‘ನನ್ನ ಸಿನಿಮಾಗಳನ್ನೂ ನಾನು ನೋಡುವುದಿಲ್ಲ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ಅನಂತ್ ನಾಗ್

ಅನಂತ್ ನಾಗ್ ವೃತ್ತಿ ಬದುಕಿಗೆ ಐದು ದಶಕ ತುಂಬಿದೆ. ಈ ಅವಧಿಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಫಿಲ್ಮ್​ಫೇರ್, ರಾಜ್ಯ ಪ್ರಶಸ್ತಿ ಸೇರಿ ಅನೇಕ ಅವಾರ್ಡ್​ಗಳು ಅವರನ್ನು ಅರಸಿ ಬಂದಿವೆ.

‘ನನ್ನ ಸಿನಿಮಾಗಳನ್ನೂ ನಾನು ನೋಡುವುದಿಲ್ಲ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ಅನಂತ್ ನಾಗ್
ಅನಂತ್ ನಾಗ್
Follow us
ರಾಜೇಶ್ ದುಗ್ಗುಮನೆ
|

Updated on:May 30, 2023 | 7:52 AM

ನಟ ಅನಂತ್ ನಾಗ್ (Anant Nag) ಅವರು ಚಿತ್ರರಂಗಕ್ಕೆ ಬಂದು ಬರೋಬ್ಬರಿ 50 ವರ್ಷ ಕಳೆದಿದೆ. ಇಷ್ಟಾದರೂ ಅವರು ತಮ್ಮ ಸೇವೆ ನಿಲ್ಲಿಸಿಲ್ಲ. ಒಳ್ಳೊಳ್ಳೆಯ ಪಾತ್ರಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರು ಮಾಡಿರುವ ಪಾತ್ರಗಳು ಈಗಲೂ ಗಮನ ಸೆಳೆಯುವಂಥದ್ದು. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆದ ಬಳಿಕ ಕಲಾವಿದರು ಸಿನಿಮಾ ನೋಡುತ್ತಾರೆ. ತೆರೆಮೇಲೆ ತಮ್ಮ ಪಾತ್ರ ಹೇಗೆ ಮೂಡಿ ಬಂದಿದೆ ಎಂಬುದನ್ನು ವಿಮರ್ಶೆ ಮಾಡುತ್ತಾರೆ. ಆದರೆ, ಅನಂತ್​ ನಾಗ್ ಅವರು ಈ ರೀತಿ ಮಾಡೋದಿಲ್ಲ. ಅವರು ಸಿನಿಮಾಗಳನ್ನು ನೋಡುವುದೇ ಇಲ್ಲ.

1973ರಲ್ಲಿ ರಿಲೀಸ್ ಆದ ‘ಸಂಕಲ್ಪ’ ಸಿನಿಮಾ ಅನಂತ್ ನಾಗ್ ನಟನೆಯ ಮೊದಲ ಸಿನಿಮಾ. ಈ ಚಿತ್ರ ರಿಲೀಸ್ ಆಗಿ ಬರೋಬ್ಬರಿ 50 ವರ್ಷ ಕಳೆದಿದೆ. ಅದೇ ರೀತಿ ಅನಂತ್ ನಾಗ್ ವೃತ್ತಿ ಬದುಕಿಗೂ ಐದು ದಶಕ ತುಂಬಿದೆ. ಈ ಅವಧಿಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಫಿಲ್ಮ್​ಫೇರ್, ರಾಜ್ಯ ಪ್ರಶಸ್ತಿ ಸೇರಿ ಅನೇಕ ಅವಾರ್ಡ್​ಗಳು ಅವರನ್ನು ಅರಸಿ ಬಂದಿವೆ. ಈ ಮಧ್ಯೆ ಅವರು ತಾವು ಸಿನಿಮಾಗಳನ್ನೇ ನೋಡುವುದಿಲ್ಲ ಎನ್ನುವ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ಅನಂತ್ ನಾಗ್, ‘ನಾನು ಸಿನಿಮಾಗಳನ್ನು ನೋಡುವುದೇ ಇಲ್ಲ. ನಾನು ನಟಿಸಿದ ಚಿತ್ರಗಳನ್ನೂ ಅಷ್ಟೇ. ನಾನು ಮಾಡಿದ ಕೆಲಸದ ತೀರ್ಪನ್ನು ನಾನೇ ನೀಡಲು ಸಾಧ್ಯವಿಲ್ಲ. ಪ್ರೇಕ್ಷಕರು ನನ್ನ ನಟನೆ ಹೇಗಿದೆ ಎಂಬುದನ್ನು ಅಳೆಯುತ್ತಾರೆ. ಅದು ನನಗೆ ಬೇಕಾಗಿರುವುದು. ಒಂದು ಪಾತ್ರದ ಮೂಲಕ ತಿಂಗಳುಗಟ್ಟಲೆ ಬದುಕಿರುವ ನನಗೆ, ಚಲನಚಿತ್ರವನ್ನು ನೋಡುವ ಮೂಲಕ ಅದನ್ನು ಮರುಪರಿಶೀಲಿಸುವ ಅವಶ್ಯಕತೆಯಿಲ್ಲ’ ಎನ್ನುತ್ತಾರೆ ಅನಂತ್ ನಾಗ್.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಎವರ್​ಗ್ರೀನ್ ಹೀರೋ ಅನಂತ್ ನಾಗ್ ನಡೆದು ಬಂದ ಹಾದಿ; ವಿಶೇಷ ಸಂದರ್ಶನ ಇಲ್ಲಿದೆ

2022ರಲ್ಲಿ ಅನಂತ್ ನಾಗ್ ನಟನೆಯ ‘ಗಾಳಿಪಟ 2’, ‘ತಿಮ್ಮಯ್ಯ & ತಿಮ್ಮಯ್ಯ’ ‘ವಿಜಯಾನಂದ’, ‘ಮೇಡ್ ಇನ್ ಬೆಂಗಳೂರು’ ಸಿನಿಮಾಗಳು ತೆರೆಗೆ ಬಂದವು. ಈಗ ಅನಂತ್ ನಾಗ್ ಅವರು ‘ಮೈಸೂರು ಮಸಾಲ: ದಿ ಯುಎಫ್​ಒ ಇನ್ಸಿಡೆನ್ಸ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ರಾಜಕೀಯಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಅದು ನಿಜ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:33 am, Tue, 30 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ