‘ಕೆಡಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಸಂಜಯ್ ದತ್ ಬೇಸರ

ಕೆಡಿ ಸಿನಿಮಾದ ಟೀಸರ್ ಲಾಂಚ್ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಮಾಡಿದ್ದಾರೆ ಮತ್ತು ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಜಯ್ ದತ್ ದಕ್ಷಿಣ ಭಾರತದ ಚಿತ್ರರಂಗದ ಪ್ಯಾಷನ್ ಅನ್ನು ಹೊಗಳಿ, ಬಾಲಿವುಡ್‌ನಲ್ಲಿ ಆ ಪ್ಯಾಷನ್ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.

‘ಕೆಡಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಸಂಜಯ್ ದತ್ ಬೇಸರ
ಸಂಜಯ್-ಧ್ರುವ

Updated on: Jul 11, 2025 | 7:39 AM

‘ಕೆಡಿ’ ಸಿನಿಮಾದ (KD Movie) ಟೀಸರ್ ಲಾಂಚ್ ಕಾರ್ಯಕ್ರಮ ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ನಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ‘ಜೋಗಿ’ ಪ್ರೇಮ್ ನಿರ್ದೇಶನ ಇದೆ. ಧ್ರುವ ಸರ್ಜಾ ಅವರು ಈ ಚಿತ್ರಕ್ಕೆ ಹೀರೋ. ಈ ಸಿನಿಮಾದ ಟೀಸರ್ ಲಾಂಚ್ ವೇಳೆ ಸಂಜಯ್ ದತ್ ಅವರು ದಕ್ಷಿಣ ಭಾರತ ಚಿತ್ರರಂಗವನ್ನು ಹೊಗಳಿದ್ದಾರೆ. ಜೊತೆಗೆ ಬಾಲಿವುಡ್​ನವರು ಸಿನಿಮಾ ಮೇಲಿರೋ ಪ್ಯಾಷನ್ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

‘ತೆಲುಗು ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿನಿಮಾ ಬಗ್ಗೆ ಪ್ಯಾಷನ್ ಇದೆ. ಆದರೆ, ಅದನ್ನು ಬಾಲಿವುಡ್ ಕಳೆದುಕೊಂಡಿದೆ. ನಾನು ನಂಬರ್​ನ ಬೆನ್ನು ಹತ್ತಿ ಹೋಗುತ್ತಿಲ್ಲ. ಒಳ್ಳೆಯ ಸಿನಿಮಾ ಮಾಡಬೇಕು. ನನಗೆ ಒಳ್ಳೆಯ ಸಿನಿಮಾಗಳು ಬಾಲಿವುಡ್​ನಲ್ಲಿ ಕಾಣಿಸುತ್ತಿಲ್ಲ’ ಎಂದು ಸಂಜಯ್ ದತ್ ಹೇಳಿದ್ದಾರೆ.

‘ಧರ್ಮೇಂದ್ರ, ಅಮಿತಾಭ್ ಬಚ್ಚನ್, ಸಂಜೀವ್ ಕುಮಾರ್, ದಿಲೀಪ್ ಕುಮಾರ್ ಮೊದಲಾದವರ ಜೊತೆ ನಾನು ನಟಿಸಿದ್ದೇನೆ. ಆಗಿನ ಕಾಲದಲ್ಲಿ ಕಥೆ ಹಾಗೂ ಚಿತ್ರಕಥೆಯೇ ಎಲ್ಲವೂ ಆಗಿತ್ತು. ಆದರೆ, ಇಂದು ಸಿನಿಮಾದ ಕಥೆ ಬರೆಯೋ ಬದಲು ನಂಬರ್​ಗಳನ್ನು (ಕಲೆಕ್ಷನ್) ಪೇಪರ್​ಮೇಲೆ ಬರೆಯಲಾಗುತ್ತಿದೆ. ಈ ಬದಲಾವಣೆ ನನಗೆ ಆತಂಕ ತಂದಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ
TRPಯಲ್ಲಿ ಇತಿಹಾಸ; ಮೊದಲ ವಾರ ಎರಡಂಕಿ ರೇಟಿಂಗ್ ಪಡೆದು ನಂಬರ್ 1 ಆದ ‘ಕರ್ಣ’
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ವಿಎಫ್​ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಇತ್ತೀಚೆಗೆ ಸಂಜಯ್ ದತ್​ಗೆ ಬಾಲಿವುಡ್​ನಿಂದ ಹೆಚ್ಚು ಆಫರ್​ಗಳು ಬರುತ್ತಿಲ್ಲ. ಈ ಕಾರಣಕ್ಕೆ ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ. ಈ ಮೊದಲು ಅವರು ಕ್ಯಾನ್ಸರ್​ನ ಗೆದ್ದು ಬಂದಿದ್ದಾರೆ. ಒಂದು ಕಾಲದಲ್ಲಿ ವಿವಿಧ ರೀತಿಯ ದುರಭ್ಯಾಸಕ್ಕೆ ಅವರು ಒಳಗಾಗಿದ್ದರು. ಆದರೆ, ಈಗ ಎಲ್ಲವನ್ನೂ ತೊರೆದು ಅವರು ಒಳ್ಳೆಯ ರೀತಿಯಲ್ಲಿ ಬದುಕುತ್ತಿದ್ದಾರೆ. ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡರು. ಇಲ್ಲಿಂದ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಯಿತು. ಇದಾದ ಬಳಿಕ ಹಲವು ದಕ್ಷಿಣದ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ‘ಕೆಡಿ’ ಸಿನಿಮಾ ಟೀಸರ್: ರಕ್ತದ ನದಿ, ಮಚ್ಚಿನ ಮೆರವಣಿಗೆ

‘ಕೆಡಿ’ ಸಿನಿಮಾಗೆ ಪ್ರೇಮ್ ನಿರ್ದೇಶನ ಇದೆ. ಧ್ರುವ ಸರ್ಜಾ ಜೊತೆ ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೂ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.