AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ: ಸ್ಯಾಂಡಲ್​ವುಡ್​ನವರು ಪ್ರತಿಕ್ರಿಯಿಸಿದ್ದು ಹೀಗೆ

Karnataka Assembly Election 2023: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ಬಂದಿದೆ. ಈ ಬಗ್ಗೆ ಸ್ಯಾಂಡಲ್​ವುಡ್​ನ ಕೆಲ ನಿರ್ದೇಶಕರು, ನಟರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ: ಸ್ಯಾಂಡಲ್​ವುಡ್​ನವರು ಪ್ರತಿಕ್ರಿಯಿಸಿದ್ದು ಹೀಗೆ
ಚಂದನವನ
ಮಂಜುನಾಥ ಸಿ.
|

Updated on:May 14, 2023 | 3:18 PM

Share

ಕರ್ನಾಟಕ ವಿಧಾನಸಭೆ ಚುನಾವಣೆ 2023ರ (Karnataka Assembly Election 2023) ಫಲಿತಾಂಶ ನಿನ್ನೆ (ಮೇ 13) ಹೊರಬಿದ್ದಿದ್ದು ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಕಾಂಗ್ರೆಸ್​ಗೆ ದೊಡ್ಡ ಬಹುಮತ ಪ್ರಾಪ್ತವಾಗಿದೆ. ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದರೆ ಬಿಜೆಪಿ ಪಕ್ಷವು 66 ಕ್ಷೇತ್ರಗಳಲ್ಲಷ್ಟೆ ಗೆಲ್ಲಲು ಶಕ್ತವಾಗಿದೆ. ಇದೀಗ ಹೊಸ ಸರ್ಕಾರ ಅಧಿಕಾರವಹಿಸಿಕೊಳ್ಳಲು ಸಜ್ಜಾಗಿರುವ ವೇಳೆಯಲ್ಲಿ ಸ್ಯಾಂಡಲ್​ವುಡ್​ನ ಹಲವು ನಿರ್ದೇಶಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್

”ಈಗ ಇಷ್ಟು. ಗೆದ್ದವರು ಬೀಗಬೇಡಿ. ಎಲ್ಲರನ್ನೂ ಒಳಗೊಳ್ಳಿ. ದ್ವೇಷ ಬೇಡ. ತಬ್ಭಲಿ ಜಾತಿಗಳ ಯೋಗ್ಯ ನಾಯಕರಿಗೆ ಸೂಕ್ತ ಜಾಗ ಕೊಡಿ. ಬ್ರಾಹ್ಮಣ, ವಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಮೇಲಿನವರನ್ನು ಅಧಿಕಾರದಿಂದ ದೂರವಿಡಿ. ಕನಿಷ್ಠ 10% ಭ್ರಷ್ಟಾಚಾರದಿಂದಲಾದರೂ ದೂರವಿರಿ. ಸೋತವರು ಆತ್ಮಾವಲೋಕನ ಮಾಡಿಕೊಳ್ಳಿ. ಗೆದ್ದವರು ಭಯಂಕರ ವಿನಯವಂತರಾಗಿರಿ” ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.

ನಟ ದುನಿಯಾ ವಿಜಯ್

”ಚುನಾವಣೆ ಮುಗಿದು ಫಲಿತಾಂಶವೂ ಬಂದಾಯಿತು. ಇನ್ನೇನಿದ್ರು ಹೊಸ ಸರ್ಕಾರದ ಆಟ. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಎಲ್ಲರ ಬದುಕು ಅತಂತ್ರವಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಕರುನಾಡಿನ ಜನ ಸಂಪೂರ್ಣ ಬಹುಮತವನ್ನು ಒಂದು ಪಕ್ಷಕ್ಕೆ ನೀಡಿ ತಾವು ಪ್ರಜ್ಞಾವಂತರು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗೆದ್ದವರಿಗೆಲ್ಲ ಶುಭಾಶಯಗಳು, ಸೋತವರು ಆತ್ಮ‌ ವಿಮರ್ಶೆ ಮಾಡಿಕೊಳ್ಳವ ಕಾಲ. ಸಂಪೂರ್ಣ ಬಹುಮುತ ಪಡೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯಗಳು. ಸಾಮಾನ್ಯ ಜನ ನೆಮ್ಮದಿಯಿಂದ ಜೀವನ ನಡೆಸುವಂತೆ ಉತ್ತಮ ಆಡಳಿತ ನೀಡಿ” ಎಂದಿದ್ದಾರೆ ನಟ ದುನಿಯಾ ವಿಜಯ್.

ಪ್ರಕಾಶ್ ರೈ

ಧರ್ಮಾಂಧತೆ ಹಾಗೂ ದ್ವೇಷವನ್ನು ಒದ್ದು ಹೊರಗೆ ಓಡಿಸಿದ ಕರ್ನಾಟಕದ ಜನತೆಗೆ ಧನ್ಯವಾದ. ಚಕ್ರವರ್ತಿ ಬತ್ತಲಾಗಿದ್ದಾನೆ” ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಜೊತೆಗೆ ಬಿಜೆಪಿ ಮೂಟೆಗಳನ್ನು ಬಂಡಿಯ ಏರಿಕೊಂಡು ಬೆನ್ನುಹಾಕಿ ಹೋಗುತ್ತಿರುವ ಯೋಗಿ ಆದಿತ್ಯನಾಥ್ ಹಾಗೂ ಮೋದಿಯ ಚಿತ್ರವನ್ನು ಪ್ರಕಾಶ್ ರೈ ಹಂಚಿಕೊಂಡಿದ್ದಾರೆ.

ಸಿಂಪಲ್ ಸುನಿ

ಮಡಚಿದ್ದ ಕೈ ಮೇಲೇದ್ದಿದೆ..

ಅರಳಿದ ತಾವರೆ ಮುದುಡಿದೆ…

ತೆನೆ ಹೊತ್ತ ಮಹಿಳೆಗೆ ಕಣವಿಲ್ಲ..

ಪ್ರಜೆಗಳಿಗೆ ರಾಜಕೀಯ ನೆಡೆ ಬೇಕು..

ಪ್ರಜಾಕೀಯ ನುಡಿ ಬೇಕಿಲ್ಲ…

ಇತರೆಯವರನ್ನ ಕೇಳೋರಿಲ್ಲ…

ರೆಸಾರ್ಟ್ ರಾಜಾಕೀಯ ನೆಡೆಯೋಲ್ಲ..

ಸಾಮಾಜಿಕ ಜಾಲತಾಣ ನಿಜವಲ್ಲ..

ಯಾವುದೇ ಪಕ್ಷವಿರಲಿ..

ಕರ್ನಾಟಕ ಅಭಿವೃದ್ಧಿಯಾಗಲಿ…

ಶುಭಾಶಯಗಳು

ಎಂದು ಚುಟುಕಾಗಿ ಕವಿತೆ ಬರೆದಿದ್ದಾರೆ ನಿರ್ದೇಶಕ ಸಿಂಪಲ್ ಸುನಿ

ನಿರ್ದೇಶಕ ಮಂಸೋರೆ

ಬಸವಣ್ಣ ಹುಟ್ಟಿದ ನಾಡಿದು. Thank you ಕರ್ನಾಟಕ ಹಾಗೂ ಕರುನಾಡಿನ ಜನತೆಗೆ, ಅವರ ಜವಾಬ್ದಾರಿಯುತ ನಿರ್ಣಯಕ್ಕೆ. ಈ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಕೇವಲ 5 ವರ್ಷಗಳಿಗೆ ಮಾತ್ರ ಎನ್ನುವುದು ಆ ಪಕ್ಷದವರು ಮರೆಯದಿರಲಿ. ಜನಪರ, ಜನರ ಆಶಯಗಳಿಗೆ ಸ್ಪಂದಿಸದಿದ್ದರೆ, ಜನರೊಂದಿಗೆ ಸಂಯಮದಿಂದ ವರ್ತಿಸದಿದ್ದರೆ ಈ ಹಿಂದಿನ ಸರ್ಕಾರಕ್ಕೆ ಬಂದ ಫಲಿತಾಂಶವೇ ಮುಂದೆ ಕಾಂಗ್ರೆಸ್‌ಗು ಬರಬಹುದು ಎಂದು ನೆನಪಿನಲ್ಲಿರಿಸಿಕೊಳ್ಳಲಿ. ಜವಾಬ್ದಾರಿಯುತವಾಗಿ ಕರ್ನಾಟಕವನ್ನು ಮುನ್ನಡೆಸಲಿ. ಹೊಸ ಸರ್ಕಾರದ ಬಳಿ ಈಗಲೇ ಒಂದು ಬೇಡಿಕೆ, ದಯವಿಟ್ಟು ಎಲ್ಲಾ ಒಳ್ಳೆಯ ಕನ್ನಡ ಸಿನೆಮಾಗಳಿಗೆ ಸಂಪೂರ್ಣವಾಗಿ (ರಾಜ್ಯ ಸರ್ಕಾರದ ಪಾಲಿನದು) ಮನರಂಜನಾ ತೆರಿಗೆಯಿಂದ ವಿನಾಯಿತಿ ಕೊಡಿ. ಟಿಕೇಟ್ ರೇಟ್ ಕಡಿಮೆಯಾಗಿ ಥಿಯೇಟರ್ ಕಡೆಗೆ ಜನ ಬರುವಂತಾಗಲಿ” ಎಂದಿರುವವರು ನಿರ್ದೇಶಕ ಮಂಸೋರೆ.

ಪವನ್ ಒಡೆಯರ್

”ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ “ಡೊಳ್ಳು”ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು.ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ.ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ.ಕನ್ನಡಿಗರು ಮುಟ್ಟಾಳರಲ್ಲ. ಸಿದ್ದರಾಮಯ್ಯ ಸರ್ ಗೆ ಒಂದೇಒಂದು ಬಾರಿ ಕರೆ ಮಾಡಿದ್ದೆವು. “ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ” ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರುಕಡೆ ಹೆಮ್ಮೆ ಇಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ” ಎಂದು ಬಿಜೆಪಿ ಸರ್ಕಾರ ತೊಲಗಿದ್ದಕ್ಕೆ ಸಂತೋಶ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಪವನ್ ಒಡೆಯರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Sun, 14 May 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ