Karthik Mahesh: ಕನ್ನಡದ ಖ್ಯಾತ ನಿರ್ದೇಶಕನ ಜೊತೆ ಸಿನಿಮಾ ಘೋಷಿಸಿದ ಕಾರ್ತಿಕ್ ಮಹೇಶ್

ಬಿಗ್ ಬಾಸ್ ಕನ್ನಡ ವಿನ್ನರ್ ಕಾರ್ತಿಕ್ ಮಹೇಶ್ ಅವರು ಸಿಂಪಲ್ ಸುನಿ ನಿರ್ದೇಶನದ ಹೊಸ ಚಿತ್ರ 'ರಿಚಿ ರಿಚ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುನಿ ಅವರೇ ಕಥೆ ಬರೆದಿರುವ ಈ ಚಿತ್ರದಲ್ಲಿ ಕಾರ್ತಿಕ್ ಶ್ರೀಮಂತನಾಗುವ ಕನಸು ಕಾಣುವ ರಿದ್ದೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ

Karthik Mahesh: ಕನ್ನಡದ ಖ್ಯಾತ ನಿರ್ದೇಶಕನ ಜೊತೆ ಸಿನಿಮಾ ಘೋಷಿಸಿದ ಕಾರ್ತಿಕ್ ಮಹೇಶ್
ಕಾರ್ತಿಕ್ ಮಹೇಶ್

Updated on: Feb 04, 2025 | 7:00 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ಒಂದಾದ ಬಳಿಕ ಒಂದರಂತೆ ಸಿನಿಮಾ ಘೋಷಿಸುತ್ತಿದ್ದಾರೆ. ಈ ಮೊದಲು ಅವರು ‘ರಾಮರಸ’ ಹೆಸರಿನ ಚಿತ್ರ ಘೋಷಿಸಿದ್ದರು. ಈಗ ಕನ್ನಡದ ಖ್ಯಾತ ನಿರ್ದೇಶಕನ ಜೊತೆ ಕಾರ್ತಿಕ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ‘ರಿಚಿ ರಿಚ್’ ಎನ್ನುವ ಟೈಟಲ್ ಇಡಲಾಗಿದೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ.

ಕನ್ನಡದಲ್ಲಿ ಹಲವು ಸದಭಿರುಚಿ ಸಿನಿಮಾಗಳನ್ನು ನೀಡಿದವರು ಸಿಂಪಲ್ ಸುನಿ. ಅವರ ನಿರ್ದೇಶನದ ಹಲವು ಚಿತ್ರಗಳು ಹಿಟ್ ಆಗಿವೆ. ಇಡೀ ಕುಟುಂಬ ಕುಳಿತು ನೋಡುವ​ ಚಿತ್ರಗಳನ್ನು ನಿರ್ದೇಶನ ಮಾಡುವುದರಲ್ಲಿ ಅವರು ಎತ್ತಿದ ಕೈ. ಅವರ ಜೊತೆ ಕಾರ್ತಿಕ್ ಮಹೇಶ್ ಕೈ ಜೋಡಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ‘ರಿಚಿ ರಿಚ್’ ಚಿತ್ರಕ್ಕೆ ಸುನಿ ಅವರೇ ಕಥೆ ಬರೆದಿದ್ದಾರೆ. ಈ ಚಿತ್ರಕ್ಕೆ ಅರವಿಂದ್ ವೆಂಕಟ್ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ‘ಎವಿಆರ್​ ಎಂಟರ್​ಟೇನ್​ಮೆಂಟ್’ ನಿರ್ಮಾಣ ಸಂಸ್ಥೆ ಆರಂಭಿಸಿರೋ ಅವರಿಗೆ ಇದು ನಿರ್ಮಾಣದಲ್ಲಿ ಮೊದಲ ಅನುಭವ.

‘ರಿಚಿ ರಿಚ್’ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಟೈಟಲ್ ಜೊತೆ ಕಾರ್ತಿಕ್ ಲುಕ್ ಕೂಡ ರಿವೀಲ್ ಆಗಿದೆ. ಅವರು ಚೆಸ್ ಆಡುತ್ತಿರುವ ರೀತಿಯಲ್ಲಿ ಪೋಸ್ಟರ್ ಇದೆ. ಸುನಿ ನಿರ್ಮಾಣದ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ‘ರಿಚಿ’ ಹೆಸರಿನ ಪಾತ್ರ ಇತ್ತು. ಈ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾದ ಟೈಟಲ್ ಆರಂಭ ಆಗಿದೆ.

ರಿದ್ದೇಶ್ ಚಿನ್ನಯ್ಯ ಅನ್ನೋದು ಕಥಾ ನಾಯಕನ ಹೆಸರು. ಇದನ್ನು ಶಾರ್ಟ್ ಆಗಿ ಆತ ರಿಚಿ ಎಂದು ಮಾಡಿಕೊಂಡಿದ್ದಾನೆ. ಇವನು ಶ್ರೀಮಂತ ಆಗುವುದು ಹೇಗೆಂದು ಕನಸು ಕಾಣುತ್ತಿದ್ದಾನೆ. ಆ ರೀತಿಯಲ್ಲಿ ಸಿನಿಮಾದ ಕಥೆ ಸಾಗಲಿದೆ. ಚಿತ್ರದ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ಕಾರು ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ಗೆ ಗೆಳೆಯರಿಂದ ಆಗ್ತಿರೋ ಸಮಸ್ಯೆ ಒಂದೆರಡಲ್ಲ

ಈ ಚಿತ್ರದ ಬಗ್ಗೆ ಸದ್ಯಕ್ಕೆ ಇರೋ ಮಾಹಿತಿ ಇಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಚಾರಗಳನ್ನು ತಂಡ ತೆರೆದಿಡಲಿದೆ. ಕಾರ್ತಿಕ್ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:59 am, Tue, 4 February 25