲವು ಸೂಪರ್ ಹಿಟ್ ಚಿತ್ರಗಳು ಬಂದಿವೆ. ಈಗ ಅವರದ್ದೇ ನಿರ್ದೇಶನ ಹಾಗೂ ನಿರ್ಮಾಣ ಇರುವುದರಿಂದ ಅವರು ಮತ್ತಷ್ಟು ಅದ್ದೂರಿಯಾಗಿ ಸಿನಿಮಾ ಮಾಡಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಟ್ರೇಲರ್ ನೋಡಿದವರಿಗೆ ಇದು ಮನವರಿಕೆ ಆಗಿತ್ತು. ಹೀಗಾಗಿ, ಅನೇಕರು ಹೋಗಿ ಸಿನಿಮಾ ನೋಡಿದ್ದಾರೆ.

‘ದೊಡ್ಡ ಪರದೆಯಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ನೋಡೋಕೆ ಥ್ರಿಲ್ ಆಗಿದೆ. ಸಿನಿಮಾ ನಿಜಕ್ಕೂ ಅದ್ಭುತವಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಈ ಸಿನಿಮಾ ಚೆನ್ನಾಗಿದೆ. ಆದರೆ, ಒಂದು ಹಾಡನ್ನು ಹೊರತುಪಡಿಸಿ ಮತ್ತಾವುದೇ ಒಳ್ಳೆಯ ಹಾಡು ಇದರಲ್ಲಿ ಇಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇದೊಂದು ಟಿಪಿಕಲ್ ಬಾಲಿವುಡ್ ಸಿನಿಮಾ ಎಂದು ಕರೆದಿದ್ದಾರೆ.

ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅವರು ‘ಗಲ್ಲಿ ಬಾಯ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಆ ಬಳಿಕ ಇವರು ಒಟ್ಟಾಗಿ ನಟಿಸಿದ ಸಿನಿಮಾ ಇದು ಎಂಬ ಕಾರಣಕ್ಕೂ ನಿರೀಕ್ಷೆ ಸೃಷ್ಟಿ ಆಗಿತ್ತು. ಇವರ ಕೆಮಿಸ್ಟ್ರಿ ಅನೇಕರಿಗೆ ಇಷ್ಟ ಆಗಿದೆ. ಈ ಸಿನಿಮಾ ಮೊದಲ ದಿನ ಎಷ್ಟು ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಅಷ್ಟು ದೊಡ್ಡ ಮಟ್ಟದಲ್ಲಿ ಯಾವ ಸಿನಿಮಾ ಕೂಡ ಗಳಿಕೆ ಮಾಡಿಲ್ಲ. ಹೀಗಾಗಿ, ‘ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಗಳಿಕೆ 300 ಕೋಟಿ ರೂಪಾಯಿ ದಾಟಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ