AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravichandran: ರವಿಚಂದ್ರನ್​ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್​ ಆಯ್ತು ‘ಕೆಡಿ’ ಚಿತ್ರದ ಹೊಸ ಪೋಸ್ಟರ್​; ಹೆಚ್ಚಿತು ನಿರೀಕ್ಷೆ

V Ravichandran Birthday: ‘ಕೆಡಿ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಯಾಕೆಂದರೆ ಈ ಸಿನಿಮಾದಲ್ಲಿ ರವಿಚಂದ್ರನ್​ ಲುಕ್​ ಭಿನ್ನವಾಗಿದೆ. ಇಂದು (ಮೇ 30) ಕ್ರೇಜಿ ಸ್ಟಾರ್​ ಜನ್ಮದಿನ. ಆ ಪ್ರಯುಕ್ತ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿದೆ.

Ravichandran: ರವಿಚಂದ್ರನ್​ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್​ ಆಯ್ತು ‘ಕೆಡಿ’ ಚಿತ್ರದ ಹೊಸ ಪೋಸ್ಟರ್​; ಹೆಚ್ಚಿತು ನಿರೀಕ್ಷೆ
ರವಿಚಂದ್ರನ್​
ಮದನ್​ ಕುಮಾರ್​
|

Updated on: May 30, 2023 | 12:53 PM

Share

ರವಿಚಂದ್ರನ್​ (V Ravichandran) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಗೆಬಗೆಯ ಪಾತ್ರಗಳಿಗೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಅವರು ಅಭಿನಯಿಸುತ್ತಿರುವ ‘ಕೆಡಿ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಯಾಕೆಂದರೆ ಈ ಸಿನಿಮಾದಲ್ಲಿ ಅವರ ಲುಕ್​ ಭಿನ್ನವಾಗಿದೆ. ಇಂದು (ಮೇ 30) ಕ್ರೇಜಿ ಸ್ಟಾರ್​ ಜನ್ಮದಿನ (V Ravichandran Birthday). ಆ ಪ್ರಯುಕ್ತ ‘ಕೆಡಿ’ ಸಿನಿಮಾದಿಂದ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಈ ಪೋಸ್ಟರ್​ ಮೂಲಕ ರವಿಚಂದ್ರನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಗುತ್ತಿದೆ. ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ. ‘ಕೆಡಿ’ ಸಿನಿಮಾ (KD Kannada Movie) ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಾಣಲಿದೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ. ಅರ್ಜುನ್​ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ. ತೆರೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಈ ಚಿತ್ರಕ್ಕೆ ಹೀರೋ. ಅವರ ವೃತ್ತಿಜೀವನಕ್ಕೆ ಇದು ಮಹತ್ವದ ಸಿನಿಮಾ ಆಗುವ ನಿರೀಕ್ಷೆ ಇದೆ.

‘ಕೆಡಿ’ ಚಿತ್ರತಂಡದಿಂದ ರವಿಚಂದ್ರನ್​ ಅವರ ಪೋಸ್ಟರ್​ ಬಿಡುಗಡೆ ಆಗಿದ್ದು ಇದೇ ಮೊದಲೇನೂ ಅಲ್ಲ. ಹೊಸ ವರ್ಷದ ಪ್ರಯುಕ್ತ ಜನವರಿ 1ರಂದು ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಕಪ್ಪು ಬಟ್ಟೆ, ಉದ್ದ ಕೂದಲು, ಕೂಲಿಂಗ್​ ಗ್ಲಾಸ್​, ಹಣೆಯಲ್ಲಿ ವಿಭೂತಿ.. ಹೀಗೆ ವಿಶೇಷ ಗೆಟಪ್​ನಲ್ಲಿ ರವಿಚಂದ್ರನ್​ ಅವರ ಪಾತ್ರ ಇರಲಿದೆ. ಸಿಕ್ಕಾಪಟ್ಟೆ ಗತ್ತಿನಲ್ಲಿ ಅವರು ಪೋಸ್​ ನೀಡಿದ್ದಾರೆ. ಈ ಪೋಸ್ಟರ್​ನಿಂದಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಮಾಸ್​ ಸಿನಿಮಾಗಳಿಂದ ಫೇಮಸ್​ ಆದವರು ‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ. ‘ಕೆಡಿ’ ಚಿತ್ರದಲ್ಲೂ ಅವರ ಮಾಸ್​ ಅವತಾರ ಮುಂದುವರಿಯಲಿದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ನೀಡಲಾಗಿತ್ತು. ರೆಟ್ರೋ ಕಾಲದ ಕಥೆ ಈ ಚಿತ್ರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ತಕ್ಕಂತೆಯೇ ರವಿಚಂದ್ರನ್​ ಅವರ ಲುಕ್​ ಮೂಡಿಬಂದಿದೆ. ಅಭಿಮಾನಿಗಳ ವಲಯದಲ್ಲಿ ಹೊಸ ಪೋಸ್ಟರ್​ ವೈರಲ್​ ಆಗುತ್ತಿದೆ.

View this post on Instagram

A post shared by Prem❣️s (@directorprems)

‘ಜೋಗಿ’ ಪ್ರೇಮ್​ ಅವರು ‘ಕೆಡಿ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಪ್ರೇಮ್​ ನಿರ್ದೇಶನದ ಸಿನಿಮಾ ಎಂದರೆ ಸಿನಿಪ್ರಿಯರಿಗೆ ನಿರೀಕ್ಷೆ ಇದ್ದೇ ಇರುತ್ತದೆ. ಅವರ ಜೊತೆ ರವಿಚಂದ್ರನ್​ ಕೈ ಜೋಡಿಸಿರುವುದು ಹೈಪ್​ ಹೆಚ್ಚಲು ಕಾರಣ ಆಗಿದೆ. ಕೆವಿಎನ್​ ಪ್ರೊಡಕ್ಷನ್ಸ್​ ಮೂಲಕ ‘ಕೆಡಿ’ ಸಿನಿಮಾ ಮೂಡಿಬರುತ್ತಿದೆ. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ರವಿಚಂದ್ರನ್​ ಅವರ ಲುಕ್​ ಸಖತ್​ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಅವರು ಅಣ್ಣಯ್ಯಪ್ಪ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ನನಗೆ ದುಡ್ಡು ಬೇಕು ಅನ್ನೋದು ಸಿನಿಮಾ ಮಾಡೋಕೆ’; ಚಿತ್ರರಂಗದ ಮೇಲೆ ರವಿಚಂದ್ರನ್​ಗೆ ಇದೆ ಅತೀವ ಪ್ರೀತಿ

ವಿ. ರವಿಚಂದ್ರನ್ ಅವರು ಹುಟ್ಟುಹಬ್ಬಕ್ಕೆ ಶುಭ ಕೋರಲು ಅನೇಕ ಅಭಿಮಾನಿಗಳು ಅವರ ನಿವಾಸದ ಮುಂದೆ ಕಾದಿದ್ದಾರೆ. ಆದರೆ ರವಿಚಂದ್ರನ್ ಅವರು ನಿವಾಸದಲ್ಲಿ ಇಲ್ಲ ಎನ್ನಲಾಗಿದೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ‘ಸಂಜೆವರೆಗೂ ಅವರಿಗಾಗಿ ಕಾಯ್ತೀವಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ಚಂದನವನದ ಅನೇಕರು ‘ಕ್ರೇಜಿ ಸ್ಟಾರ್​’ಗೆ ಶುಭಾಶಯ ತಿಳಿಸುತ್ತಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!