AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮರ್ಡರ್​ನ ಆತುರದಲ್ಲಿ ಮಾಡಿರ್ತಾನೆ, ಆಮೇಲೆ ಕೊರಗುತ್ತಾನೆ’; ದರ್ಶನ್ ಹಳೆಯ ಸಂದರ್ಶನ ವೈರಲ್

ನಟ ದರ್ಶನ್ ಅವರು ಚಿತ್ರರಂಗದಲ್ಲಿ ಹಲವು  ವರ್ಷ ಕಳೆದಿದ್ದಾರೆ. ಅವರು ಕಷ್ಟದಿಂದ ಮೇಲೆ ಬಂದವರು. ಸಾಕಷ್ಟು ಜೀವನದ ಪಾಠವನ್ನು ಅವರು ಕಲಿತಿದ್ದಾರೆ. ಇದನ್ನು ಅವರುಗಳು ಅಭಿಮಾನಿಗಳ ಜೊತೆ, ಮಾಧ್ಯಮಗಳ ಜೊತೆ ಈ ಮೊದಲು ಹಂಚಿಕೊಂಡಿದ್ದರು. ಕೋಪದ ಕೈಗೊಂಬೆ ಆಗಬಾರದು ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು.

‘ಮರ್ಡರ್​ನ ಆತುರದಲ್ಲಿ ಮಾಡಿರ್ತಾನೆ, ಆಮೇಲೆ ಕೊರಗುತ್ತಾನೆ’; ದರ್ಶನ್ ಹಳೆಯ ಸಂದರ್ಶನ ವೈರಲ್
ದರ್ಶನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 17, 2024 | 7:08 AM

Share

ನಟ ದರ್ಶನ್ (Darshan) ಅವರು ಸದ್ಯ ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಅರೆಸ್ಟ್ ಆಗಿದ್ದಾರೆ. ದರ್ಶನ್ ಜೊತೆ ಪವಿತ್ರಾ ಗೌಡ ಸೇರಿ 19 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಈ ಮೊದಲು ಅವರನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಹೆಚ್ಚಿನ ತನಿಖೆಯ ಅಗತ್ಯ ಇರುವುದರಿಂದ ಹೆಚ್ಚುವರಿಯಾಗಿ 5 ದಿನಗಳ ಕಾಲ ಅವರನ್ನು ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ ದರ್ಶನ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಮರ್ಡರ್ ವಿಚಾರದ ಬಗ್ಗೆ ಮಾತನಾಡಿದ್ದರು.

ನಟ ದರ್ಶನ್ ಅವರು ಚಿತ್ರರಂಗದಲ್ಲಿ ಹಲವು  ವರ್ಷ ಕಳೆದಿದ್ದಾರೆ. ಅವರು ಕಷ್ಟದಿಂದ ಮೇಲೆ ಬಂದವರು. ಸಾಕಷ್ಟು ಜೀವನದ ಪಾಠವನ್ನು ಅವರು ಕಲಿತಿದ್ದಾರೆ. ಇದನ್ನು ಅವರುಗಳು ಅಭಿಮಾನಿಗಳ ಜೊತೆ, ಮಾಧ್ಯಮಗಳ ಜೊತೆ ಈ ಮೊದಲು ಹಂಚಿಕೊಂಡಿದ್ದರು. ಕೋಪದ ಕೈಗೊಂಬೆ ಆಗಬಾರದು ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

‘ಕೊಲೆ ಮಾಡುವವನು ಆತುರದಲ್ಲಿ ಮಾಡಿರುತ್ತಾನೆ. ಈಗ ಆ ಬಗ್ಗೆ ಕೊರಗುತ್ತಾ ಇರುತ್ತಾನೆ. ಸ್ವಲ್ಪ ಸಮಯ ಕೊಡಬೇಕಿತ್ತು, ಏನೋ ಪರಿಹಾರ ಕಂಡು ಹಿಡಿಯಬಹುದಿತ್ತಲ್ಲ ಅನಿಸುತ್ತಿರುತ್ತದೆ. ಇದೆಲ್ಲ ನಾನು ಜೀವನದಲ್ಲಿ ಕಲಿತುಕೊಂಡು ಬಂದ ಪಾಠ’ ಎಂದಿದ್ದರು ದರ್ಶನ್. ದರ್ಶನ್ ತಾವು ಕಲಿತ ಪಾಠವನ್ನೇ ಮರೆತರಾ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

ದರ್ಶನ್ ಅವರ ಈ ಹಿಂದಿನ ಹಲವು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ದರ್ಶನ್ ನಾನು ಸರಿ ಇಲ್ಲ ಎಂದೆಲ್ಲ ಹೇಳಿಕೊಂಡಿದ್ದರು. ಈ ವಿಡಿಯೋಗಳನ್ನು ಇಟ್ಟುಕೊಂಡು ದರ್ಶನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಮೊದಲು ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ಗೆ ತಗಡು ಎನ್ನುವ ಶಬ್ದ ಬಳಕೆ ಮಾಡಿದ್ದರು. ಆಗ ಉತ್ತರಿಸಿದ್ದ ಉಮಾತಿ, ‘ನಾನು ಈಗ ತಗಡು ಇರಬಹುದು. ಮುಂದೊಂದು ದಿನ ಚಿನ್ನದ ತಗಡಾಗುತ್ತೇನೆ. ಸಮಯ ಹೀಗೆಯೇ ಇರುವುದಿಲ್ಲ’ ಎಂದು ಅವರು ಹೇಳಿದ್ದರು. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗಬೇಕಾ? ಕಿಚ್ಚ ಸುದೀಪ್​ ಹೇಳಿದ್ದಿಷ್ಟು..

ಚಿತ್ರದುರ್ಗದ ರೇಣುಕಾ ಸ್ವಾಮಿ ಅವರು ನಟಿ ಹಾಗೂ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣಕ್ಕೆ ದರ್ಶನ್ ಹಾಗೂ ಅವರ ಗ್ಯಾಂಗ್ ಈ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಗೆದಷ್ಟು ಹೊಸ ಹೊಸ ವಿಚಾರಗಳು ಈ ಕೇಸ್​ನಲ್ಲಿ ಹೊರಗೆ ಬರುತ್ತಿವೆ. ಪವಿತ್ರಾ ಎ1 ಆರೋಪಿ ಆದರೆ, ದರ್ಶನ್ ಅವರು ಎ2 ಆರೋಪಿ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ