‘ಎಷ್ಟೂ ಅಂತ ತಡ್ಕೋತಾರೆ?’; ಕೊಲೆ ಕೇಸ್​ನಲ್ಲಿ ದರ್ಶನ್​ನ ಬೆಂಬಲಿಸಿ ಮಾತನಾಡಿದ ಪರಭಾಷಾ ನಟಿ

‘ಸೆಲೆಬ್ರಿಟಿಗಳಿಗೆ ಅಶ್ಲೀಲ ಮೆಸೇಜ್ ಕಳುಹಿಸುವ ಹಕ್ಕನ್ನು ಸಾರ್ವಜನಿಕರಿಗೆ ನೀಡಿದ್ಯಾರು? ದರ್ಶನ್ ಶಾರ್ಟ್ ಟೆಂಪರ್ ವ್ಯಕ್ತಿ. ಆ ವ್ಯಕ್ತಿಗೆ ದರ್ಶನ್ ಹಾಗೂ ಅವರ ಅಭಿಮಾನಿಗಳು ಹೊಡೆದು ಪಾಠ ಕಲಿಸಬೇಕು ಎಂದುಕೊಂಡಿದ್ದರೇನೋ. ಈ ವೇಳೆ ಮೃತಪಟ್ಟಿದ್ದಾನೆ’ ಎಂದಿದ್ದಾರೆ ಕಸ್ತೂರಿ ಶಂಕರ್.

‘ಎಷ್ಟೂ ಅಂತ ತಡ್ಕೋತಾರೆ?’; ಕೊಲೆ ಕೇಸ್​ನಲ್ಲಿ ದರ್ಶನ್​ನ ಬೆಂಬಲಿಸಿ ಮಾತನಾಡಿದ ಪರಭಾಷಾ ನಟಿ
‘ಎಷ್ಟೂ ಅಂತ ತಡ್ಕೋತಾರೆ?’; ಕೊಲೆ ಕೇಸ್​ನಲ್ಲಿ ದರ್ಶನ್​ನ ಬೆಂಬಲಿಸಿ ಮಾತನಾಡಿದ ಪರಭಾಷಾ ನಟಿ
Follow us
ರಾಜೇಶ್ ದುಗ್ಗುಮನೆ
|

Updated on: Jun 17, 2024 | 7:43 AM

ರೇಣುಕಾ ಸ್ವಾಮಿ (Renuka Swami) ಕೊಲೆ ಕೇಸ್ ದಕ್ಷಿಣ ಭಾರತಾದ್ಯಂತ ಸೆನ್ಸೇಷನ್ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣ ಆಗಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಕೊಲೆ ಕೇಸ್​ನಲ್ಲಿ ಅವರು ಎರಡನೇ ಆರೋಪಿ ಆಗಿದ್ದಾರೆ. ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಒಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ದರ್ಶನ್ ಮಾಡಿದ್ದು ತಪ್ಪು ಎಂದು ಕೆಲವರು ಹೇಳಿದರೆ, ಅಭಿಮಾನಿಗಳು ದರ್ಶನ್ ಮಾಡಿದ್ದು ಸರಿ ಎನ್ನುತ್ತಿದ್ದಾರೆ. ಕನ್ನಡದಲ್ಲೂ ನಟಿಸಿರುವ ತೆಲುಗು ನಟಿ ಕಸ್ತೂರಿ ಶಂಕರ್ ಅವರು ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ.

ಐ ಡ್ರೀಮ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಕಸ್ತೂರಿ ಮಾತನಾಡಿದ್ದಾರೆ. ‘ಆತ (ರೇಣುಕಾ ಸ್ವಾಮಿ) ನಟಿಗೆ ಕಿರುಕುಳ ನೀಡುತ್ತಿದ್ದ. ಆತನಿಗೆ ಇದರ ಅಗತ್ಯ ಏನಿತ್ತು? ದರ್ಶನ್ ಮಾಡಿದ್ದು ತಪ್ಪೇ. ಆದರೆ, ಈ ರೀತಿ ಆದಾಗ ಇದನ್ನು ಹ್ಯಾಂಡಲ್​ ಮಾಡಬೇಕು? ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಅಶ್ಲೀಲ ಕಮೆಂಟ್ ಹಾಕುತ್ತಿದ್ದಾರೆ. ಹೀಗಿರುವಾಗ ಮೆಸೇಜ್ ಮಾಡೋದೇಕೆ? ದರ್ಶನ್ ವೈಯಕ್ತಿಕ ಬದುಕಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ನೋಡಿಕೊಳ್ಳೋಕೆ ಮೊದಲ ಪತ್ನಿ ಇದ್ದಾರೆ. ಇದು ಅವರ ವೈಕ್ತಿಕ ವಿಚಾರ’ ಎಂದಿದ್ದಾರೆ ಕಸ್ತೂರಿ. ದರ್ಶನ್ ಹಾಗೂ ವಿಜಯಲಕ್ಷ್ಮಿ ಮಧ್ಯೆ ಪವಿತ್ರಾ ಬಂದರು ಎನ್ನುವ ಕೋಪ ರೇಣುಕಾಸ್ವಾಮಿಗೆ ಇತ್ತು ಎನ್ನಲಾಗಿದೆ. ಹೀಗಾಗಿ, ಕಸ್ತೂರಿ ಈ ಮಾತನ್ನು ಹೇಳಿದ್ದಾರೆ.

‘ಸೆಲೆಬ್ರಿಟಿಗಳಿಗೆ ಅಶ್ಲೀಲ ಮೆಸೇಜ್ ಕಳುಹಿಸುವ ಹಕ್ಕನ್ನು ಸಾರ್ವಜನಿಕರಿಗೆ ನೀಡಿದ್ಯಾರು? ದರ್ಶನ್ ಶಾರ್ಟ್ ಟೆಂಪರ್ ವ್ಯಕ್ತಿ. ಆ ವ್ಯಕ್ತಿಗೆ ದರ್ಶನ್ ಹಾಗೂ ಅವರ ಅಭಿಮಾನಿಗಳು ಹೊಡೆದು ಪಾಠ ಕಲಿಸಬೇಕು ಎಂದುಕೊಂಡಿದ್ದರೇನೋ. ಈ ವೇಳೆ ಮೃತಪಟ್ಟಿದ್ದಾನೆ. ರಶ್ಮಿಕಾ ಮಂದಣ್ಣ ಅವರ ಮುಖವನ್ನು ಎಡಿಟ್ ಮಾಡಿ ಅವರಿಗೆ ಸಾಕಷ್ಟು ತೊಂದರೆ ಕೊಡಲಾಗಿದೆ. ಎಲ್ಲರೂ ಈ ರೀತಿ ಮಾಡುತ್ತಿದ್ದಾರೆ ಎಂದರೆ ಯಾರಿಗೂ ತಡೆದುಕೊಳ್ಳೋಕೆ ಆಗಲ್ಲ’ ಎಂದು ಕೋಪ ಹೊರ ಹಾಕಿದ್ದಾರೆ ಅವರು.

ಇದನ್ನೂ ಓದಿ: ‘ಮರ್ಡರ್​ನ ಆತುರದಲ್ಲಿ ಮಾಡಿರ್ತಾನೆ, ಆಮೇಲೆ ಕೊರಗುತ್ತಾನೆ’; ದರ್ಶನ್ ಹಳೆಯ ಸಂದರ್ಶನ ವೈರಲ್

‘ಉದ್ಯಮಿ, ರಾಜಕಾರಣಿಗಳಿಗೆ ಈ ರೀತಿ ಆದರೆ ಅದನ್ನು ಮಾಡಿದವನು ಕಾಣೆಯಾಗಿಬಿಡುತ್ತಾನೆ. ಆದರೆ, ಫಿಲ್ಮ್​ಸ್ಟಾರ್ಸ್​ಗೆ ಈ ರೀತಿ ಆದರೆ ಅವರು ಇದನ್ನು ತಡೆದುಕೊಳ್ಳಬೇಕು. ಎಷ್ಟು ಎಂದು ತಡೆದುಕೊಳ್ಳೋಕೆ ಆಗುತ್ತದೆ? ಒಮ್ಮೆ ಸಿಡಿಯುತ್ತಾರೆ. ಜನರು ಕೊಂಚ ಕರುಣೆ ತೋರಿಸಬೇಕು’ ಎಂದು ಅವರು ಕೋರಿದ್ದಾರೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣದಿಂದಲೇ ದರ್ಶನ್ ಅವರು ಸಿಡಿದೆದ್ದರು. ಅವರು ತಮ್ಮ ಗ್ಯಾಂಗ್ ಜೊತೆ ಸೇರಿ ರೇಣುಕಾ ಸ್ವಾಮಿಯನ್ನು ಹತ್ತೆ ಮಾಡಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್