ಅಭಿಷೇಕ್ ಅಂಬರೀಶ್ ಮದುವೆಗೆ ಬರ್ತಾರಾ ಪ್ರಧಾನಿ ಮೋದಿ?

Abishek-Aviva Marriage: ಅಂಬರಿಶ್ ಪುತ್ರ ಅಭಿಷೇಕ್ ಅಂಬರಿಶ್ ಹಾಗೂ ಅವಿವಾ ಬಿಡಪ ವಿವಾಹ ಕೆಲವೇ ದಿನಗಳಲ್ಲಿ ನಡೆಯಲಿದ್ದು ಆಹ್ವಾನ ಪತ್ರಿಕೆಯನ್ನು ನರೇಂದ್ರ ಮೋದಿಯವರಿಗೆ ನೀಡಲಾಗಿದೆ. ಪ್ರಧಾನಿಗಳು ಮದುವೆಗೆ ಬರುತ್ತಾರೆಯೇ?

ಅಭಿಷೇಕ್ ಅಂಬರೀಶ್ ಮದುವೆಗೆ ಬರ್ತಾರಾ ಪ್ರಧಾನಿ ಮೋದಿ?
ಅಭಿ-ಅವಿವಾ
Follow us
ಮಂಜುನಾಥ ಸಿ.
|

Updated on:May 29, 2023 | 6:12 PM

ಸ್ಯಾಂಡಲ್​ವುಡ್ (Sandalwood) ಮತ್ತೊಂದು ಅದ್ಧೂರಿ ಮದುವೆಗೆ ತಯಾರಾಗುತ್ತಿದೆ. ಅಂಬರೀಶ್ (Ambareesh) ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh), ಅವಿವಾ ಬಿಡಪ (Aviva Bidappa) ಜೊತೆ ವಿವಾಹ ನಿಶ್ಚಯವಾಗಿದ್ದು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಕೇಂದ್ರ ಹಾಗೂ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ವಿವಾಹ ಆಮಂತ್ರಣ ಪತ್ರಿಕೆ ವಿತರಣೆ ಮಾಡಲಾಗಿದೆ. ಸಂಸದೆಯಾಗಿರುವ ಸುಮಲತಾ ಅಂಬರೀಶ್, ಇತ್ತೀಚೆಗಷ್ಟೆ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ, ಮಗನ ಮದುವೆಗೆ ಬಿಜೆಪಿ ಪ್ರಮುಖರಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಇನ್ನು ಹಲವರನ್ನು ಆಹ್ವಾನಿಸಿದ್ದಾರೆ.

ಇಂದು (ಮೇ 29) ಅಂಬರಿಶ್ ಜನ್ಮದಿನವಾಗಿದ್ದು ಅಭಿಷೇಕ್ ಅಂಬರಿಶ್ ಹಾಗೂ ಸುಮಲತಾ ಅವರು ಅಂಬಿ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡಿದರು. ಅಭಿಮಾನಿಗಳೊಟ್ಟಿಗೆ ಕೇಕ್ ಕತ್ತರಿಸಿ ಖುಷಿ ಪಟ್ಟರು. ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಮದುವೆಗೆ ಪ್ರಧಾನಿ ಮೋದಿಯವರು ಬರುತ್ತಾರಾ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

”ದೇಶದ ಪ್ರಧಾನಿಗಳಾಗಿದ್ದರೂ ಸಹ ನಮಗೆ ಅವರು ಸಮಯಕೊಟ್ಟರು. ಐದು ನಿಮಿಷಗಳ ಕಾಲ ನಮ್ಮೊಟ್ಟಿಗೆ ಮಾತನಾಡಿದರು. ಹಲವು ವಿಚಾರ ವಿನಿಮಯ ಮಾಡಿದರು. ಮದುವೆ ಆಹ್ವಾನ ಪತ್ರಿಕೆ ನೀಡಿದಾಗ, ಮದುವೆಗೆ ಬರಲು ಪ್ರಯತ್ನ ಮಾಡುತ್ತೇನೆ ಎಂದು ಹಿಂದಿಯಲ್ಲಿ ಹೇಳಿದರು. ಅವರನ್ನು ಭೇಟಿಯಾದ ಎರಡೇ ನಿಮಿಷದಲ್ಲಿ ಗೊತ್ತಾಯಿತು, ಅವರ ಕನ್ನಡ ಹೇಗೋ ನನ್ನ ಹಿಂದಿ ಹಾಗೆಯೇ ಇದೆ ಎಂದು. ಆದರೂ ಹೇಗೋ ಅಡ್ಜಸ್ಟ್ ಮಾಡಿಕೊಂಡು ಪರಸ್ಪರ ಮಾತನಾಡಿದೆವು” ಎಂದರು ಅಭಿಷೇಕ್ ಅಂಬರಿಶ್.

ಮಗನ ಮದುವೆ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್, ”ನನಗೆ ತುಸು ಸಮಯ ಸಿಕ್ಕಿರುವುದು ಕಳೆದ ಎರಡು ವಾರಗಳಿಂದ ಮಾತ್ರವೇ. ಚುನಾವಣೆ ಇನ್ನಿತರೆ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದೆ. ಆದರೆ ನಮ್ಮ ಸಂಬಂಧಿಗಳು, ಆತ್ಮೀಯರು ಮದುವೆ ಕಾರ್ಯದಲ್ಲಿ ಜೊತೆಯಾಗಿದ್ದಾರೆ. ಮನೆಯಲ್ಲಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ. ಇನ್ನು ಮದುವೆ ಆಮಂತ್ರಣ ಪತ್ರಿಕೆಯನ್ನು ಬಹುತೇಕ ಎಲ್ಲರಿಗೂ ಈಗಾಗಲೇ ನೀಡಿದ್ದೇವೆ. ಅಂಬರೀಶ್ ಅವರದ್ದು ದೊಡ್ಡ ಬಳಗ ಹಾಗಾಗಿ ಎಲ್ಲರಿಗೂ ಆಹ್ವಾನ ಪತ್ರಿಕೆ ನೀಡುತ್ತಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ:Aviva-Abhishek: ನವಜೋಡಿ ಅವಿವಾ ಬಿದ್ದಪ್ಪ-ಅಭಿಷೇಕ್ ಅಂಬರೀಶ್​ರ ಹೊಸ ಕ್ಯೂಟ್ ಚಿತ್ರಗಳು

ಮೋದಿ ಅವರನ್ನು ಮದುವೆಗೆ ಆಹ್ವಾನಿಸಿರುವ ಬಗ್ಗೆ ಮಾತನಾಡಿದ ಸುಮಲತಾ, ”ಮೋದಿ ಅವರನ್ನು ಆಹ್ವಾನಿಸಿರುವುದು ಖುಷಿ ಇದೆ. ಆಹ್ವಾನ ಸ್ವೀಕರಿಸಿದ್ದಕ್ಕ ಅವರು ಸಂತಸ ವ್ಯಕ್ತಪಡಿಸಿ, ನನ್ನ ಆಶೀರ್ವಾದ ಸದಾ ಇರಲಿದೆ ಎಂದಿದ್ದಾರೆ. ಅವರು ಮದುವೆಗೆ ಬರುತ್ತಾರೋ ಇಲ್ಲವೊ ಎಂಬ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ” ಎಂದಿದ್ದಾರೆ. ಜೂನ್ 5ರಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಅವರ ವಿವಾಹ ನಡೆಯಲಿದೆ. ಆ ಬಳಿಕ ಜೂನ್ 7 ರಂದು ಅದ್ಧೂರಿ ಆರತಕ್ಷತೆ ಕಾರ್ಯ ಸಹ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Mon, 29 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ