ಗಂಧದ ಮರ ಕಳ್ಳಸಾಗಣೆಯ ಕಥೆ ಹೇಳುವ ‘ಕಾರ್ಗಲ್ ನೈಟ್ಸ್’​; ಭರವಸೆ ಮೂಡಿಸಿದ ಟ್ರೇಲರ್

| Updated By: Digi Tech Desk

Updated on: Oct 16, 2021 | 10:49 AM

Kargal Nights: ಕರ್ನಾಟಕದ ಮಲೆನಾಡು ಭಾಗದಲ್ಲಿ ಗಂಧದ ಮರ ಹೇರಳವಾಗಿತ್ತು. ಆದರೆ, ದುಡ್ಡಿನ ಆಸೆಗೆ ಬಿದ್ದು ಅನೇಕರು ಮರವನ್ನು ಕಳ್ಳಸಾಗಣೆ ಮಾಡಿದ್ದಾರೆ. ಈಗ ಇದೇ ಕಥೆ ಆಧರಿಸಿ ಸಿನಿಮಾ ಸಿದ್ಧಗೊಂಡಿದೆ.

ಗಂಧದ ಮರ ಕಳ್ಳಸಾಗಣೆಯ ಕಥೆ ಹೇಳುವ ‘ಕಾರ್ಗಲ್ ನೈಟ್ಸ್’​; ಭರವಸೆ ಮೂಡಿಸಿದ ಟ್ರೇಲರ್
ಕಾರ್ಗಲ್​ ನೈಟ್​
Follow us on

ನೈಜ ಕಥೆ ಆಧರಿಸಿ ಈಗಾಗಲೇ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಇದರಲ್ಲಿ ಅನೇಕ ಸಿನಿಮಾಗಳು ಯಶಸ್ವಿಯಾಗಿವೆ. ಅದೇ ರೀತಿ, ಈಗ ನಿರ್ದೇಶಕ ದೇವರಾಜ್​ ಪೂಜಾರಿ ಅವರು 90ರ ದಶಕದಲ್ಲಿ ಸಾಗರ ತಾಲ್ಲೂಕಿನ ಕಾರ್ಗಲ್​​ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಇದರಲ್ಲಿ ಬರುವ ಕೆಲ ಪಾತ್ರಗಳು ಘಟನೆ ನಡಯುವ ಸಂದರ್ಭದಲ್ಲಿ ಇದ್ದವರೇ ಅನ್ನೋದು ವಿಶೇಷ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಕರ್ನಾಟಕದ ಮಲೆನಾಡು ಭಾಗದಲ್ಲಿ ಗಂಧದ ಮರ ಹೇರಳವಾಗಿತ್ತು. ಆದರೆ, ದುಡ್ಡಿನ ಆಸೆಗೆ ಬಿದ್ದು ಅನೇಕರು ಮರವನ್ನು ಕಳ್ಳಸಾಗಣೆ ಮಾಡಿದ್ದಾರೆ. ಹೀಗಾಗಿ, ಗಂಧದ ಮರ ಇತ್ತೀಚೆಗೆ ಅಪರೂಪವಾಗಿದೆ. ಈಗ ಇದೇ ಕಳ್ಳಸಾಗಣೆ ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ಈ ಮೂಲಕ ಗಂಧದ ಮರಗಳು ಹೇಗೆ ಅವಸಾನದ ಹಂತಕ್ಕೆ ಬಂದವು ಎಂಬುದರ ಚಿತ್ರರಣ ಸಿಗಲಿದೆ.

ಸಿನಿಮಾದಲ್ಲಿ ಏನಿರಲಿದೆ ಎನ್ನುವ ವಿಚಾರಗಳನ್ನು ಟ್ರೇಲರ್ ಕಟ್ಟಿಕೊಟ್ಟಿದೆ. ಇಡೀ ಸಿನಿಮಾ ಸಸ್ಪೆನ್ಸ್​ ಹಾಗೂ ಥ್ರಿಲ್ಲರ್​ನಿಂದ ಕೂಡಿರಲಿದೆ ಎನ್ನುವುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಸಾಗರ ತಾಲೂಕು ಹಾಗೂ ಕಾರ್ಗಲ್​ನಲ್ಲಿ ಸಿಕ್ಕ ಮಾಹಿತಿ ಆಧರಿಸಿಯೇ ಈ ಸಿನಿಮಾ ಸಿದ್ಧಗೊಂಡಿದೆ. ಸಿನಿಮಾದಲ್ಲಿ ಪಾತ್ರದ ಹೆಸರುಗಳನ್ನು ಬದಲಿಸಲಾಗಿದೆ.

ಆರಂಭದಲ್ಲಿ ಇದನ್ನು ವೆಬ್​ ಸೀರಿಸ್​ ರೀತಿಯಲ್ಲಿ ತೆರೆಮೇಲೆ ತರುವ ಆಲೋಚನೆ ಚಿತ್ರತಂಡದ್ದಾಗಿತ್ತು. ಆದರೆ, ಈಗ ಸಿನಿಮಾ ಮೂಲಕ ಚಿತ್ರಮಂದಿರದಲ್ಲಿ ರಿಲೀಸ್​ ಮಾಡುವ ನಿರ್ಧಾರಕ್ಕೆ ಬಂದಿದೆ. ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಎನ್. ಮಂಜುನಾಥ್ ಮತ್ತು ಜೆ.ಎನ್. ಪ್ರದೀಪ್ ಜಂಟಿಯಾಗಿ ‘ಕಾರ್ಗಲ್ ನೈಟ್ಸ್’ ನಿರ್ಮಿಸಿದ್ದಾರೆ. ಹರ್ಶಿಲ್ ಕೌಶಿಕ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ರಾಗ್ ಯು.ಆರ್.ಎಸ್., ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಸುಚನ್​ ಶೆಟ್ಟಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ದೇವರಾಜ್ ಪೂಜಾರಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ಕೋಟಿಗೊಬ್ಬ 3’ ವಿರುದ್ಧ ಷಡ್ಯಂತ್ರ ಆಗಿದೆ; ‘ಸಲಗ’ ತಂಡ ಇದರಲ್ಲಿ ಭಾಗಿ ಆಗಿಲ್ಲ: ಜಾಕ್​ ಮಂಜು ಸ್ಪಷ್ಟನೆ

Kotigobba 3 Movie Review: ಕೋಟಿಗೊಬ್ಬನ ಅದ್ದೂರಿತನದಲ್ಲಿ ಒಂದಷ್ಟು ಮಿಂಚಿಂಗ್​, ಮತ್ತೊಂದಿಷ್ಟು ಮಿಸ್ಸಿಂಗ್​

Published On - 8:04 pm, Fri, 15 October 21