AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ದುಡ್ಡು ಬೇಕು ಅನ್ನೋದು ಸಿನಿಮಾ ಮಾಡೋಕೆ’; ಚಿತ್ರರಂಗದ ಮೇಲೆ ರವಿಚಂದ್ರನ್​ಗೆ ಇದೆ ಅತೀವ ಪ್ರೀತಿ

V. Ravichandran Birthday: ರವಿಚಂದ್ರನ್ ಮನೆ ಖಾಲಿ ಮಾಡಿದ, ದುಡ್ಡು ಕಳೆದುಕೊಂಡ ಎಂದೆಲ್ಲ ಹೇಳ್ತಾರೆ. ನಾನು ಇವತ್ತು ಹಣ ಕಳೆದುಕೊಂಡಿದ್ದಲ್ಲ, ಕಳೆದ 30 ವರ್ಷಗಳಿಂದ ದುಡ್ಡನ್ನು ಕಳೆದುಕೊಂಡೇ ಬರ್ತಿದೀನಿ ಎಂದಿದ್ದರು ರವಿಚಂದ್ರನ್.

‘ನನಗೆ ದುಡ್ಡು ಬೇಕು ಅನ್ನೋದು ಸಿನಿಮಾ ಮಾಡೋಕೆ’; ಚಿತ್ರರಂಗದ ಮೇಲೆ ರವಿಚಂದ್ರನ್​ಗೆ ಇದೆ ಅತೀವ ಪ್ರೀತಿ
ರವಿಚಂದ್ರನ್
ರಾಜೇಶ್ ದುಗ್ಗುಮನೆ
|

Updated on: May 30, 2023 | 10:23 AM

Share

ನಟ ವಿ. ರವಿಚಂದ್ರನ್ (Ravichandran) ಅವರು ಇಂದು (ಮೇ 30) 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅಭಿಮಾನಿಗಳು ಅವರ ಮನೆಯ ಎದುರು ಬಂದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ರವಿಚಂದ್ರನ್ ಅವರು ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿ ಅವರು ಕೈ ಸುಟ್ಟಿಕೊಂಡಿದ್ದೂ ಇದೆ. ಆದರೆ, ಅವರೆಂದೂ ಸಿನಿಮಾ ಕೃಷಿ ನಿಲ್ಲಿಸಿಲ್ಲ. ಈ ವಿಚಾರದ ಕುರಿತು ಅವರು ಒಮ್ಮೆ ಮಾತನಾಡಿದ್ದರು. ‘ನನಗೆ ರಾಯಲ್ ಆಗಿ ಬದುಕೋಕೆ ಹಣ ಬೇಡ, ರಾಯಲ್ ಆಗಿ ಸಿನಿಮಾ ಮಾಡೋಕೆ ಹಣ ಬೇಕು’ ಎಂದಿದ್ದರು.

ರವಿಚಂದ್ರನ್ ಅವರಿಗೆ ಚಿತ್ರರಂಗದ ಬಗ್ಗೆ ಅಪಾರ ಪ್ರೀತಿ ಇದೆ. ಇದನ್ನು ಅನೇಕ ವೇದಿಕೆ ಮೇಲೆ ಅವರು ತೋರಿಸಿದ್ದರು. ‘ರವಿಚಂದ್ರನ್ ಮನೆ ಖಾಲಿ ಮಾಡಿದ, ದುಡ್ಡು ಕಳೆದುಕೊಂಡ ಎಂದೆಲ್ಲ ಹೇಳ್ತಾರೆ. ನಾನು ಇವತ್ತು ಹಣ ಕಳೆದುಕೊಂಡಿದ್ದಲ್ಲ, ಕಳೆದ 30 ವರ್ಷಗಳಿಂದ ದುಡ್ಡನ್ನು ಕಳೆದುಕೊಂಡೇ ಬರ್ತಿದೀನಿ. ನಾನು ಕಳೆದುಕೊಂಡೇ ನಗ್ತಾ ಬಂದಿರೋದು. ನಾನು ದುಡ್ಡು ಕಳೆದುಕೊಂಡಿದ್ದು ನಿಮಗೋಸ್ಕರ. ನಿಮ್ಮ ಮನಸ್ಸು ಗೆಲ್ಲಲು ಎಲ್ಲವನ್ನೂ ಕಳೆದುಕೊಂಡಿದ್ದೀನಿ’ ಎಂದಿದ್ದರು ರವಿಚಂದ್ರನ್.

‘ನನಗೆ ಈ ಬಗ್ಗೆ ಬೇಸರ ಇಲ್ಲ. ಗೆಲ್ತೀನಿ ಅನ್ನೋ ಆವೇಶ ಇದೆಯಲ್ಲ ಅದು ಯಾವಾಗಲೂ ಕಡಿಮೆ ಆಗಿಲ್ಲ. ನಾನು ಯಾರಿಗೋ ಕಾಂಪಿಟೇಟರ್​ ಅಲ್ಲ. ನನ್ನನ್ನು ನಾನು ಗೆಲ್ಲಬೇಕಿದೆ. ನಾನು ದುಡ್ಡಿಗೋಸ್ಕರ ದುಡಿದಿಲ್ಲ. ನನಗೆ ದುಡ್ಡು ಬೇಡವೂ ಬೇಡ. ನನಗೆ ದುಡ್ಡು ಬೇಕು ಅನ್ನೋದು ಸಿನಿಮಾ ಮಾಡೋಕೆ. ಅದಕ್ಕೋಸರ ಇಲ್ಲಿ ಬಂದು ಕೂತಿದಿನಿ. ನಾನು ದುಡಿಯೋದು ರಾಯಲ್ ಆಗಿ ಬದುಕಬೇಕು ಎಂದಲ್ಲ, ರಾಯಲ್ ಆಗಿ ಸಿನಿಮಾ ಮಾಡಬೇಕು ಎಂದು’ ಎಂದಿದ್ದರು ರವಿಚಂದ್ರನ್.

ಇದನ್ನೂ ಓದಿ: ‘ನನಗೆ ವಯಸ್ಸಾಗಿದೆ ಎಂದು ತುಂಬ ಜಾಣತನದಿಂದ ಹೇಳಿದ್ರು’ ರವಿಚಂದ್ರನ್

‘ಸಿನಿಮಾ ಸೋತಿದೆ ಎಂದು ನನಗೆ ಬೇಸರ ಆಗಿಲ್ಲ. ನಿಮ್ಮನ್ನು ಮೆಚ್ಚಿಸಿಲ್ಲ ಎಂಬುದಷ್ಟೇ ಬೇಸರ. ನಿಮಗೆ ನನ್ನ ಸಿನಿಮಾಗೆ ನುಗ್ಗಿ ಅಭ್ಯಾಸ. ಆ ದಿನ ಮತ್ತೆ ಬರುತ್ತೆ. ಆ ಬಗ್ಗೆ ಭರವಸೆ ನೀಡುತ್ತೇನೆ. ನನ್ನ ಜೊತೆ ಇದ್ದವರು ಬೆಳೆದಿದ್ದಾರೆ. ಮಾತೆತ್ತಿದರೆ ರವಿಚಂದ್ರನ್ ಪ್ರೇಮಲೋಕದ ಬಗ್ಗೆ ಮಾತಾಡ್ತಾರೆ ಎಂದು ಅನೇಕರು ಟೀಕೆ ಮಾಡಿದ್ದಿದೆ. ಹುಟ್ಟಿಸಿದ ಅಪ್ಪ-ಅಮ್ಮನ ಬದಲಾಯಿಸೋಕೆ ಆಗುತ್ತಾ? ಆ ಸಿನಿಮಾ ನಮ್ಮನ್ನು ಇಲ್ಲಿವರೆಗೆ ತಂದು ಬಿಟ್ಟಿದೆ. ಆ ಸಿನಿಮಾ ಅಷ್ಟು ಕೆಲಸ ಮಾಡಿದೆ. ಆ ಸಿನಿಮಾ ನೋಡಿ ನಿಮ್ಮ ಅಪ್ಪ-ಅಮ್ಮ ಪ್ರೀತಿಸಿ ಕಲಿತಿರಬಹುದು’ ಎಂದು ಹೇಳಿದ್ದರು ರವಿಚಂದ್ರನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್